
'ಸೂಪರ್ ಸ್ಟಾರ್' ರಜನಿಕಾಂತ್ ಈಗ ಪುನಃ ತಮ್ಮ ಹಳೆಯ ಟ್ರ್ಯಾಕ್‌ಗೆ ಮರಳಿದ್ದಾರೆ. 'ಎಂಧಿರನ್' ನಂತರ ಅವರು ನಟಿಸಿದ್ದ ಸಿನಿಮಾಗಳ್ಯಾವುವು ಹೇಳಿಕೊಳ್ಳುವಂತಹ ದಾಖಲೆ ಮಾಡಿರಲಿಲ್ಲ. ಅದರಲ್ಲೂ 'ದರ್ಬಾರ್' ಅಂತೂ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸೋಲು ಕಂಡಿತ್ತು. ಇದೀಗ ಅವರು '' ಮೂಲಕ ದೊಡ್ಡ ಹಿಟ್ ನೀಡಿದ್ದಾರೆ. ಈ ಮಧ್ಯೆ ರಜನಿಕಾಂತ್‌ರನ್ನು ನಿರ್ದೇಶಕರೊಬ್ಬರು ಅಳಿಸಿದ್ದ ಪ್ರಸಂಗ ಬಹಿರಂಗಗೊಂಡಿದೆ! ಯಾರು ಆ ನಿರ್ದೇಶಕ? !
ರಜನಿಯನ್ನು ಅಳಿಸಿದ್ದ 'ಅಣ್ಣಾಥೆ' ನಿರ್ದೇಶಕ'ಅಣ್ಣಾಥೆ' ಸಿನಿಮಾವು ಶುರುವಾದ ಕಥೆಯನ್ನು ಹೇಳಿಕೊಂಡಿದ್ದಾರೆ. ಅಲ್ಲದೆ, ಶಿವ ಅವರಿಂದಾಗಿ ನಾನೇಕೆ ಕಣ್ಣೀರು ಹಾಕಿದೆ ಎಂಬ ವಿಚಾರವನ್ನೂ ರಜನಿ ಬಾಯಿಬಿಟ್ಟಿದ್ದಾರೆ. 'ಅದು ಪೆಟ್ಟಾ ಸಿನಿಮಾ ತೆರೆಕಂಡ ಸಮಯ. ಅದರಲ್ಲಿ ನನ್ನನ್ನು ಸ್ಟೈಲಿಶ್‌ಗೆ ಆಗಿ ತೋರಿಸಲಾಗಿತ್ತು. ಅದೇ ಸಮಯಕ್ಕೆ ಶಿವ ನಿರ್ದೇಶನದ 'ವಿಶ್ವಾಸಂ' ಕೂಡ ರಿಲೀಸ್ ಆಗಿತ್ತು. ಆ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿದ್ದವು. ವಿಶ್ವಾಸಂ ಸಿನಿಮಾದ ವಿಶೇಷ ಪ್ರದರ್ಶನವನ್ನು ನಿರ್ಮಾಪಕರು ನನಗಾಗಿ ಆಯೋಜಿಸಿದ್ದರು. ಮಧ್ಯಂತರದವರೆಗೂ ಸಿನಿಮಾವನ್ನು ತುಂಬ ಇಷ್ಟಪಟ್ಟೆ. ಜೊತೆಗೆ ಇದು ದೊಡ್ಡ ಹಿಟ್ ಹೇಗಾಯಿತು ಎಂದು ಯೋಚಿಸುತ್ತಲೇ ಇದ್ದೆ. ಅದು ಯಾಕೆ ಅಷ್ಟೊಂದು ದೊಡ್ಡ ಹಿಟ್ ಆಯಿತು ಎಂದು ನನಗೆ ಕ್ಲೈಮ್ಯಾಕ್ಸ್ ನೋಡಿದ ನಂತರ ತಿಳಿಯಿತು. ನಾನು ಆಗ ಚಪ್ಪಾಳೆ ತಟ್ಟಲು ಆರಂಭಿಸಿದ್ದೆ' ಎಂದು ಹಳೆಯ ಘಟನೆಯನ್ನು ರಜನಿಕಾಂತ್ ನೆನಪು ಮಾಡಿಕೊಂಡಿದ್ದಾರೆ.
'ಶಿವ ನನ್ನನ್ನು ಭೇಟಿಯಾದಾಗ, 'ನಿಮ್ಮ ಜೊತೆಗೆ ಸುಲಭವಾಗಿ ಒಂದು ಹಿಟ್ ಸಿನಿಮಾ ಮಾಡಬಹುದು' ಎಂದರು. ಆ ಮಾತು ಕೇಳಿ ನಾನು ಸ್ತಬ್ಧನಾದೆ. ಯಾಕೆಂದರೆ, ಈವರೆಗೆ ಯಾರೂ ಈ ಮಾತನ್ನು ನನಗೆ ಹೇಳಿರಲಿಲ್ಲ. ಒಂದು ಗ್ರಾಮೀಣ ಕಥೆಗೆ ನೀವು ಹೀರೋ ಆಗಬೇಕು ಎಂದು ಶಿವ ಹೇಳಿದರು. ನಾನು ಅವರಿಗೆ, 15 ದಿನಗಳಲ್ಲಿ ಅಂಥದ್ದೊಂದು ಸ್ಕ್ರಿಪ್ಟ್ ಮಾಡಿಕೊಂಡು ಬನ್ನಿ ಎಂದು ಹೇಳಿಕಳುಹಿಸಿದ್ದೆ' ಎಂದು ರಜನಿಕಾಂತ್ ಹೇಳಿದ್ದಾರೆ.
'ನಾನು ಅವರಿಗೆ 15 ದಿನಗಳನ್ನು ನೀಡಿದ್ದೆ. ಆದರೆ ಶಿವ 12 ದಿನಗಳಲ್ಲೇ ಅಂಥದ್ದೊಂದು ಸ್ಕ್ರಿಪ್ಟ್ ಜೊತೆಗೆ ಬಂದರು. ಆಗ ಅವರು ನನಗೆ ಕೇಳಿದ್ದಿಷ್ಟೇ, 'ನಿಮ್ಮ 2.5 ಗಂಟೆ ಸಮಯ ಮತ್ತು 3 ಬಾಟಲ್ ನೀರು'. ಅವರು ಪೂರ್ತಿ ಕಥೆ ಹೇಳಿದ ನಂತರ ನಾನು ಕಣ್ಣೀರು ಹಾಕಿದ್ದೆ. ಜೊತೆಗೆ ಅವರನ್ನು ಅಪ್ಪಿಕೊಂಡೆ' ಎಂದು ರಜನಿಕಾಂತ್ ಹೇಳಿದ್ದಾರೆ.
ಇನ್ನು, 'ಅಣ್ಣಾಥೆ' ಸಿನಿಮಾವು ತೆರೆಕಂಡ ದಿನದಿಂದಲೂ ಮಿಶ್ರ ಪ್ರತಿಕ್ರಿಯೆಯನ್ನೇ ಪಡೆಯುತ್ತಿದೆ. ಆದರೆ ಬಾಕ್ಸ್ ಆಫೀಸ್‌ನಲ್ಲಿ ರಜನಿಯ ನಾಗಾಲೋಟ ಮುಂದುವರಿದಿದೆ. ಮೊದಲ ದಿನ ತಮಿಳುನಾಡಿನಲ್ಲಿ 34 ಕೋಟಿ ರೂ. ಗಳಿಸಿದ್ದ ಈ ಸಿನಿಮಾ, ಒಟ್ಟಾರೆ ವಿಶ್ವಾದ್ಯಂತ 225 ಕೋಟಿ ರೂ. ಗಳಿಸಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ರಜನಿಕಾಂತ್‌ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡರೆ, ಕೀರ್ತಿ ಸುರೇಶ್ ತಂಗಿಯಾಗಿ ನಟಿಸಿದ್ದಾರೆ. ಉಳಿದಂತೆ, ಪ್ರಕಾಶ್ ರೈ, ಮೀನಾ, ಖುಷ್ಬೂ, ಸೂರಿ ಮುಂತಾದವರು ಸಿನಿಮಾದಲ್ಲಿದ್ದಾರೆ.