Chakravarthy: 'ಸಂಚಾರಿ' ವಿಜಯ್‌ ನಟನೆಯ ಚಿತ್ರಕ್ಕೆ ಹಾಡು ಬರೆದ ಚಕ್ರವರ್ತಿ ಚಂದ್ರಚೂಡ್

'ಸಂಚಾರಿ' ವಿಜಯ್ ನಟನೆಯ ಕೊನೆಯ ಸಿನಿಮಾಗಳಲ್ಲಿ 'ಮೇಲೊಬ್ಬ ಮಾಯಾವಿ' ಕೂಡ ಒಂದು. ಈ ಸಿನಿಮಾದ ಮೇಲೆ ವಿಜಯ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ತೆರೆಕಾಣುವ ಮೊದಲೇ ಅವರು ನಿಧನರಾದರು.

Chakravarthy: 'ಸಂಚಾರಿ' ವಿಜಯ್‌ ನಟನೆಯ ಚಿತ್ರಕ್ಕೆ ಹಾಡು ಬರೆದ ಚಕ್ರವರ್ತಿ ಚಂದ್ರಚೂಡ್
Linkup
ರಾಷ್ಟ್ರ ಪ್ರಶಸ್ತಿ ಅವರು ನಟಿಸಿರುವ ಸಿನಿಮಾಗಳಲ್ಲಿ '' ಕೂಡ ಒಂದು. ಈ ಸಿನಿಮಾ ತೆರೆಕಾಣುವ ಮೊದಲೇ ಸಂಚಾರಿ ವಿಜಯ್ ನಿಧನರಾಗಿದ್ದು ದುಃಖದ ವಿಚಾರ. ಕೆಲ ದಿನಗಳ ಹಿಂದಷ್ಟೇ ವಿಜಯ್ ಬರ್ತ್‌ಡೇ ಸಲುವಾಗಿ 'ಮೇಲೊಬ್ಬ ಮಾಯಾವಿ' ಸಿನಿಮಾದ ಒಂದು ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಇದೀಗ ಒಂದು ವಿಡಿಯೋ ಸಾಂಗ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ, ಇದನ್ನು ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಬರೆದಿದ್ದಾರೆ. ಈ ಹಾಡಿಗೆ ಎಲ್‌.ಎನ್. ಶಾಸ್ತ್ರಿ ಅವರು ಸಂಗೀತ ನೀಡಿದ್ದು, ಜೊತೆಗೆ ಹಾಡಿದ್ದಾರೆ ಕೂಡ. ಅವರೊಂದಿಗೆ ಹೇಮಂತ್, ಶಮಿತಾ ಮಲ್ನಾಡ್ ಕೂಡ ಹಾಡಿದ್ದಾರೆ. ಸಂಗೀತ ನಿರ್ದೇಶಕ ಎಲ್‌.ಎನ್‌. ಶಾಸ್ತ್ರಿ ಅವರು ಕೊನೆಯ ದಿನಗಳಲ್ಲಿ ಹಾಡಿದ ಹಾಡು ಇದಾಗಿದೆ. ಸದ್ಯ ರಿಲೀಸ್ ಆಗಿರುವ ಹಾಡಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ. ಹರಳು ಮಾಫಿಯಾದ (gem mafia) ಕಂಟೆಂಟ್ ಇರುವ ಸಿನಿಮಾ ಇದಾಗಿದೆ. ಕರಾವಳಿಯಲ್ಲಿ ನಡೆದ ಸತ್ಯ ಕಥೆ ಆಧಾರಿತ ಈ ಚಿತ್ರವನ್ನು ಬಿ. ನವೀನ್ ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಶ್ರೀಕಟೀಲ್ ಸಿನಿಮಾಸ್ ಲಾಂಛನದಲ್ಲಿ ಭರತ್ ಹಾಗೂ ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ. ಎಲ್‌.ಎನ್. ಶಾಸ್ತ್ರಿ ಸಂಗೀತ ನೀಡಿರುವ ಎಲ್ಲ ಹಾಡುಗಳಿಗೆ ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ರಚಿಸಿದ್ದಾರೆ. ಕೆ. ಗಿರೀಶ್‌ ಕುಮಾರ್‌ ಸಂಕಲನಕಾರರಾಗಿರುವ 'ಮೇಲೊಬ್ಬ ಮಾಯಾವಿ ಚಿತ್ರಕ್ಕೆ ದೀಪಿತ್‌ ಬಿಜೈ ರತ್ನಾಕರ್‌ ಛಾಯಾಗ್ರಹಣ ಮಾಡಿದ್ದಾರೆ. ಇನ್ನು, ದೇಸಿ ಸೊಗಡಿನ ಈ ಹಾಡಿಗೆ ರಾಮು ಅವರ ನೃತ್ಯ ನಿರ್ದೇಶನವಿದೆ. ಮಣಿಕಾಂತ್‌ ಕದ್ರಿ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್‌, ಜೊತೆಗೆ ಅನನ್ಯಾ ಶೆಟ್ಟಿ, ಕೃಷ್ಣಮೂರ್ತಿ ಕವತ್ತಾರ್‌, ಎಂ.ಕೆ. ಮಠ, ಬೆನಕ ನಂಜಪ್ಪ, ಮಾಸ್ಟರ್‌ ಲಕ್ಷ್ಮೀ ಅರ್ಪಣ್‌, ನವೀನ್‌ ಕುಮಾರ್‌, ಪವಿತ್ರಾ ಜಯರಾಮ್‌, ಮುಖೇಶ್‌, ಡಾ. ಮನೋನ್ಮಣಿ ಸೇರಿದಂತೆ ಸಾಕಷ್ಟು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಶೀಘ್ರದಲ್ಲೇ 'ಮೇಲೊಬ್ಬ ಮಾಯಾವಿ' ಚಿತ್ರವು ತೆರೆಗೆ ಬರಲು ಸಜ್ಜಾಗಿದೆ.