Singer Mangli: ಶಿವರಾಜ್‌ಕುಮಾರ್ ಸಿನಿಮಾದಲ್ಲಿ 'ಕಣ್ಣೇ ಅದಿರಿಂದಿ' ಗಾಯಕಿ ಮಂಗ್ಲಿ ನಟನೆ!

'ರಾಬರ್ಟ್' ಚಿತ್ರದ ತೆಲುಗು ವರ್ಷನ್‌ನಲ್ಲಿದ್ದ 'ಕಣ್ಣೇ ಅದಿರಿಂದಿ' ಸಾಂಗ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಅದನ್ನು ಹಾಡಿದವರು ಗಾಯಕಿ ಮಂಗ್ಲಿ. ಇದೀಗ ಅವರು ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ!

Singer Mangli: ಶಿವರಾಜ್‌ಕುಮಾರ್ ಸಿನಿಮಾದಲ್ಲಿ 'ಕಣ್ಣೇ ಅದಿರಿಂದಿ' ಗಾಯಕಿ ಮಂಗ್ಲಿ ನಟನೆ!
Linkup
ಈಚೆಗೆ ತೆರೆಕಂಡ ಸೂಪರ್ ಹಿಟ್ ಸಿನಿಮಾ ''ನ 'ಕಣ್ಣು ಹೊಡೆಯಾಕ..' ಹಾಡು ತುಂಬ ಜನಪ್ರಿಯವಾಗಿತ್ತು. 'ರಾಬರ್ಟ್'ನ ತೆಲುಗು ವರ್ಷನ್‌ನಲ್ಲಿ ಇದೇ ಹಾಡು 'ಕಣ್ಣೇ ಅದಿರಿಂದಿ..' ಎಂದು ಶುರುವಾಗುತ್ತದೆ. ಅದನ್ನು ಅಲ್ಲಿನ ಗಾಯಕಿ ಅಲಿಯಾಸ್ ಸತ್ಯವತಿ ಹಾಡಿದ್ದರು. ಆ ಹಾಡಿನ ಮೂಲಕ ಮಂಗ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಯಾವ ಮಟ್ಟಕ್ಕೆಂದರೆ, ಅದು ತೆಲುಗು ಹಾಡಾದರೂ, ಕರ್ನಾಟಕದಲ್ಲೂ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. 'ಕಣ್ಣು ಹೊಡೆಯಾಕ..' ಹಾಡಿಗಿಂತಲೂ 'ಕಣ್ಣೇ ಅದಿರಿಂದಿ..' ಹಾಡು ದೊಡ್ಡ ಹಿಟ್ ಆಯಿತು. ಅದಕ್ಕೆಲ್ಲ ಕಾರಣವಾಗಿದ್ದು ಮಂಗ್ಲಿ ಅವರ ಧ್ವನಿ. ಇದೀಗ ಮಂಗ್ಲಿ ಬರೀ ಹಾಡುವುದು ಮಾತ್ರವಲ್ಲ, ಇದೀಗ ನಟನೆ ಮಾಡುವುದಕ್ಕೂ ಮುಂದಾಗಿದ್ದಾರೆ. ಅದು ನಟನೆಯ ಸಿನಿಮಾದಲ್ಲಿ ಅನ್ನೋದು ವಿಶೇಷ. ಶಿವಣ್ಣ ಜೊತೆ ಮಂಗ್ಲಿ ನಟನೆ ಶಿವರಾಜ್‌ಕುಮಾರ್ ಅಭಿನಯದ 124ನೇ ಚಿತ್ರನ್ನು ರಾಮ್ ಧುಲಿಪುಡಿ ನಿರ್ದೇಶನ ಮಾಡಲಿದ್ದಾರೆ. ಬಾಲಶ್ರೀರಾಮ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಇದೀಗ ಸಿನಿಮಾದಲ್ಲಿ ಗಾಯಕಿ ಮಂಗ್ಲಿ ನಟಿಸುವ ಕುರಿತು ಮಾಹಿತಿ ಸಿಕ್ಕಿದೆ. ಆದರೆ, ಅವರು ಯಾವ ಪಾತ್ರ ಮಾಡಲಿದ್ದಾರೆ? ಪಾತ್ರದ ವಿಶೇಷತೆ ಏನು ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಗೊತ್ತಾಗಬೇಕಿದೆ. ಜೂನ್‌ನಲ್ಲಿ ಶೂಟಿಂಗ್ ಈ ಸಿನಿಮಾಕ್ಕೆ ಜೂನ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. 70 ದಿನಗಳ ಕಾಲ ಚಿಕ್ಕಮಗಳೂರು, ಬೆಂಗಳೂರು, ಜಮ್ಮು ಮತ್ತು ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಶಿವರಾಜ್‌ಕುಮಾರ್ ಜೊತೆ ನಾಜರ್, ಸಂಪತ್ ಹಾಗೂ ಸಾಧುಕೋಕಿಲ ಕೂಡ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕುಡಿಪುಡಿ ವಿಜಯಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ರವಿಕುಮಾರ್ ಸನಾ‌ ಅವರ ಛಾಯಾಗ್ರಹಣವಿದೆ. 'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರವಿ‌ ಸಂತೆಹಕ್ಲು ಕಲಾ ನಿರ್ದೇಶನ ಈ ಹೊಸ ಚಿತ್ರಕ್ಕಿದೆ. ಶಿವಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳು ಸದ್ಯ 'ಭಜರಂಗಿ 2' ಚಿತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಆ ಸಿನಿಮಾದ ಬಹುತೇಕ ಕೆಲಸಗಳು ಮುಕ್ತಾಯಗೊಂಡು, ರಿಲೀಸ್‌ಗೆ ಸಿನಿಮಾ ಸಿದ್ಧಗೊಂಡಿದೆ. ಆದರೆ, ಕೊರೊನಾ ಸಮಸ್ಯೆಯಿಂದಾಗಿ ಸಿನಿಮಾವನ್ನು ಸಕಾಲಕ್ಕೆ ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು, ಧನಂಜಯ, ಪೃಥ್ವಿ ಅಂಬರ್ ಜೊತೆಗೆ ಶಿವರಾಜ್‌ಕುಮಾರ್ ನಟಿಸಿರುವ 'ಶಿವಪ್ಪ' ಸಿನಿಮಾದ ಶೂಟಿಂಗ್‌ ಕೂಡ ಬಹುತೇಕ ಮುಕ್ತಾಯವಾಗಿದೆ. ಈಗ 124ನೇ ಸಿನಿಮಾವನ್ನು ಜೂನ್‌ನಲ್ಲಿ ಶುರು ಮಾಡಲಿರುವ ಶಿವಣ್ಣ, 125ನೇ ಸಿನಿಮಾವನ್ನು ಆಗಲೇ ಘೋಷಣೆ ಮಾಡಿದ್ದಾರೆ. 'ವೇದ' ಶೀರ್ಷಿಕೆಯ ಆ ಸಿನಿಮಾವನ್ನು ಹರ್ಷ ನಿರ್ದೇಶನ ಮಾಡಲಿದ್ದು, ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಲಿದ್ದಾರೆ.