ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ರಾಜ್‌ಶ್ರೀ ಪೊನ್ನಪ್ಪ: ಹುಡುಗ ಯಾರು?

ಆಧಿರ್ ಭಟ್ ಎಂಬುವರನ್ನು ರಾಜ್‌ಶ್ರೀ ಪೊನ್ನಪ್ಪ ಪ್ರೀತಿಸುತ್ತಿದ್ದಾರೆ. ಆಧಿರ್ ಭಟ್ ಜೊತೆ ಈ ವರ್ಷ ವೈವಾಹಿಕ ಜೀವನ ಆರಂಭಿಸಲು ರಾಜ್‌ಶ್ರೀ ಪೊನ್ನಪ್ಪ ಮನಸ್ಸು ಮಾಡಿದ್ದಾರೆ.

ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ರಾಜ್‌ಶ್ರೀ ಪೊನ್ನಪ್ಪ: ಹುಡುಗ ಯಾರು?
Linkup
ಕೊಡಗಿನ ಕುವರಿ, ಕನ್ನಡ ನಟಿ ರಾಜ್‌ಶ್ರೀ ಪೊನ್ನಪ್ಪ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 'ವಸುಂಧರಾ', 'ರಾಕೆಟ್', 'ಮೆಂಟಲ್ ಪೊಲೀಸ್', 'ಹ್ಯಾಪಿ ನ್ಯೂ ಇಯರ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಚೆಲುವೆ ರಾಜ್‌ಶ್ರೀ ಪೊನ್ನಪ್ಪ ಇದೇ ವರ್ಷ ಮದುವೆಯಾಗಲು ನಿರ್ಧರಿಸಿದ್ದಾರೆ. ಎಂಬುವರನ್ನು ರಾಜ್‌ಶ್ರೀ ಪೊನ್ನಪ್ಪ ಪ್ರೀತಿಸುತ್ತಿದ್ದಾರೆ. ಆಧಿರ್ ಭಟ್ ಜೊತೆ ಈ ವರ್ಷ ವೈವಾಹಿಕ ಜೀವನ ಆರಂಭಿಸಲು ರಾಜ್‌ಶ್ರೀ ಪೊನ್ನಪ್ಪ ಮನಸ್ಸು ಮಾಡಿದ್ದಾರೆ. ಯಾರೀ ಆಧಿರ್ ಭಟ್? ಲಂಡನ್‌ನಲ್ಲಿ ಎಕನಾಮಿಕ್ಸ್ ಪದವಿ ಪಡೆದಿರುವ ಆಧಿರ್ ಭಟ್ ಬಾಲಿವುಡ್‌ನಲ್ಲಿ ಬರಹಗಾರ ಆಗಿದ್ದಾರೆ. ಬಾಲಿವುಡ್‌ನ ಅನೇಕ ಹಿಟ್‌ ಸಿನಿಮಾಗಳು ಹಾಗೂ ಕಾರ್ಯಕ್ರಮಗಳ ತಂಡದ ಭಾಗವಾಗಿದ್ದರು ಆಧಿರ್ ಭಟ್. ಆಧಿರ್ ಭಟ್ ಹಾಗೂ ರಾಜ್‌ಶ್ರೀ ಪೊನ್ನಪ್ಪ ಭೇಟಿ ಆಗಿದ್ದು ಕಾಮನ್ ಫ್ರೆಂಡ್ಸ್ ಮೂಲಕ. ಪರಿಚಯ, ಸ್ನೇಹಕ್ಕೆ ತಿರುಗಿ, ಸ್ನೇಹದಿಂದ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದಿದೆ. ಆಧಿರ್ ಭಟ್ ಅವರ 'ಧೂಮ್ರಪನ್' ನೋಡಿ ರಾಜ್‌ಶ್ರೀ ಪೊನ್ನಪ್ಪ ಸಿಕ್ಕಾಪಟ್ಟೆ ಇಂಪ್ರೆಸ್ ಆದರಂತೆ. ಈಗಾಗಲೇ ರಾಜ್‌ಶ್ರೀ ಪೊನ್ನಪ್ಪ ಹಾಗೂ ಆಧಿರ್ ಭಟ್ ಕುಟುಂಬಗಳು ಭೇಟಿ ಮಾಡಿದ್ದು, ಇದೇ ವರ್ಷ ನಡೆಸುವ ಬಗ್ಗೆ ಮಾತುಕತೆ ನಡೆದಿದೆ.