Samantha-Naga Chaitanya Divorce: ಮತ್ತೆ ಹೆಸರು ಬದಲಿಸಿಕೊಂಡ ಸಮಂತಾ!

ವಿಚ್ಛೇದನದ ವಿಚಾರ ಅಧಿಕೃತವಾದ ಬಳಿಕ ನಟಿ ಸಮಂತಾ ತಮ್ಮ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬದಲಾಯಿಸಿಕೊಂಡಿದ್ದಾರೆ.

Samantha-Naga Chaitanya Divorce: ಮತ್ತೆ ಹೆಸರು ಬದಲಿಸಿಕೊಂಡ ಸಮಂತಾ!
Linkup
ಟಾಲಿವುಡ್‌ನ ಸ್ಟಾರ್ ಕಪಲ್ ಹಾಗೂ ದೂರಾಗಿದ್ದಾರೆ. ತಮ್ಮ ದಾಂಪತ್ಯ ಜೀವನವನ್ನ ಸಮಂತಾ ಮತ್ತು ನಾಗ ಚೈತನ್ಯ ಅಂತ್ಯಗೊಳಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿಟ್ಟ #ChaySam ಪಡೆಯಲು ನಿರ್ಧರಿಸಿದ್ದಾರೆ. ಇತ್ತೀಚೆಗಷ್ಟೇ ತಾವು ದೂರಾಗುತ್ತಿರುವ ಸಂಗತಿಯನ್ನು ಸಮಂತಾ ಮತ್ತು ನಾಗ ಚೈತನ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಪಡಿಸಿದ್ದರು. ವಿಚ್ಛೇದನದ ವಿಚಾರ ಅಧಿಕೃತವಾದ ಬಳಿಕ ನಟಿ ಸಮಂತಾ ತಮ್ಮ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬದಲಾಯಿಸಿಕೊಂಡಿದ್ದಾರೆ. ಮತ್ತೆ ಹೆಸರು ಬದಲಾಯಿಸಿಕೊಂಡ ಸಮಂತಾ ವಿಚ್ಛೇದನದ ವಿಚಾರ ಅಧಿಕೃತಗೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ತಮ್ಮ ಹೆಸರನ್ನ ಸಮಂತಾ ಬದಲಾಯಿಸಿಕೊಂಡಿದ್ದಾರೆ. ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ‘S’ ಅಂತಿದ್ದ ತಮ್ಮ ಹೆಸರನ್ನ ಇದೀಗ ‘ಸಮಂತಾ’ ಅಂತಲೇ ಹಾಕಿಕೊಂಡಿದ್ದಾರೆ. ‘ಅಕ್ಕಿನೇನಿ’ ಹೆಸರನ್ನು ತೆಗೆದುಹಾಕಿದ್ದ ಸಮಂತಾ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ‘’ ಅಂತಿದ್ದ ಹೆಸರಿಗೆ ಸಮಂತಾ ಕತ್ತರಿ ಪ್ರಯೋಗ ಮಾಡಿದ್ದರು. ‘ಸಮಂತಾ ಅಕ್ಕಿನೇನಿ’ ಅಂತ ಇದ್ದ ಹೆಸರನ್ನು ತೆಗೆದು ಬರೀ ‘ಎಸ್’ ಅಂತ ಹಾಕಿಕೊಂಡಿದ್ದರು. ಏಕಾಏಕಿ ‘ಅಕ್ಕಿನೇನಿ’ ಹೆಸರನ್ನು ಕೈಬಿಟ್ಟ ಕಾರಣಕ್ಕೆ ‘’ಸಮಂತಾ ಮತ್ತು ನಾಗ ಚೈತನ್ಯ ಮಧ್ಯೆ ಬಿರುಕು ಮೂಡಿದೆ’’ ಎಂಬ ಗಾಸಿಪ್ ಟಾಲಿವುಡ್‌ನಲ್ಲಿ ಶುರುವಾಯಿತು. ಈಗ ಇದೇ ಗಾಸಿಪ್ ನಿಜವಾಗಿದೆ. ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಅಂತ್ಯಗೊಂಡಿದ್ದು, ಅದನ್ನ ಅಧಿಕೃತಗೊಳಿಸಿದ ಬಳಿಕ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ‘ಎಸ್’ ತೆಗೆದು ಮತ್ತೆ ‘ಸಮಂತಾ’ ಅಂತಲೇ ಹಾಕಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಬದಲಾವಣೆ ಇಲ್ಲ! ಫೇಸ್‌ಬುಕ್‌ನಲ್ಲಿ ತಮ್ಮ ಹೆಸರನ್ನು ಸಮಂತಾ ಬದಲಾವಣೆ ಮಾಡಿಲ್ಲ. ಮುಂಚೆಯಿಂದಲೂ ಫೇಸ್‌ಬುಕ್‌ನಲ್ಲಿ ಅವರ ಹೆಸರು ‘ಸಮಂತಾ ಅಕ್ಕಿನೇನಿ’ ಅಂತಲೇ ಇತ್ತು. ಈಗಲೂ ಅವರ ಫೇಸ್‌ಬುಕ್ ಅಧಿಕೃತ ಖಾತೆಯ ಹೆಸರು ‘ಸಮಂತಾ ಅಕ್ಕಿನೇನಿ’ ಅಂತಲೇ ಇದೆ. ಅಕ್ಟೋಬರ್ 2 ರಂದು ಶಾಕಿಂಗ್ ನ್ಯೂಸ್ ಕೊಟ್ಟ ಸಮಂತಾ-ನಾಗ ಚೈತನ್ಯ ‘’ಹೆಚ್ಚು ಆಲೋಚನೆ ಮಾಡಿದ ನಂತರ ನಾವು ದೂರಾಗಲು ನಿರ್ಧರಿಸಿದ್ದೇವೆ. ಗಂಡ ಮತ್ತು ಹೆಂಡತಿಯಾಗಿದ್ದ ನಾವು ಈಗ ನಮ್ಮದೇ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿದ್ದೇವೆ. ಸ್ನೇಹವೇ ನಮ್ಮ ಸಂಬಂಧದ ಹೂರಣ. ಒಂದು ದಶಕದಿಂದ ನಾವಿಬ್ಬರು ಸ್ನೇಹಿತರಾಗಿದ್ದದ್ದು ನಮ್ಮ ಅದೃಷ್ಟ. ಈ ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಸಪೋರ್ಟ್ ಮಾಡಿ ಹಾಗೂ ನಮ್ಮ ವೈಯಕ್ತಿಕ ಬದುಕನ್ನ ಗೌರವಿಸಲು ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮಗಳಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು’’ ಎಂದು ನಾಗ ಚೈತನ್ಯ ಹಾಗೂ ನಟಿ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಟೋಬರ್ 2 ರಂದು ಪೋಸ್ಟ್ ಮಾಡಿದ್ದರು. ನಾಗಾರ್ಜುನ ಪ್ರತಿಕ್ರಿಯೆ ತಾವು ದೂರಾಗುತ್ತಿರುವ ವಿಷಯದ ಬಗ್ಗೆ ಸಮಂತಾ ಮತ್ತು ನಾಗ ಚೈತನ್ಯ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ, ನಾಗ ಚೈತನ್ಯ ತಂದೆ ನಾಗಾರ್ಜುನ ಕೂಡ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮನಸ್ಸಿನ ಮಾತನ್ನು ಹೊರ ಹಾಕಿದರು. ‘’ಭಾರವಾದ ಹೃದಯದಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಸಮಂತಾ ಮತ್ತು ನಾಗ ಚೈತನ್ಯ ನಡುವೆ ಏನಾಗಿದ್ಯೋ, ಅದು ತೀರಾ ದುರಾದೃಷ್ಟಕರ ಸಂಗತಿ. ಗಂಡ ಮತ್ತು ಹೆಂಡತಿ ಮಧ್ಯೆ ನಡೆಯುವ ವಿಚಾರ ತೀರಾ ವೈಯಕ್ತಿಕವಾದದ್ದು. ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ನನಗೆ ತುಂಬಾ ಪ್ರಿಯವಾದವರು. ಸಮಂತಾ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ನನ್ನ ಕುಟುಂಬ ಯಾವಾಗಲೂ ಮೆಲುಕು ಹಾಕುತ್ತದೆ. ಸಮಂತಾ ನಮ್ಮೊಂದಿಗೆ ಸದಾ ಪ್ರೀತಿಪ್ರಾತಳಾಗಿ ಇರುತ್ತಾಳೆ. ದೇವರು ಸಮಂತಾ ಮತ್ತು ನಾಗ ಚೈತನ್ಯಗೆ ಶಕ್ತಿಯನ್ನು ನೀಡಲಿ’’ ಎಂದು ನಾಗಾರ್ಜುನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.