Pruthvi Ambaar: ಕಾಲಿವುಡ್ & ಬಾಲಿವುಡ್‌ಗೂ ಎಂಟ್ರಿ ಕೊಟ್ಟ 'ದಿಯಾ' ನಟ ಪೃಥ್ವಿ ಅಂಬಾರ್!

'ದಿಯಾ' ಸಿನಿಮಾ ಮೂಲಕ ಮುನ್ನೆಲೆಗೆ ಬಂದ ಪೃಥ್ವಿ ಅಂಬಾರ್‌ ಸದ್ಯ ಸ್ಯಾಂಡಲ್‌ವುಡ್‌ನ ಬ್ಯುಸಿ ನಟರಲ್ಲಿ ಒಬ್ಬರು. ಬೇರೆ ಬೇರೆ ಭಾಷೆಗಳಿಗೂ ಪ್ರಯಾಣ ಆರಂಭಿಸಿರುವ ಅವರು ತಮ್ಮ ಸಿನಿಮಾಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

Pruthvi Ambaar: ಕಾಲಿವುಡ್ & ಬಾಲಿವುಡ್‌ಗೂ ಎಂಟ್ರಿ ಕೊಟ್ಟ 'ದಿಯಾ' ನಟ ಪೃಥ್ವಿ ಅಂಬಾರ್!
Linkup
ಹರೀಶ್‌ ಬಸವರಾಜ್‌ ಸ್ಯಾಂಡಲ್‌ವುಡ್‌ನ ಹಲವು ನಟರು ಕನ್ನಡದಲ್ಲಿ ನಟಿಸುತ್ತಲೇ ಬೇರೆ ಬೇರೆ ಚಿತ್ರರಂಗಗಳಲ್ಲಿಸಕ್ಸಸ್‌ ಕಂಡಿದ್ದಾರೆ. '' ಸಿನಿಮಾದ ಮೂಲಕ ಅಭಿಮಾನಿಗಳನ್ನು ಗಳಿಸಿದ ಮತ್ತು ಹೆಚ್ಚು ಜನಪ್ರಿಯರಾದ ನಟ ಪೃಥ್ವಿ ಅಂಬಾರ್‌. ತನ್ನ ಸಹಜ ನಟನೆ ಮತ್ತು ಸಾದಾ ಸೀದಾ ಲುಕ್‌ನಿಂದಾಗಿ ಹೆಸರು ಮಾಡಿದವರು. 'ದಿಯಾ' ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಹಲವು ಸಿನಿಮಾಗಳ ಆಫರ್‌ ಪಡೆದ ಪೃಥ್ವಿ ಈಗ ಬಹುಭಾಷಾ ನಟರಾಗುತ್ತಿದ್ದಾರೆ. ಹೌದು, ಅವರೀಗ ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ದಿಯಾ' ಎಂಬ ಸಿನಿಮಾ ಪೃಥ್ವಿ ಅಂಬಾರ್‌ ಅವರ ವೃತ್ತಿಜೀವನವನ್ನು ಬದಲಾಯಿಸಿದೆ. ಅವರೀಗ ಕನ್ನಡದ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಜಯ್‌ ಮಿಲ್ಟನ್‌ ನಿರ್ದೇಶನ ಮಾಡಿರುವ 'ಬೈರಾಗಿ'ಯಲ್ಲಿಯೂ ಪ್ರಮುಖ ಪಾತ್ರದಲ್ಲಿಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿನ ನಟನೆಯನ್ನು ನೋಡಿ ವಿಜಯ್‌ ಮಿಲ್ಟನ್‌ ಅವರನ್ನು ತಮಿಳು ಚಿತ್ರರಂಗಕ್ಕೆ ಕರೆದುಕೊಂಡು ಹೋಗಿದ್ದಾರೆ. 'ಬೈರಾಗಿ ಸಿನಿಮಾದಲ್ಲಿ ನಟಿಸುವಾಗ ವಿಜಯ್‌ ಮಿಲ್ಟನ್‌ ಅವರು ಕರೆದು ನಾನು ತಮಿಳಿನಲ್ಲಿವಿಜಯ್‌ ಆಂಟೊನಿಗೆ ಒಂದು ಸಿನಿಮಾ ಮಾಡುತ್ತಿದ್ದೇನೆ, ಅದರಲ್ಲಿನ ಒಂದು ಪಾತ್ರದಲ್ಲಿ ನೀವು ನಟಿಸುತ್ತೀರಾ ಎಂದು ಕೇಳಿದರು. ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾಗ ಅದೇ ಚಿತ್ರದ ನಿರ್ದೇಶಕರು ಮತ್ತೊಂದು ಸಿನಿಮಾಗೆ ನನ್ನನ್ನು ಆಯ್ಕೆ ಮಾಡಿದ್ದು ನನಗೆ ಖುಷಿಯಾಯಿತು. ಇಡೀ ಸಿನಿಮಾ ವಿಜಯ್‌ ಅಂಟೋನಿ ಅವರ ಜತೆ ಇರುವಂತಹ ಪಾತ್ರವದು. ಲವರ್‌ ಬಾಯ್‌ ರೀತಿಯಲ್ಲಿ ಪಾತ್ರವನ್ನು ಡಿಸೈನ್‌ ಮಾಡಿದ್ದಾರೆ. ಸಂತೋಷದಿಂದ ಒಪ್ಪಿಕೊಂಡಿದ್ದೇನೆ' ಎಂದು ಹೇಳಿದ್ದಾರೆ ಪೃಥ್ವಿ. 'ಆ ಪಾತ್ರಕ್ಕೆ ಬೇರೆ ಯಾರೋ ಒಬ್ಬರು ಇದ್ದರಂತೆ, ಆದರೂ ನನ್ನ ನಟನೆ ನೋಡಿ ಆಯ್ಕೆ ಮಾಡಿದ್ದಾರೆ. ಉತ್ತಮ ಪರ್ಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರ. ಧನಂಜಯ ಅವರು ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಸಬ್ಜೆಕ್ಟ್ ಆಗಿರುವುದರಿಂದ ನಾನು ಸಹ ಎಕ್ಸೈಟ್‌ ಆಗಿದ್ದೇನೆ' ಎನ್ನುತ್ತಾರೆ ಪೃಥ್ವಿ. ವಿದೇಶಿಗರಿಂದ ಮೆಚ್ಚುಗೆಪೃಥ್ವಿ ಅಂಬಾರ್‌ ಅವರ ನಟನೆಗೆ ಬರೀ ಕರ್ನಾಟಕದಲ್ಲಿ ಮಾತ್ರ ಅಭಿಮಾನಿಗಳಿಲ್ಲ, ವಿದೇಶಗಳಲ್ಲಿಯೂ ಅವರ ನಟನೆಯನ್ನು ಮೆಚ್ಚಿಕೊಂಡವರಿದ್ದಾರೆ. 'ದಿಯಾ ಸಿನಿಮಾವನ್ನು ಒಟಿಟಿಯಲ್ಲಿ ನೋಡಿದ ಶ್ರೀಲಂಕಾದ ಪ್ರಜೆಗಳು, ಇಂಡೋನೇಶಿಯಾ, ಬಾಂಗ್ಲಾದೇಶ ಹೀಗೆ ಬೇರೆ ಬೇರೆ ದೇಶಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಮೆಸೆಜ್‌ ಮಾಡುತ್ತಿದ್ದಾರೆ. ಭಾಷೆ ಅರ್ಥವಾಗದೇ ಇದ್ದರೂ ಸಿನಿಮಾ ನೋಡಿ ಅವರೆಲ್ಲರೂ ಮೆಚ್ಚಿಕೊಂಡಿದ್ದಾರೆ' ಎಂದು ಹೇಳಿದರು. ಹಿಂದಿಯಲ್ಲಿಯೂ ಪೃಥ್ವಿಪೃಥ್ವಿ ಅಂಬಾರ್‌ ತಮಿಳು ಮಾತ್ರವಲ್ಲದೆ ಬಾಲಿವುಡ್‌ ಸಿನಿಮಾದಲ್ಲಿಯೂ ನಟಿಸಿದ್ದಾರೆ. 'ದಿಯಾ' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ಕನ್ನಡದಲ್ಲಿನ ಪಾತ್ರದಲ್ಲಿಯೇ ಅವರು ಕಾಣಿಸಿಕೊಂಡಿದ್ದಾರೆ. ಕನ್ನಡದ ನಿರ್ದೇಶಕ ಅಶೋಕ್‌ ಹಿಂದಿ ಸಿನಿಮಾದ ಕ್ರಿಯೇಟಿವ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇಡೀ ತಂಡ ಮುಂಬಯಿಯದ್ದು. ಪೃಥ್ವಿ ಮಾತ್ರ ಕನ್ನಡದ ನಟರಾಗಿ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಟನೆಪೃಥ್ವಿ ಅಂಬಾರ್‌ ಈಗ 'ಬೈರಾಗಿ', 'ಫಾರ್‌ ರಿಜಿಸ್ಪ್ರೇಷನ್‌' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಬು ಅಲೋಶಿಯಸ್‌ ಎಂಬವರು ನಿರ್ದೇಶನ ಮಾಡುತ್ತಿರುವ 'ಹ್ಯಾಪಿಲಿ ಮ್ಯಾರೀಡ್‌ ಲೈಫ್‌' ಸಿನಿಮಾ ಕಳೆದ ವಾರವಷ್ಟೇ ಸೆಟ್ಟೇರಿದೆ. ಇನ್ನೊಂದು ಹಾರರ್‌ ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ. ಇದರ ಜತೆಗೆ ಅವರೇ ಸ್ವತಃ ಕಥೆ ಬರೆದಿರುವ ಸಿನಿಮಾ ಸದ್ಯದಲ್ಲೆಆರಂಭವಾಗಬೇಕಿದೆ. ಕೋಟ್‌ ವಿಜಯ್‌ ಮಿಲ್ಟನ್‌ ಅವರ ಸಿನಿಮಾದ ಪಾತ್ರ ಬಹಳ ವಿಶೇಷವಾಗಿದೆ. ಇದರ ಜತೆಗೆ ಇನ್ನೊಂದಷ್ಟು ಸಿನಿಮಾಗಳು ಕೈಯಲ್ಲಿವೆ. ನಾಯಕ ವಿಜಯ್‌ ಅಂಟೋನಿ ಜತೆ ಟ್ರಾವೆಲ್‌ ಆಗುವಂತಹ ಪಾತ್ರವದು. ಕಲಾವಿದನಿಗೆ ಭಾಷೆಯ ಹಂಗಿರಬಾರದು ಹಾಗಾಗಿ ಎಲ್ಲಭಾಷೆಗಳಲ್ಲಿಯೂ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತೇನೆ. -ಪೃಥ್ವಿ ಅಂಬಾರ್‌, ನಟ