ಚಿರು ಸರ್ಜಾ ಪುಣ್ಯಸ್ಮರಣೆ: ಮನೆ ಮಗನಿಗೆ ಸರ್ಜಾ ಕುಟುಂಬ ಬರೆದ ಭಾವುಕ ಪತ್ರ ವೈರಲ್

ಇಂದು (ಜೂ.7) ನಟ ಚಿರಂಜೀವಿ ಸರ್ಜಾ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ. ಆ ಹಿನ್ನೆಲೆಯಲ್ಲಿ ಸರ್ಜಾ ಕುಟುಂಬವು ಒಂದು ಭಾವುಕ ಪತ್ರವನ್ನು ಬೆರದಿದೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಿರು ಸರ್ಜಾ ಪುಣ್ಯಸ್ಮರಣೆ: ಮನೆ ಮಗನಿಗೆ ಸರ್ಜಾ ಕುಟುಂಬ ಬರೆದ ಭಾವುಕ ಪತ್ರ ವೈರಲ್
Linkup
ಅದು ಜೂನ್ 7, 2020. ಆ ದಿನ ಅಂಥದ್ದೊಂದು ಕರಾಳ ಸುದ್ದಿ ಕೇಳಿಬರುತ್ತದೆ ಎಂದು ಬಹುಶಃ ಯಾರೆಂದರೇ, ಯಾರೂ ಊಹಿಸಿರಲಿಲ್ಲ. ಕನ್ನಡ ಚಿತ್ರರಂಗದ ಮುಂಚೂಣಿ ನಟರಾಗಿದ್ದ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದ ಯುವ ನಟ ಹಠಾತ್‌ ಹೃದಯಾಘಾತಕ್ಕೆ ಒಳಗಾಗಿ, ಪ್ರಾಣ ಬಿಟ್ಟಿದ್ದರು. ತಮ್ಮ ಕುಟುಂಬದಲ್ಲಿ ಇಂಥದ್ದೊಂದು ದುರಂತ ಸಂಭವಿಸಲಿದೆ ಎಂದು ಸರ್ಜಾ ಫ್ಯಾಮಿಲಿ ಕನಸು-ಮನಸಿನಲ್ಲಿಯೂ ಸಹ ಎಣಿಸಿರಲಿಲ್ಲ. ಇದೀಗ ಪ್ರೀತಿಯ ಚಿರು ಇಲ್ಲವಾಗಿ ಒಂದು ವರ್ಷ ಕಳೆದಿದೆ. ಕುಟುಂಬಕ್ಕೆ ಮರೆಯಲಾಗದ ನೋವು ಸರ್ಜಾ ಕುಟುಂಬಕ್ಕೆ ಚಿರು ನಿಧನವನ್ನು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪ, ಅಮ್ಮ, ತಮ್ಮ, ಪತ್ನಿ, ಮಾವ.... ಹೀಗೆ ಎಲ್ಲರಿಗೂ ಆ ನೋವು ಕಾಡುತ್ತಲೇ ಇದೆ. ಸ್ನೇಹಿತರು, ಅಭಿಮಾನಿಗಳು ಕೂಡ ಚಿರಂಜೀವಿ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ. ಇದೀಗ ಚಿರು ನಿಧನರಾಗಿ ಒಂದು ವರ್ಷವಾಗಿದೆ. ಆ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಚಿರುಗೆ ಒಂದು ಭಾವುಕ ಪತ್ರವನ್ನು ಸರ್ಜಾ ಕುಟುಂಬ ಬರೆದಿದೆ. ಈ ಪತ್ರವೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ 'ನೀನು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರ್ಷ, ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ ಉದಾರಗುಣ ಮತ್ತು ಅಜಾತ ಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದ ಇರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದಿಗೂ ನಿನ್ನ ನೆನಪಿನಲ್ಲೇ, ನಿನ್ನ ಪ್ರೀತಿಯ ಕುಟುಂಬ..' ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಪತ್ರವನ್ನು , ಸೇರಿದಂತೆ ಸರ್ಜಾ ಕುಟುಂಬದ ಎಲ್ಲರೂ ಹಂಚಿಕೊಂಡಿದ್ದಾರೆ. ವಿಶೇಷ ಫೋಟೋ ಹಂಚಿಕೊಂಡ ಮೇಘನಾ ಮೊದಲನೇ ವರ್ಷದ ಚಿರು ಪುಣ್ಯಸ್ಮರಣೆ ಪ್ರಯುಕ್ತ ಚಿರು ಪತ್ನಿ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಒಂದು ಸ್ಪೆಷಲ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಪತಿ ಚಿರಂಜೀವಿ ಸರ್ಜಾ ಜೊತೆಗೆ ತಾವಿರುವ, ಚಿರು ಮನಸ್ಫೂರ್ತಿಯಾಗಿ ನಗುತ್ತಿರುವ ಆ ಫೋಟೋವನ್ನು ಮೇಘನಾ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ 'ನನ್ನವನು' ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.