ಡಾ. ರಾಜ್‌ ಜತೆ ಇರುವ ಈ ಬಾಲಕಿಯರಲ್ಲಿ ಒಬ್ಬರೀಗ ದಕ್ಷಿಣ ಭಾರತದ 'ಸ್ಟಾರ್' ನಟಿ! ಯಾರೆಂದು ಗೆಸ್ ಮಾಡಿ

ಡಾ. ರಾಜ್‌ಕುಮಾರ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ರಾಜ್‌ಕುಮಾರ್ ಅವರನ್ನು ಆರಾಧಿಸುತ್ತಾರೆ. ಇದೀಗ ದಕ್ಷಿಣ ಭಾರತದ 'ಸ್ಟಾರ್' ನಟಿಯೊಬ್ಬರು ರಾಜ್‌ರನ್ನು ನೆನಪು ಮಾಡಿಕೊಂಡಿದ್ದಾರೆ.

ಡಾ. ರಾಜ್‌ ಜತೆ ಇರುವ ಈ ಬಾಲಕಿಯರಲ್ಲಿ ಒಬ್ಬರೀಗ ದಕ್ಷಿಣ ಭಾರತದ 'ಸ್ಟಾರ್' ನಟಿ! ಯಾರೆಂದು ಗೆಸ್ ಮಾಡಿ
Linkup
ವರನಟ ಅವರಿಗೆ ಶನಿವಾರ (ಏ.24) ಜನ್ಮದಿನ. ಆ ಸಲುವಾಗಿ ಅವರ ಅಸಂಖ್ಯಾತ ಅಭಿಮಾನಿಗಳು ವಿಶ್ ಮಾಡಿದರು. ಡಾ. ರಾಜ್‌ಕುಮಾರ್ ಅವರೊಂದಿಗೆ ಇರುವಂತಹ ಫೋಟೋಗಳನ್ನು ಹಂಚಿಕೊಂಡರು. ಅಣ್ಣಾವ್ರ ಅತೀ ಅಪರೂಪದ ಫೋಟೋಗಳನ್ನು ಸಹ ಶೇರ್ ಮಾಡಿಕೊಂಡು, ನಟಸಾರ್ವಭೌಮನಿಗೆ ಶುಭ ಕೋರಿದರು. ಅದೇ ಥರ ಇಲ್ಲೋರ್ವ ನಟಿ ಕೂಡ ಡಾ. ರಾಜ್‌ಕುಮಾರ್ ಅವರೊಂದಿಗೆ ಇರುವ ಬಾಲ್ಯದ ಫೋಟೋವನ್ನು ಹಂಚಿಕೊಂಡು, ಅವರ ಜನ್ಮದಿನದಂದು ನೆನಪು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ! ರಾಜ್‌ರನ್ನು ನೆನೆದ ಕೀರ್ತಿ ಡಾ. ರಾಜ್ ಹುಟ್ಟುಹಬ್ಬದ ಸಲುವಾಗಿ ಅವರ ಜೊತೆಗಿದ್ದ ಒಂದು ಫೋಟೋವನ್ನು ಕೀರ್ತಿ ಸುರೇಶ್‌ ಹಂಚಿಕೊಂಡಿದ್ದಾರೆ. 'ರಾಜ್‌ಕುಮಾರ್ ಸರ್ ಅವರನ್ನು ಜನ್ಮದಿನದ ಹಿನ್ನೆಲೆಯಲ್ಲಿ ನೆನಪು ಮಾಡಿಕೊಳ್ಳುತ್ತೇನೆ' ಎಂದು ಕೀರ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಡಾ. ರಾಜ್‌ಕುಮಾರ್ ಫ್ಯಾಮಿಲಿಯ ಅಭಿಮಾನಿಗಳು ಇದನ್ನು ಶೇರ್ ಮಾಡಿಕೊಂಡು, ಕೀರ್ತಿಗೆ ಧನ್ಯವಾದ ಹೇಳಿದ್ದಾರೆ. ರಾಘಣ್ಣ ಮನೆಗೆ ಬಂದಿದ್ದ ಕೀರ್ತಿ ಡಾ. ರಾಜ್‌ಕುಮಾರ್ ಫ್ಯಾಮಿಲಿ ಜೊತೆ ಕೀರ್ತಿ ಸುರೇಶ್‌ ಕುಟುಂಬ ಉತ್ತಮ ಒಡನಾಟ ಹೊಂದಿದೆ. ರಾಜ್‌ ನಟನೆಯ 'ಸಮಯದ ಗೊಂಬೆ' ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ನಟಿಸಿದ್ದರು. ಅದರಲ್ಲಿ ಅವರು ರಾಜ್‌ಕುಮಾರ್ ತಂಗಿಯಾಗಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ರಾಘಣ್ಣ ಮನೆಗೆ ಭೇಟಿ ನೀಡಿದ್ದ ಕೀರ್ತಿ ಸುರೇಶ್, ಕೆಲ ಸಮಯ ಇದ್ದು, ಉಭಯಕುಶಲೋಪರಿ ವಿಚಾರಿಸಿದ್ದರು. ಈಚೆಗೆ ಟ್ವಿಟರ್‌ನಲ್ಲಿ ಅಭಿಮಾನಿಗಳೊಟ್ಟಿಗೆ ಕೀರ್ತಿ ಸಂವಹನ ನಡೆಸುವಾಗ, ಒಂದು ಪ್ರಶ್ನೆ ಕೇಳಿಬಂದಿತ್ತು. 'ನೀವು ತೆಲುಗು, ತಮಿಳು, ಮಲಯಾಳಂ ಸಿನಿಮಾರಂಗದಲ್ಲಿ ಈಗಾಗಲೇ ಹೆಸರು ಮಾಡಿದ್ದೀರಿ. ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುವ ಚರ್ಚೆ ನಡೆಯುತ್ತಿದೆಯೇ? ಸ್ಯಾಂಡಲ್‌ವುಡ್‌ನಲ್ಲಿ ಯಾವ ನಿರ್ದೇಶಕರೊಂದಿಗೆ, ಯಾವ ನಟರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೀರಿ' ಎಂದು ಕೇಳಲಾಗಿತ್ತು. ಅದಕ್ಕೆ ಕೀರ್ತಿ ಸುರೇಶ್‌, 'ಪುನೀತ್ ರಾಜ್‌ಕುಮಾರ್ ಮತ್ತು ಯಶ್' ಅಂತ ಉತ್ತರ ನೀಡಿದ್ದರು. ಸಿಕ್ಕಾಪಟ್ಟೆ ಬ್ಯುಸಿ ನಟಿ ಕೀರ್ತಿ! 'ಮಹಾನಟಿ' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಕೀರ್ತಿ ಸುರೇಶ್ ಕೈಯಲ್ಲೀಗ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಈಚೆಗೆ ಅವರ ನಟನೆಯ 'ರಂಗ್‌ದೇ' ಸಿನಿಮಾ ತೆರೆಕಂಡಿತ್ತು. ಮಲಯಾಳಂನಲ್ಲಿ ಮೋಹನ್‌ಲಾಲ್ ಜೊತೆಗೆ ನಟಿಸಿರುವ 'ಮರಕ್ಕರ್‌' ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. 'ಗುಡ್ ಲಕ್ ಸಖಿ', 'ವಾಶಿ', 'ಸಾನಿ ಕಾಯಿಧಂ', ರಜನಿಕಾಂತ್ ಜೊತೆ 'ಅಣ್ಣಾಥೆ', ಮಹೇಶ್ ಬಾಬು ಜೊತೆ 'ಸರ್ಕಾರು ವಾರು ಪಾಟ' ಸಿನಿಮಾಗಳು ಕೀರ್ತಿ ಖಾತೆಯಲ್ಲಿವೆ.