ಸಿನಿ ಕಲಾವಿದರ ಸಂಕಷ್ಟ: ಉಪೇಂದ್ರ ಜೊತೆ ಸಹಾಯಕ್ಕೆ ನಿಂತ ಸಾಧು ಕೋಕಿಲ, ಸರೋಜ ದೇವಿ

ಕನ್ನಡ ಚಲನಚಿತ್ರ ರಂಗದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ಉಪೇಂದ್ರ ನಿರ್ಧರಿಸಿದ್ದಾರೆ. ಚಿತ್ರರಂಗದವರಿಗೆ ಸಹಾಯ ಮಾಡಲು ಉಪೇಂದ್ರ ಜೊತೆಗೆ ಹಲವು ತಾರೆಯರು ಕೂಡ ಕೈ ಜೋಡಿಸಿದ್ದಾರೆ.

ಸಿನಿ ಕಲಾವಿದರ ಸಂಕಷ್ಟ: ಉಪೇಂದ್ರ ಜೊತೆ ಸಹಾಯಕ್ಕೆ ನಿಂತ ಸಾಧು ಕೋಕಿಲ, ಸರೋಜ ದೇವಿ
Linkup
ಕೋವಿಡ್ ಲಾಕ್‌ಡೌನ್‌ನಿಂದಾಗಿ ಕನ್ನಡ ಚಲನಚಿತ್ರ ರಂಗದ ಕಲಾವಿದರು, ಕಾರ್ಮಿಕರು, ತಂತ್ರಜ್ಞರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಲಾಕ್‌ಡೌನ್‌ನಿಂದಾಗಿ ಚಿತ್ರರಂಗದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಹೀಗಾಗಿ ಕೆಲಸವಿಲ್ಲದೆ, ಕೈಯಲ್ಲಿ ದುಡ್ಡಿಲ್ಲದೆ ಚಿತ್ರರಂಗವನ್ನೇ ನಂಬಿರುವ ಎಷ್ಟೋ ಕುಟುಂಬಗಳು ಒದ್ದಾಡುತ್ತಿವೆ. ಇಂತಹ ಕುಟುಂಬಗಳಿಗೆ ಸಹಾಯ ಮಾಡಲು ರಿಯಲ್ ಸ್ಟಾರ್ ಮುಂದಾಗಿದ್ದಾರೆ. ಕನ್ನಡ ಚಲನಚಿತ್ರ ರಂಗದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ಉಪೇಂದ್ರ ನಿರ್ಧರಿಸಿದ್ದಾರೆ. ಉಪೇಂದ್ರ ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರರಂಗದವರಿಗೆ ಸಹಾಯ ಮಾಡಲು ಉಪೇಂದ್ರ ಜೊತೆಗೆ ಹಲವು ತಾರೆಯರು ಕೂಡ ಕೈ ಜೋಡಿಸಿದ್ದಾರೆ. ಸಹಾ ಕಲಾವಿದರಿಗೆ ಕಿಟ್ ನೀಡಲು ಹಣ ನೀಡಿದ ಕನ್ನಡ ಚಲನಚಿತ್ರರಂಗದ ಸಹ ಕಲಾವಿದರಿಗೆ ದಿನಸಿ ಕಿಟ್ ನೀಡಲು ನಟ ಶೋಭರಾಜ್ ಹತ್ತು ಸಾವಿರ ರೂಪಾಯಿ ನೀಡಿದ್ದಾರೆ. ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮಾಡಿದ್ದಾರೆ. ಇಪ್ಪತ್ತು ಸಾವಿರ ರೂಪಾಯಿ ಕೊಟ್ಟ ಕೆ.ಎಫ್.ಎಮ್.ಎ ಚಲನಚಿತ್ರ ಸಂಗೀತ ಕಲಾವಿದರಿಗೆ ದಿನಸಿ ಕಿಟ್ ನೀಡುವ ಸಲುವಾಗಿ ನಿರ್ದೇಶಕ ಪವನ್ ಒಡೆಯರ್ ಇಪ್ಪತ್ತು ಸಾವಿರ ರೂಪಾಯಿ ಕೊಟ್ಟಿದ್ದಾರೆ. ನಾಲ್ಕು ಲಕ್ಷ ರೂಪಾಯಿ ಕೊಟ್ಟ ಸರೋಜಾ ದೇವಿ ''ಬಿ.ಸರೋಜಮ್ಮ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ. ಸಹ ಕಲಾವಿದರಿಗೆ ಕಿಟ್ ಕೊಡುವ ಜವಾಬ್ದಾರಿ ನಾನು ತೆಗೆದುಕೊಂಡಿರುವುದರಿಂದ ಅಮ್ಮ ಕೊಡುತ್ತಿರುವ ಹಣವನ್ನು ಅವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ. ಎರಡುವರೆ ಲಕ್ಷ ರೂಪಾಯಿ ನೀಡಿದ ಸಾಧು ಕೋಕಿಲ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಸಾಧು ಕೋಕಿಲ ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್‌ಗಳನ್ನು ಆರ್ಕೆಸ್ಟ್ರಾ ಕಲಾವಿದರುಗಳಿಗೆ ಹಂಚಲು ಮುಂದೆ ಬಂದಿದ್ದಾರೆ. ಇನ್ನೂ ಉಪ್ಪಿ ಫೌಂಡೇಶನ್ ಖಾತೆಗೆ ಸ್ವಯಂ ಪ್ರೇರಿತರಾಗಿ ಉನ್ನತಿ ತಂಡದವರು ದಿನಸಿ ಕಿಟ್‌ಗಳನ್ನು ವಿತರಿಸಲು ಇಪ್ಪತ್ತು ಸಾವಿರ ರೂಪಾಯಿಗಳನ್ನು ನೀಡಿದ್ದಾರೆ ಎಂದು ಉಪೇಂದ್ರ ತಿಳಿಸಿದ್ದಾರೆ.