'ರಾಕಿ ಭಾಯ್' ಯಶ್‌ ಎದುರು ಅಂದು ಶಾರುಖ್ ಖಾನ್; ಇಂದು ಆಮಿರ್ ಖಾನ್‌! ಏನಾಗಲಿದೆ ರಿಸಲ್ಟ್‌?

'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 1' ಸಿನಿಮಾದ ಎದುರು ಶಾರುಖ್ ಖಾನ್‌ ಅವರ 'ಜೀರೋ' ಸಿನಿಮಾ ತೆರೆಕಂಡಿದ್ದು, ನಂತರ ಫಲಿತಾಂಶ ಏನು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅಂಥದ್ದೇ ಮತ್ತೊಂದು ಬಾಕ್ಸ್ ಆಫೀಸ್‌ ಕ್ಲ್ಯಾಷ್‌ ಎದುರಾಗಿದೆ.

'ರಾಕಿ ಭಾಯ್' ಯಶ್‌ ಎದುರು ಅಂದು ಶಾರುಖ್ ಖಾನ್; ಇಂದು ಆಮಿರ್ ಖಾನ್‌! ಏನಾಗಲಿದೆ ರಿಸಲ್ಟ್‌?
Linkup
ಅದು 2018, ಡಿಸೆಂಬರ್ 21- ಕನ್ನಡ ಚಿತ್ರರಂಗದ ಪಾಲಿಗೆ ಮಹತ್ವದ ದಿನ. ಸ್ಯಾಂಡಲ್‌ವುಡ್‌ ವ್ಯಾಪ್ತಿಯನ್ನು ಹಿರಿದು ಮಾಡಿದ 'ಕೆಜಿಎಫ್; ಚಾಪ್ಟರ್ 1' ತೆರೆಕಂಡ ದಿನ. 'ರಾಕಿಂಗ್ ಸ್ಟಾರ್' ಆಗಿದ್ದ ಯಶ್, ಪ್ಯಾನ್ ಇಂಡಿಯಾ ಸ್ಟಾರ್ ಆದ ದಿನ. ಅದೇ ದಿನ ತೆರೆಕಂಡ ಮತ್ತೊಂದು ಸಿನಿಮಾ 'ಜೀರೋ'. ಶಾರುಖ್ ಖಾನ್‌ ನಟಿಸಿದ್ದ ಬಹುನಿರೀಕ್ಷಿತ ಸಿನಿಮಾವದು. ಅದು 'ಕೆಜಿಎಫ್' ಎದುರು ತೆರೆಕಂಡಿತ್ತು. ಅದೇ ಥರ ಮತ್ತೊಂದು ಬಾಕ್ಸ್ ಆಫೀಸ್‌ ಕ್ಲ್ಯಾಶ್‌ ಎದುರಾಗಿದೆ! ಹೌದು, ನಟನೆಯ 'ಕೆಜಿಎಫ್; ಚಾಪ್ಟರ್ 2' ತೆರೆಕಾಣುವ ದಿನದಂದೇ ಆಮಿರ್ ಖಾನ್‌ ನಟನೆಯ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ! 'ಕೆಜಿಎಫ್‌' ಎದುರು ಡಲ್ ಹೊಡೆದಿದ್ದ ಜೀರೋ2018ರ ಡಿಸೆಂಬರ್ 21ರಂದು 'ಕೆಜಿಎಫ್‌' ಸಿನಿಮಾವು ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ತೆರೆಗೆ ಬಂದಿತ್ತು. ಅದೇ ದಿನ ತೆರೆಕಂಡಿದ್ದ 'ಜೀರೋ' ಚಿತ್ರವು ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದರೆ, 'ಕೆಜಿಎಫ್‌' ಜೊತೆಗಿನ ಬಾಕ್ಸ್ ಆಫೀಸ್‌ ಕದನದಲ್ಲಿ 'ಜೀರೋ' ಸೋಲುಂಡಿತ್ತು. 200 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ವಿಶ್ವಾದ್ಯಂತ 180 ಕೋಟಿ ರೂ. ಗಳಿಸುವಲ್ಲಿ ಸುಸ್ತು ಹೊಡೆದಿತ್ತು. ಆದರೆ, ಅಂದಾಜು 80 ಕೋಟಿ ರೂ.ಗಳಲ್ಲಿ ನಿರ್ಮಾಣವಾದ 'ಕೆಜಿಎಫ್‌' ಸಿನಿಮಾವು 250ರಿಂದ 300 ಕೋಟಿ ರೂ. ಗಳಿಸಿತ್ತು ಎಂಬ ಮಾಹಿತಿ ಇದೆ. 'ಜೀರೋ' ಸೋಲು ಕಂಡ ಬಳಿಕ ಶಾರುಖ್ ಸಿನಿಮಾದಿಂದಲೇ ಕೊಂಚ ಬ್ರೇಕ್ ತೆಗೆದುಕೊಳ್ಳಬೇಕಾಯ್ತು. ಈಗ ಯಶ್ ಎದುರು ಆಮಿರ್ ಖಾನ್ ಪೈಪೋಟಿಸದ್ಯ ಯಶ್ ನಟನೆ '' ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನೂರಾರು ಕೋಟಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಬಾಲಿವುಡ್‌ನಲ್ಲೂ 'ಕೆಜಿಎಫ್ 2' ಬಗ್ಗೆ ದೊಡ್ಡ ಹೈಪ್ ಕ್ರಿಯೇಟ್ ಆಗಿದೆ. 2022ರ ಏಪ್ರಿಲ್‌ 14ರಂದು ಸಿನಿಮಾವನ್ನು ತೆರೆಗೆ ತರುವುದಕ್ಕೆ ನಿರ್ಮಾಪಕರು ಡೇಟ್ ಫಿಕ್ಸ್ ಮಾಡಿದ್ದಾರೆ. ಆದರೆ, ಅದೇ ದಿನ ಆಮಿರ್ ಖಾನ್‌ರ ಬಹುನಿರೀಕ್ಷಿತ 'ಲಾಲ್ ಸಿಂಗ್ ಛಡ್ಡಾ' ಸಿನಿಮಾವು ತೆರೆಗೆ ಬರಲಿದೆ. ಎರಡೂ ಕೂಡ ದೊಡ್ಡ ಸಿನಿಮಾಗಳಾಗಿರುವುದರಿಂದ ಏಪ್ರಿಲ್ 14ರಂದು ದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಷ್ ಉಂಟಾಗಲಿದೆ. ಹಾಗಾದರೆ, ಈ ಬಾರಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. 'ಕೆಜಿಎಫ್; ಚಾಪ್ಟರ್ 2' ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಇದ್ದಾರೆ. ಜೊತೆಗೆ ಸಂಜಯ್ ದತ್‌ ಮತ್ತು ರವೀನಾ ಟಂಡನ್ ಈ ಸಿನಿಮಾದ ಪ್ರಮುಖ ಆಕರ್ಷಣೆ ಎಂದರೆ ತಪ್ಪಾಗಲಾರದು. ಇನ್ನು, 'ಲಾಲ್ ಸಿಂಗ್ ಛಡ್ಡಾ'ಗೆ ಅದ್ವೈತ್ ಚಂದನ್‌ ನಿರ್ದೇಶನ ಮಾಡಿದ್ದಾರೆ. ಆಮಿರ್ ಖಾನ್ ಮತ್ತು ಕಿರಣ್ ರಾವ್ ಬಂಡವಾಳ ಹೂಡಿದ್ದಾರೆ. ಅಂದಹಾಗೆ, ಈ ಸಿನಿಮಾವು ಹಾಲಿವುಡ್‌ನ 'ಫಾರೆಸ್ಟ್ ಗಂಪ್' ಸಿನಿಮಾದ ರಿಮೇಕ್ ಇದು. ನಟ ಅತುಲ್ ಕುಲಕರ್ಣಿ ಇದರ ಚಿತ್ರಕಥೆ ಬರೆದಿರುವುದು ವಿಶೇಷ.