(ಪದ್ಮಾ ಶಿವಮೊಗ್ಗ)
ರಾಮ್ ಪ್ರಸಾದ್ ನಿರ್ದೇಶನದ ಚಿತ್ರ 'ಲಂಕೆ'ಯಲ್ಲಿ ರಾಮನಾಗಿದ್ದುಕೊಂಡು ರಾವಣನಂತೆಯೂ ಘರ್ಜಿಸಲಿದ್ದಾರೆ ಯೋಗೀಶ್. ಈ ರಾಮ-ರಾವಣನಿಗೆ ಜೋಡಿಯಾಗೋ ಹುಡುಗಿ . 'ಕಹಿ', 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಮತ್ತಿತರ ಸಿನಿಮಾಗಳಲ್ಲಿ ನಟಿಸಿರುವ ಕೃಷಿ 'ಲಂಕೆ' ಚಿತ್ರ ರಿಲೀಸ್ ದಿನ ಹತ್ತಿರವಾಗುತ್ತಿದ್ದು ಎಕ್ಸೈಟ್ ಆಗಿದ್ದಾರೆ.
ಚಿತ್ರದಲ್ಲಿ 60-70ರ ದಶಕದ ಕಥೆಯ ಜತೆ ಇಂದಿನ ಕಥೆಯನ್ನೂ ನಿರ್ದೇಶಕರು ಹೇಳುತ್ತಿದ್ದಾರೆ. ಚಿತ್ರದಲ್ಲಿ ಪಕ್ಕದ ಮನೆ ಹುಡುಗಿಯ ಪಾತ್ರ ನನ್ನದು ಎಂದಿದ್ದಾರೆ ಕೃಷಿ. 'ಸಿನಿಮಾ ಪ್ರಾರಂಭದಲ್ಲಿ ಪಕ್ಕದ ಮನೆ ಹುಡುಗಿಯಂತೆ ನಾನು ಕಂಡರೂ, ಕಥೆ ಸಾಗುತ್ತಾ ಹೋದಂತೆ ಇಂಟೆನ್ಸಿಟಿ ಹೆಚ್ಚಾಗುತ್ತೆ. ವೈವಿಧ್ಯತೆಯಿಂದ ಕೂಡಿದ ಪಾತ್ರ. ಮೃದು ಸ್ವಭಾವದ ಹುಡುಗಿಯಾದರೂ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಾಳೆ. ಕ್ಲೈಮಾಕ್ಸ್‌ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಪಾತ್ರ ಬದಲಾಗುತ್ತದೆ. ಫೈಟ್ ದೃಶ್ಯದಲ್ಲೂ ಸ್ಟಂಟ್ ಮಾಡಿದ್ದೇನೆ. ಈ ಸಿನಿಮಾಗೆ ಬಹಳ ಕಾದಿದ್ದೇನೆ. ನಿರೀಕ್ಷೆಯೂ ಹೆಚ್ಚಾಗಿದೆ' ಎಂದಿದ್ದಾರೆ ಅವರು.
'ಎರಡು ವರ್ಷಗಳಿಂದ ಎಲ್ಲರೂ ಕಾದಿದ್ದೇವೆ. ನನ್ನ ಸಿನಿ ಬದುಕಿನಲ್ಲಿ ಬಿಗ್ ಕಮರ್ಷಿಯಲ್ ಸಿನಿಮಾ ಇದು. ಮಾಸ್, ಫ್ಯಾಮಿಲಿ ಡ್ರಾಮಾ ಚಿತ್ರ ಇದು. ಎಲ್ಲಾ ಮೂಡ್‌ನ ಹಾಡುಗಳಿವೆ. ಆರು ಫೈಟ್ ದೃಶ್ಯಗಳಿವೆ. ಎಲ್ಲಾಥರದ ಎಮೋಷನ್ಸ್ ಇವೆ' ಎಂದಿದ್ದಾರೆ ಅವರು. ಕೃಷಿ ತಾಪಂಡಗೆ ಮೊದಲ ಬಾರಿಗೆ ಪೆಪ್ಪಿ ಸಾಂಗ್‌ನಲ್ಲಿಡಾನ್ಸ್ ಮಾಡಲು ಅವಕಾಶ ಸಿಕ್ಕಿದ್ದು ಖುಷಿ ಕೊಟ್ಟಿದೆ. 'ಮೂರು ಹಾಡುಗಳಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ರೊಮ್ಯಾಂಟಿಕ್, ಪೆಪ್ಪಿ ಸಾಂಗ್ ಮತ್ತು ಜರ್ನಿ ಹಾಡು ಇವೆ' ಎಂದಿದ್ದಾರೆ ಕೃಷಿ
ಡಾನ್ಸ್ ಎಂದರೆ ತುಂಬಾ ಇಷ್ಟ. ನನಗೆ ಇಲ್ಲಿಯವರೆಗೆ ಸಿನಿಮಾದಲ್ಲಿ ಡಾನ್ಸ್ ಸಾಮರ್ಥ್ಯ ತೋರಿಸಲು ಅವಕಾಶ ಸಿಕ್ಕಿರಲಿಲ್ಲ. ಇದುವರೆಗಿನ ಸಿನಿಮಾಗಳಲ್ಲಿ ಮಾಂಟೇಜಸ್ ಸಾಂಗ್ ಇದ್ದವು. ಈ ಚಿತ್ರದಲ್ಲಿ ಯೋಗಿ ಮತ್ತು ನನಗೆ ಡಾನ್ಸ್ ನಂಬರ್ ಇದೆ. ಯೋಗಿ ಒಳ್ಳೆಯ ಡಾನ್ಸರ್. ಅವರಿಗೆ ಮ್ಯಾಚ್ ಮಾಡುವಂತೆ ಡಾನ್ಸ್ ಮಾಡಬೇಕಿತ್ತು. ಕಾರ್ತಿಕ್ ಶರ್ಮಾ ತುಂಬಾ ಚೆನ್ನಾಗಿ ಎನರ್ಜೆಟಿಕ್ ಆಗಿ ಕಂಪೋಸ್ ಮಾಡಿದ್ದಾರೆ. ನನಗೆ ತುಂಬಾ ಖುಷಿ ಕೊಟ್ಟಿದೆ. ಯೋಗಿಯವರ ಪರಿಚಯ ಮೊದಲಿನಿಂದ ಇತ್ತು. ಅವರ ಜತೆ ಬಹಳ ಕಂಫರ್ಟಬಲ್ ಆಗಿ ನಟಿಸಬಹುದು. ಟೀಮ್ ಚೆನ್ನಾಗಿತ್ತು. ಶೂಟಿಂಗ್ ಅನ್ನು ಎಲ್ರೂ ತುಂಬಾ ಎಂಜಾಯ್ ಮಾಡಿದೆವು' ಎಂದಿದ್ದಾರೆ ಕೃಷಿ.
ಸಂಗಮ ಕಾಡಿನಲ್ಲಿ ಚಿತ್ರೀಕರಣ ಮಾಡುವಾಗ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಕೃಷಿ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. 'ಸಂಗಮದಲ್ಲಿ ನದಿ ಮಧ್ಯೆ ಮಧ್ಯಾಹ್ನ ಬಿಸಿಲಲ್ಲಿ ಚಿತ್ರೀಕರಣ ಮಾಡುತ್ತಿದ್ದೆವು. ಸ್ವಲ್ಪ ಚಾಲೆಂಜಿಂಗ್ ಆಗಿತ್ತು. ಉರಿಬಿಸಿಲಲ್ಲಿ ಬಂಡೆಗಳ ಮಧ್ಯೆ ದಿನವೆಲ್ಲಾನಿಂತು ನಟಿಸಬೇಕಿತ್ತು. ಅಲ್ಲಿ ಕೆಲವರು ಮಾತ್ರ ಇದ್ದೆವು. ಯಾರ ಸಹಾಯ ಪಡೆಯೋದೂ ಸಾಧ್ಯವಿರಲಿಲ್ಲ. ಹೆಲಿಕ್ಯಾಮ್‌ನಲ್ಲಿ ಕೂಡ ಶೂಟ್ ಮಾಡಲಾಗುತ್ತಿತ್ತು. ಆಗ ಬಿದ್ದು ಕಾಲಿಗೆ ಗಾಯವಾಯ್ತು. ಆದರೂ ಅಂದು ಶೂಟ್ ಮುಗಿಸಲೇಬೇಕಿತ್ತು. ಅದೇ ರೀತಿ ಫೈಟ್ ಮಾಡುವಾಗ ಮೊದಲಿಗೆ ಸ್ವಲ್ಪ ಕಷ್ಟ ಎನ್ನಿಸಿತು. ಇದನ್ನೆಲ್ಲಾ ಮಾಡಿದ ಮೇಲೆ ಖುಷಿ ಆಯ್ತು' ಎಂದಿದ್ದಾರೆ. ಭಾನುವಾರ ಲಂಕೆ ಚಿತ್ರದ ಆಡಿಯೋ ರಿಲೀಸ್ ಆಗಿದೆ. ನಟ ಡಾಲಿ ಧನಂಜಯ್ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದಾರೆ.
ನನ್ನ ಮೊದಲ ಪಕ್ಕಾ ಕಮರ್ಷಿಯಲ್ ಸಿನಿಮಾ ಇದು. ಬಹಳ ಎಕ್ಸೈಟ್‌ಮೆಂಟ್ ಇದೆ. ಇದು ನನ್ನ ಮೊಟ್ಟಮೊದಲ ಸಿನಿಮಾ ಎಂಬಂತೆ ಅನಿಸುತ್ತಿದೆ. ನನ್ನ ಪಾತ್ರ ಪ್ರೇಕ್ಷಕರಿಗೆ ಸರ್‌ಪ್ರೆತ್ರೖಸ್ ನೀಡಲಿದೆ. ತುಂಬಾ ಅದ್ಭುತವಾಗಿ ಸಿನಿಮಾ ಮೂಡಿಬಂದಿದೆ. ಸಖತ್ ಮನರಂಜನೆ ನೀಡಲಿದೆ. ಪ್ರೇಕ್ಷಕ ನಿರೀಕ್ಷಿಸುವುದೆಲ್ಲಾ ಈ ಚಿತ್ರದಲ್ಲಿದೆ ಎಂದಿದ್ದಾರೆ ಕೃಷಿ ತಾಪಂಡ