'ಅಸುರ' ಸಿನಿಮಾದ ಬ್ಲಾಕ್‌ ಟಿಕೆಟ್ ಮಾರಿದ್ದ ರವಿ ಡಿ. ಚನ್ನಣ್ಣನವರ್‌; ದಕ್ಷ ಅಧಿಕಾರಿಯ ಕಾಲೇಜು ಜೀವನ ಹೇಗಿತ್ತು?

ದಕ್ಷ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿರುವ ರವಿ ಡಿ. ಚನ್ನಣ್ಣನವರ್‌ ಅವರು, ಕರ್ತವ್ಯ ಪಾಲನೆ, ಪ್ರಾಮಾಣಿಕತೆಯಿಂದಲೇ ಹೆಸರು ಮಾಡಿದ್ದಾರೆ. ಅವರು ತಮ್ಮ ಕಾಲೇಜು ದಿನಗಳ ಬಗ್ಗೆ ಮಾತನಾಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.

'ಅಸುರ' ಸಿನಿಮಾದ ಬ್ಲಾಕ್‌ ಟಿಕೆಟ್ ಮಾರಿದ್ದ ರವಿ ಡಿ. ಚನ್ನಣ್ಣನವರ್‌; ದಕ್ಷ ಅಧಿಕಾರಿಯ ಕಾಲೇಜು ಜೀವನ ಹೇಗಿತ್ತು?
Linkup
ಐಪಿಎಸ್ ಅಧಿಕಾರಿ ಅವರು ಈಗಾಗಲೇ ತಮ್ಮ ಮಾತು, ನಡೆ, ಕರ್ತವ್ಯ ಪಾಲನೆ, ಪ್ರಾಮಾಣಿಕತೆಯಿಂದಲೇ ಹೆಸರು ಮಾಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಖಡಕ್ ಎನಿಸುವ ಅವರು, ಮಾತನಾಡುತ್ತಿದ್ದರೆ ಕೇಳುತ್ತಲೇ ಇರಬೇಕು ಎನಿಸುತ್ತದೆ. ಅಷ್ಟೊಂದು ಸೊಗಸಾಗಿ ಜೀವನ ಮೌಲ್ಯಗಳನ್ನು ತಮ್ಮ ಮಾತುಗಳಲ್ಲಿ ಹೇಳುತ್ತಾರೆ. ಸೋಮವಾರ (ಸೆ.27) ಅವರು 'ಡಾರ್ಲಿಂಗ್' ಕೃಷ್ಣ ಅಭಿನಯದ 'ದಿಲ್‌ ಪಸಂದ್' ಚಿತ್ರದ ಟೈಟಲ್‌ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ವೇಳೆ, ಈವರೆಗೂ ಎಲ್ಲಿಯೂ ಹೇಳಿಕೊಂಡಿರದ ಒಂದು ಸತ್ಯವನ್ನು ಅವರು ಹೇಳಿದರು. 'ನಾನು ಪಿಯುಸಿ ಓದುವಾಗ' ಅಸುರ' ಸಿನಿಮಾದ ಬ್ಲಾಕ್ ಟಿಕೆಟ್ ಮಾರಿದ್ದೆ' ಎಂದು ತಿಳಿಸಿದರು. ಗದಗ್‌ನಲ್ಲಿ ಬ್ಲಾಕ್ ಟಿಕೆಟ್ ಮಾರುತ್ತಿದ್ದೆ'ನಾನು ಎಲ್ಲೂ ಹೇಳಲಾರದ ಒಂದು ಸತ್ಯವನ್ನು ಈ ವೇದಿಕೆಯಲ್ಲಿ ಹೇಳುತ್ತಿದ್ದೇನೆ, ಗದಗಿನ ಬ್ಲಾಕ್ ಮಹಾಲಕ್ಷ್ಮೀ, ಶಾಂತಿ, ಕರ್ನಾಟಕ ಥಿಯೇಟರ್‌ನಲ್ಲಿ ಬ್ಲಾಕ್ ಟಿಕೆಟ್ ಮಾರಾಟ ಮಾಡಿದ್ದೆ. 'ಅಸುರ' ತೆರೆಕಂಡಾಗ ನಾನು ಪಿಯುಸಿ ಓದುತ್ತಿದ್ದೆ, ಆಗ ನಾನು ಬ್ಲಾಕ್ ಟಿಕೆಟ್ ಮಾರಿದ್ದೆ. 'ಯಜಮಾನ', 'ದಿಲ್ ಕಾ ರಿಶ್ತಾ', 'ಅಂಜಲಿ ಗೀತಾಂಜಲಿ' ಸಿನಿಮಾಗಳು ಬಂದಾಗ ಹುಬ್ಬಳ್ಳಿಯಿಂದ ತೆಗೆದುಕೊಂಡು ಬರುತ್ತಿದ್ದೆ. ಥಿಯೇಟರ್‌ ಅನ್ನೋದು ನನ್ನ ಹವ್ಯಾಸಗಳಲ್ಲಿ ಒಂದು' ಎಂದು ರವಿ ಡಿ. ಚನ್ನಣ್ಣನವರ್‌ ಹೇಳಿದರು. ಬರವಣಿಗೆ ಆರಂಭಿಸಿದ ಪೊಲೀಸ್ ಅಧಿಕಾರಿ'ಈಚೆಗೆ ನಾನು ಬರವಣಿಗೆಯನ್ನು ಆರಂಭಿಸಿದ್ದೇನೆ. ಎಲ್ಲಿಯೂ ಪ್ರಕಟಗೊಳ್ಳದ ಒಂದಷ್ಟು ಕಥೆಗಳು ನನ್ನಲ್ಲಿವೆ' ಎಂದು ಹೇಳಿರುವ ರವಿ ಡಿ. ಚನ್ನಣ್ಣನವರ್‌, ಇಡೀ ತಂಡಕ್ಕೆ ಹಾರೈಸಿದ್ದಾರೆ. 'ಇದೊಂದು ದೊಡ್ಡ ಯಶಸ್ಸು ಕಾಣುವಂತಹ ಸಿನಿಮಾ ಆಗಲಿ. ಗೆಲುವು ತಂದುಕೊಡುವುದರ ಜೊತೆಗೆ ಸಮಾಜಕ್ಕೆ ಸಂದೇಶವನ್ನು ಕೊಡುವಂತಹ ಸಿನಿಮಾವಾಗಲಿ. ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ. ಒಬ್ಬ ಮಹಾನ್‌ ವ್ಯಕ್ತಿ ಹೇಳಿದ ಮಾತುಗಳನ್ನು ಜನರು ನೆನಪಿಲ್ಲಿ ಇಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾ ಡೈಲಾಗ್‌ಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ನಾನು ಕಾಲೇಜಿನಲ್ಲಿರುವಾಗ 'ಆರ್ಯ' ಸಿನಿಮಾ ರಿಲೀಸ್ ಆಗಿತ್ತು. ಆಗ ಎಲ್ಲರೂ ಅದರ ಡೈಲಾಗ್‌ಗಳನ್ನು ಹೇಳುತ್ತಿದ್ದರು' ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ ರವಿ ಡಿ. ಚನ್ನಣ್ಣನವರ್‌. ಅಂದಹಾಗೆ, '' ಸಿನಿಮಾವನ್ನು ಶಿವ ತೇಜಸ್ ನಿರ್ದೇಶನ ಮಾಡುತ್ತಿದ್ದು, ಸುಮಂತ್ ಕ್ರಾಂತಿ ನಿರ್ಮಾಣ ಮಾಡುತ್ತಿದ್ದಾರೆ. ಹೀರೋ ಆಗಿದ್ದು, ನಿಶ್ವಿಕಾ ನಾಯ್ಡು ಮತ್ತು ಜೊತೆ ಜೊತೆಯಲಿ ಧಾರಾವಾಹಿಯ ಮೇಘಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ. ರಂಗಾಯಣ ರಘು, ತಬಲ ನಾಣಿ, ಸಾಧು ಕೋಕಿಲ ಹೀಗೆ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.