ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ರಾಮ್ ಚರಣ್

ನಾಲ್ಕು ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 (ಕಸ್ಟಮೈಸ್ಡ್ ವರ್ಷನ್) ಕಾರನ್ನು ರಾಮ್ ಚರಣ್ ಖರೀದಿ ಮಾಡಿದ್ದಾರೆ.

ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ರಾಮ್ ಚರಣ್
Linkup
ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ಇತ್ತೀಚೆಗಷ್ಟೇ ತಮ್ಮ ನೂತನ ಚಿತ್ರಕ್ಕೆ ಚಾಲನೆ ನೀಡಿದರು. ರಾಮ್ ಚರಣ್ ಅಭಿನಯದ 15ನೇ ಸಿನಿಮಾದ ಗ್ರ್ಯಾಂಡ್ ಲಾಂಚ್ ಮೊನ್ನೆಯಷ್ಟೇ ಆಯ್ತು. ರಾಮ್ ಚರಣ್ ನಟನೆಯ 15ನೇ ಚಿತ್ರಕ್ಕೆ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರಿದ ಬೆನ್ನಲ್ಲೇ ಐಷಾರಾಮಿ ಕಾರೊಂದನ್ನು ರಾಮ್ ಚರಣ್ ಖರೀದಿ ಮಾಡಿದ್ದಾರೆ. ಹೊಸ ಖರೀದಿಸಿದ ರಾಮ್ ಚರಣ್ ನಟ ರಾಮ್ ಚರಣ್ ಹೊಸ ಕಾರು ಖರೀದಿಸಿದ್ದಾರೆ. ದುಬಾರಿ ಬೆಲೆಯ ಐಷಾರಾಮಿ ಕಾರನ್ನು ರಾಮ್ ಚರಣ್ ಕೊಂಡುಕೊಂಡಿದ್ದಾರೆ. ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 (ಕಸ್ಟಮೈಸ್ಡ್ ವರ್ಷನ್) ಕಾರನ್ನು ರಾಮ್ ಚರಣ್ ಖರೀದಿ ಮಾಡಿದ್ದಾರೆ. ಅಂದ್ಹಾಗೆ ಈ ಕಾರಿನ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 4 ಕೋಟಿ ರೂಪಾಯಿ! ಹೌದು, ಅತ್ಯಂತ ದುಬಾರಿ ಕಾರಿಗೆ ಒಡೆಯರಾದ ಖುಷಿಯಲ್ಲಿದ್ದಾರೆ ನಟ ರಾಮ್ ಚರಣ್. ಫೋಟೋಗಳು ವೈರಲ್ ಭಾರತದ ಮೊದಲ ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಕಸ್ಟಮೈಸ್ಡ್ ವರ್ಷನ್ ಆವೃತ್ತಿಯ ಕಾರಿಗೆ ನಟ ರಾಮ್ ಚರಣ್ ಒಡೆಯನಾಗಿದ್ದಾರೆ. ನಾಲ್ಕು ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿ ಮಾಡಿರುವ ರಾಮ್ ಚರಣ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ದುಬಾರಿ ಕಾರುಗಳಿಗೆ ರಾಮ್ ಚರಣ್ ಮಾಲೀಕ ಈಗಾಗಲೇ ನಟ ರಾಮ್ ಚರಣ್ ಬಳಿ ರೇಂಜ್ ರೋವರ್ ಆಟೋಬಯೋಗ್ರಫಿ, ರೋಲ್ಸ್ ರಾಯ್ಸ್ ಫ್ಯಾಂಥಮ್, ಮರ್ಸಿಡಿಸ್ ಬೆಂಜ್ ಜಿಎಲ್ 350, ಆಸ್ಟನ್ ಮಾರ್ಟಿನ್ ವಿ8 ವಾಂಟೇಜ್ ಮುಂತಾದ ಕಾರುಗಳಿವೆ. ಇದೀಗ ನಟ ರಾಮ್ ಚರಣ್ ಅವರ ಸೂಪರ್ ಕಾರುಗಳ ಕಲೆಕ್ಷನ್‌ಗೆ ಮರ್ಸಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಕಸ್ಟಮೈಸ್ಡ್ ವರ್ಷನ್ ಕೂಡ ಸೇರಿಕೊಂಡಿದೆ. ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಖರೀದಿ ಮಾಡಿರುವ ತಾರೆಯರು ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಲಾಂಚ್ ಆಗಿದ್ದು ಇದೇ ವರ್ಷ. ಕಸ್ಟಮೈಸ್ಡ್ ವರ್ಷನ್ ಹೊರತು ಪಡಿಸಿ ಲಾಂಚ್ ಆಗಿದ್ದ ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಬೆಲೆ 2.43 ಕೋಟಿ ರೂಪಾಯಿ. ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಕಾರನ್ನ ಮೊನ್ನೆಯಷ್ಟೇ ನಟಿ ಕೃತಿ ಸನೊನ್ ಕೊಂಡುಕೊಂಡಿದ್ದರು. ಬಾಲಿವುಡ್ ನಟ ಅರ್ಜುನ್ ಕಪೂರ್ ಕೂಡ ಇತ್ತೀಚೆಗಷ್ಟೇ ಇದೇ ಕಾರನ್ನು ಖರೀದಿ ಮಾಡಿದ್ದರು. ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಕಾರಿಗೆ ನಟ ಅರ್ಜುನ್ ಕಪೂರ್ ಒಡೆಯರಾಗಿದ್ದರು. ಬಾಲಿವುಡ್ ನಟ ರಣ್‌ವೀರ್ ಸಿಂಗ್ ಕೂಡ ಇದೇ ವರ್ಷ ಇದೇ ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಕಾರನ್ನು ಖರೀದಿಸಿದ್ದರು. ಅಂದ್ಹಾಗೆ, ವಿಶ್ವದ ಐಷಾರಾಮಿ ಕಾರುಗಳ ಪೈಕಿ ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್ 600 ಕೂಡ ಒಂದು. ರಾಮ್ ಚರಣ್ ಚಿತ್ರಗಳು ರಾಮ್ ಚರಣ್ ಹಾಗೂ ಜೂ.ಎನ್.ಟಿ.ಆರ್ ಅಭಿನಯದ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರದ ಶೂಟಿಂಗ್ ಮುಗಿದಿದೆ. ರಾಮ್ ಚರಣ್ ಹಾಗೂ ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಶಂಕರ್ ನಿರ್ದೇಶನದ ತಮ್ಮ 15ನೇ ಚಿತ್ರಕ್ಕೆ ರಾಮ್ ಚರಣ್ ಚಾಲನೆ ನೀಡಿದ್ದಾರೆ.