ಸಾವಿನಲ್ಲೂ ಸಾರ್ಥಕತೆ ಮೆರೆದ ನಟ: ಅಂಗಾಂಗ ದಾನ ಮಾಡಿ ಅಮರವಾಗಿ ಉಳಿದ ಸಂಚಾರಿ ವಿಜಯ್

ರಸ್ತೆ ಅಪಘಾತದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ನಿಧನರಾಗಿದ್ದಾರೆ. ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್ ಹಾಗೂ ಹೃದಯದ ವಾಲ್ವ್ಸ್ ದಾನ ಮಾಡುವ ಮೂಲಕ ನಟ ಸಂಚಾರಿ ವಿಜಯ್ ಅಮರವಾಗಿ ಉಳಿದಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ನಟ: ಅಂಗಾಂಗ ದಾನ ಮಾಡಿ ಅಮರವಾಗಿ ಉಳಿದ ಸಂಚಾರಿ ವಿಜಯ್
Linkup
ಸ್ಯಾಂಡಲ್‌ವುಡ್‌ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಇಹಲೋಕ ತ್ಯಜಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ. ರಸ್ತೆ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಂಚಾರಿ ವಿಜಯ್ ಕೋಮಾಕ್ಕೆ ಜಾರಿದ್ದರು. ಬ್ರೇನ್ ಫೇಲ್ಯೂರ್ ಮತ್ತು ಬ್ರೇನ್ ಡೆಡ್ ಆದ ಪರಿಣಾಮ ಇಂದು (ಜೂನ್ 15) ಬೆಳಗಿನ ಜಾವ 3.34ರ ಸುಮಾರಿಗೆ ಸಂಚಾರಿ ವಿಜಯ್ (38) ಮೃತಪಟ್ಟಿದ್ದಾರೆ. ವಿಜಯ್ ನಿಧನದ ಬಗ್ಗೆ ಅಪೋಲೋ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ. ಅಂಗಾಂಗ ದಾನ ಮಾಡಿದ ಕುಟುಂಬಸ್ಥರು ಅಪ್ನಿಯಾ ಪರೀಕ್ಷೆಯಲ್ಲಿ ವಿಜಯ್ ಬ್ರೇನ್ ಡೆಡ್ ಆಗಿದೆ ಎಂಬುದು ಸಾಬೀತಾಯಿತು. ಇದಾದ ಬಳಿಕ ಅಂಗಾಂಗ ದಾನದ ಬಗ್ಗೆ ಸಂಚಾರಿ ವಿಜಯ್ ಕುಟುಂಬಸ್ಥರಿಂದ ಅನುಮತಿ ಪಡೆಯಲಾಯಿತು. ಸೋಮವಾರ ರಾತ್ರಿ 11.45 ರ ಸುಮಾರಿಗೆ ಅಂಗಾಂಗ ಕಸಿ ಪ್ರಕ್ರಿಯೆಗೆ ವೈದ್ಯರು ಚಾಲನೆ ನೀಡಿದರು. ನಟ ಸಂಚಾರಿ ವಿಜಯ್ ಅವರ ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್ ಹಾಗೂ ಹೃದಯದ ವಾಲ್ವ್ಸ್ ದಾನ ಮಾಡಲಾಗಿದೆ. ಇದರಿಂದ ಏಳು ಜನರಿಗೆ ಉಪಯೋಗವಾಗಿದೆ. ಆ ಮೂಲಕ ಏಳು ಜನರ ಬಾಳಿಗೆ ನಟ ಸಂಚಾರಿ ವಿಜಯ್ ಬೆಳಕಾಗಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ನಟ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅಂಗಾಂಗ ದಾನದ ಮೂಲಕ ಸಂಚಾರಿ ವಿಜಯ್ ಅಮರರಾಗಿದ್ದಾರೆ. ಮರಣೋತ್ತರ ಪರೀಕ್ಷೆ ಅಂಗಾಂಗ ದಾನ ಪ್ರಕ್ರಿಯೆ ಮುಗಿದ ಬಳಿಕ ಬೆಳಗಿನ ಜಾವ 3.34ರ ಸುಮಾರಿಗೆ ನಟ ಸಂಚಾರಿ ವಿಜಯ್ ಕೊನೆಯುಸಿರೆಳೆದರು. ನಟ ಸಂಚಾರಿ ವಿಜಯ್ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಅದು ಮುಗಿದ ಬಳಿಕ ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಇಂದು ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಹುಟ್ಟೂರು ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಚಾರಿ ವಿಜಯ್ ಅಂತ್ಯಸಂಸ್ಕಾರ ನಡೆಯಲಿದೆ. ರಸ್ತೆ ಅಪಘಾತ ಕಳೆದ ಶನಿವಾರ ರಾತ್ರಿ ಸ್ನೇಹಿತ ನವೀನ್ ಮನೆಗೆ ಸಂಚಾರಿ ವಿಜಯ್ ಹೋಗಿದ್ದರು. ಅಲ್ಲಿ ಊಟ ಮಾಡಿ ವಾಪಸ್ ಆಗುತ್ತಿದ್ದಾಗ 11.45 ರ ಸುಮಾರಿಗೆ ಜೆಪಿ ನಗರ ಏಳನೇ ಹಂತದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಂಚಾರಿ ವಿಜಯ್ ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಕೂಡಲೆ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದ ಕಾರಣ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿತ್ತು. ಕೋಮಾಕ್ಕೆ ಜಾರಿದ್ದ ಸಂಚಾರಿ ವಿಜಯ್‌ಗೆ ಪ್ರಜ್ಞೆ ಬರಲೇ ಇಲ್ಲ. ಚಿಕಿತ್ಸೆ ಫಲಕಾರಿಯಾಗದೆ ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ.