James Satellite Rights: ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ‘ಜೇಮ್ಸ್’ ಸ್ಯಾಟಲೈಟ್ ಹಕ್ಕುಗಳು!

‘ಜೇಮ್ಸ್’ ಚಿತ್ರದ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟು ಬೇಗ ‘ಜೇಮ್ಸ್’ ಚಿತ್ರದ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ. ಅತಿ ಹೆಚ್ಚು ಮೊತ್ತಕ್ಕೆ ‘ಜೇಮ್ಸ್’ ಚಿತ್ರದ ಪ್ರಸಾರ ಹಕ್ಕುಗಳು ಸೇಲ್ ಆಗಿ ಹೊಸ ದಾಖಲೆ ಬರೆದಿದೆ.

James Satellite Rights: ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ‘ಜೇಮ್ಸ್’ ಸ್ಯಾಟಲೈಟ್ ಹಕ್ಕುಗಳು!
Linkup
‘ಯುವರತ್ನ’ ಚಿತ್ರದ ಬಳಿಕ ಪವರ್ ಸ್ಟಾರ್ ಕೈಗೆತ್ತಿಕೊಂಡ ಚಿತ್ರವೇ ‘’. ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಸಿನಿಮಾ ‘ಜೇಮ್ಸ್’. ನಿರ್ದೇಶಕ ಚೇತನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರ ‘ಜೇಮ್ಸ್’. ಔಟ್ ಅಂಡ್ ಔಟ್ ಆಕ್ಷನ್ ಎಂಟರ್‌ಟೇನರ್ ಆಗಿರುವ ‘ಜೇಮ್ಸ್’ ಚಿತ್ರದ ಸ್ಯಾಟಲೈಟ್ ರೇಟ್ಸ್ ಸೇಲ್ ಆಗಿದೆ. ‘ಜೇಮ್ಸ್’ ಚಿತ್ರದ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟು ಬೇಗ ‘ಜೇಮ್ಸ್’ ಚಿತ್ರದ ಮಾರಾಟವಾಗಿದೆ. ಅತಿ ಹೆಚ್ಚು ಮೊತ್ತಕ್ಕೆ ‘ಜೇಮ್ಸ್’ ಚಿತ್ರದ ಪ್ರಸಾರ ಹಕ್ಕುಗಳು ಸೇಲ್ ಆಗಿ ಹೊಸ ದಾಖಲೆ ಬರೆದಿದೆ. ಹೌದು, ‘ಜೇಮ್ಸ್’ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ವಾಹಿನಿ ಖರೀದಿ ಮಾಡಿದೆ. ಬರೋಬ್ಬರಿ 15 ಕೋಟಿ ರೂಪಾಯಿ ನೀಡಿ ‘ಜೇಮ್ಸ್’ ಚಿತ್ರದ ಪ್ರಸಾರ ಹಕ್ಕುಗಳನ್ನು ಸ್ಟಾರ್ ಸುವರ್ಣ ವಾಹಿನಿ ತನ್ನದಾಗಿಸಿಕೊಂಡಿದೆ. ಆ ಮೂಲಕ ಇಲ್ಲಿಯವರೆಗೆ ಅತಿ ಹೆಚ್ಚು ಮೊತ್ತಕ್ಕೆ ಸ್ಯಾಟಲೈಟ್ ರೈಟ್ಸ್ ಸೇಲ್ ಆದ ಪುನೀತ್ ರಾಜ್ ಕುಮಾರ್ ಅವರ ಚಿತ್ರ ಎಂಬ ಖ್ಯಾತಿ ಪಡೆದುಕೊಂಡಿದೆ ‘ಜೇಮ್ಸ್’. ‘ಜೇಮ್ಸ್’ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇರುವ ಕಾರಣ ಚಿತ್ರದ ಡಿಜಿಟಲ್ ರೈಟ್ಸ್ ಮತ್ತು ಡಬ್ಬಿಂಗ್ ರೈಟ್ಸ್‌ಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ‘ಜೇಮ್ಸ್’ ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ? 'ಜೇಮ್ಸ್' ಚಿತ್ರವನ್ನು 'ಬಹದ್ದೂರ್', 'ಭರ್ಜರಿ', 'ಭರಾಟೆ' ಚಿತ್ರಗಳ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. 'ಜೇಮ್ಸ್' ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ. 'ಜೇಮ್ಸ್' ಚಿತ್ರದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ. ರಂಗಾಯಣ ರಘು, ಅನು ಪ್ರಭಾಕರ್ ಮುಖರ್ಜಿ, ಕಾಮಿಡಿ ಕಿಲಾಡಿಗಳು ನಯನಾ, ಹಂಸಾ ಪ್ರತಾಪ್, ಕಾವ್ಯಾ ಶಾಸ್ತ್ರೀ, ಸಮೀಕ್ಷಾ, ಹರ್ಷ, ಶೈನಾ ಶೆಟ್ಟಿ, ತೆಲುಗು ನಟ ಶ್ರೀಕಾಂತ್ ಮುಂತಾದವರು 'ಜೇಮ್ಸ್' ಚಿತ್ರದಲ್ಲಿ ನಟಿಸಿದ್ದಾರೆ. ’ಜೇಮ್ಸ್’ ಚಿತ್ರಕ್ಕೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಮೂರು ಹಾಡುಗಳ ಶೂಟಿಂಗ್ ಬಾಕಿ ಇದೆ ಹಾಗ್ನೋಡಿದ್ರೆ, ಇಷ್ಟೊತ್ತಿಗಾಗಲೇ ‘ಜೇಮ್ಸ್’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿರಬೇಕಿತ್ತು. ಆದರೆ, ಕೋವಿಡ್ ಎರಡನೇ ಅಲೆ ಹಾಗೂ ಲಾಕ್‌ಡೌನ್‌ನಿಂದಾಗಿ ‘ಜೇಮ್ಸ್’ ಸಿನಿಮಾ ಚಿತ್ರೀಕರಣ ತಡವಾಗಿದೆ. ಜುಲೈ ತಿಂಗಳಿನಲ್ಲಿ ಫೈಟ್ ಮಾಸ್ಟರ್‌ಗಳಾದ ರಾಮ್-ಲಕ್ಷ್ಮಣ್ ಸಂಯೋಜನೆಯಲ್ಲಿ 'ಜೇಮ್ಸ್' ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಇದೀಗ ‘ಜೇಮ್ಸ್’ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣವಾಗಿದ್ದು, ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಪುನೀತ್ ರಾಜ್‌ಕುಮಾರ್ ಮುಂದಿನ ಚಿತ್ರಗಳು ‘ಜೇಮ್ಸ್’ ಬಳಿಕ ಪುನೀತ್ ರಾಜ್ ಕುಮಾರ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಪವನ್ ಕುಮಾರ್ ನಿರ್ದೇಶನದ ‘ದ್ವಿತ್ವ’ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪುನೀತ್ ರಾಜ್‌ ಕುಮಾರ್ ಮತ್ತು ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನಲ್ಲಿ ಮತ್ತೊಂದು ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ.