ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ನಟನೆಯ 'ನಿನ್ನ ಸನಿಹಕೆ' ಟ್ರೇಲರ್ ರಿಲೀಸ್

ಡಾ. ರಾಜ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ ಹಾಗೂ ನಟ ಸೂರಜ್‌ ಗೌಡ ಅಭಿನಯದ 'ನಿನ್ನ ಸನಿಹಕೆ' ಚಿತ್ರದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರಲ್ಲಿ ವಿಭಿನ್ನ ರೀತಿಯ ಕಂಟೆಂಟ್‌ ಇದೆ ಎನ್ನಲಾಗುತ್ತಿದೆ.

ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ನಟನೆಯ 'ನಿನ್ನ ಸನಿಹಕೆ' ಟ್ರೇಲರ್ ರಿಲೀಸ್
Linkup
ಪದ್ಮಾ ಶಿವಮೊಗ್ಗ ಕಹಿ, ಸಿಲಿಕಾನ್‌ ಸಿಟಿ, ಮದುವೆಯ ಮಮತೆಯ ಕರೆಯೋಲೆ ಚಿತ್ರಗಳ ಮೂಲಕ ಗಮನ ಸೆಳೆದಿರುವ ನಟ ಸೂರಜ್‌ ಗೌಡ '' ಚಿತ್ರದಲ್ಲಿ ಹೀರೋ ಆಗಿ ನಟಿಸುವುದರ ಜತೆಗೆ ನಿರ್ದೇಶಕರಾಗಿಯೂ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ. ಹಾಗಾಗಿ ಸೂರಜ್‌ಗೆ ಈ ಚಿತ್ರ ಒಂದು ರೀತಿಯಲ್ಲಿ ವಿಶೇಷವಾದರೆ, ಇದರ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿರುವ ಧನ್ಯಾ ರಾಮ್‌ಕುಮಾರ್‌ಗೆ ಕೂಡ ಇದು ವಿಶೇಷ ಸಿನಿಮಾ. ಇದರ ಕಂಟೆಂಟ್ ಅನ್ನು ಚಿತ್ರತಂಡ ಇದುವರೆಗೂ ಬಿಟ್ಟು ಕೊಟ್ಟಿರಲಿಲ್ಲ. ಈಗ ಆಗಸ್ಟ್‌ 20ರಂದು ರಿಲೀಸ್‌ ಆಗಲಿರುವ ಈ ಚಿತ್ರದ ಮೊದಲ ಟ್ರೇಲರ್‌ ಭಾನುವಾರ ರಿಲೀಸ್‌ ಆಗಿದ್ದು, ಇದರಲ್ಲಿ ಲಿವಿಂಗ್‌ ರಿಲೇಷನ್‌ಶಿಪ್‌ ಕುರಿತ ವಿಭಿನ್ನ ಕಥೆ ಇರಲಿದೆ ಎಂದು ರಿವೀಲ್‌ ಆಗಿದೆ. ಈ ಬಗ್ಗೆ ಹೇಳಿರುವ ಸೂರಜ್‌ ಗೌಡ, 'ಈ ಚಿತ್ರದಲ್ಲಿ ಲವ್‌ ಸ್ಟೋರಿ ಇದೆ. ಕಾಲದಿಂದ ಕಾಲಕ್ಕೆ ಪ್ರೀತಿಯನ್ನು ತೋರಿಸುವ ವಿಧಾನ ಬದಲಾಗುತ್ತಾ ಬಂದಿದೆ. ಇವತ್ತಿನ ಮಾಡರ್ನ್‌ ರಿಲೇಶನ್‌ಶಿಪ್‌ ಹೇಗಿರುತ್ತದೆ ಎನ್ನುವುದನ್ನು 'ನಿನ್ನ ಸನಿಹಕೆ' ಚಿತ್ರದಲ್ಲಿ ಹೇಳಿದ್ದೇವೆ. ಲಿವಿಂಗ್‌ ರಿಲೇಶನ್‌ಶಿಪ್‌ ಕಾನೂನಿನ ಮಾನ್ಯತೆ ಪಡೆದಿದ್ದರೂ, ನಮ್ಮ ಸಮಾಜ ಇದನ್ನು ಒಪ್ಪಿಕೊಂಡಿಲ್ಲ. ಇಂಥ ಸಂದರ್ಭದಲ್ಲಿ ರಿಲೇಶನ್‌ಶಿಪ್‌ನಲ್ಲಿರುವ ಜೋಡಿಗೆ ಎದುರಾಗುವ ಸನ್ನಿವೇಶ ಮತ್ತು ಅವರನ್ನು ಸಮಾಜ ಹೇಗೆ ನೋಡುತ್ತದೆ ಎಂಬುದನ್ನು ತಮಾಷೆಯಾಗಿ ಹೇಳುವ ಸಿನಿಮಾವಿದು' ಎಂದಿದ್ದಾರೆ. ಬೆಂಗಳೂರು ಲಿವಿಂಗ್‌ ರಿಲೇಶನ್‌ಶಿಪ್‌ನ ಹಬ್‌ ಎಂದಿರುವ ಅವರು, 'ಈಗ ನಗರಗಳಲ್ಲಿ ಲಿವಿಂಗ್‌ ರಿಲೇಶನ್‌ಶಿಪ್‌ ಸಾಮಾನ್ಯ ಸಂಗತಿ ಎನ್ನುವಂತಾಗಿದೆ. ಈ ನಗರ ಐಟಿ ಹಬ್‌ ಆಗಿರುವುದರಿಂದ ಬೇರೆ ಬೇರೆ ರಾಜ್ಯಗಳಿಂದ, ಪ್ರದೇಶಗಳಿಂದ ಹುಡುಗ ಹುಡುಗಿಯರು ಬಂದು ಇಲ್ಲಿ ನೆಲೆಸಿದ್ದಾರೆ. ತಮ್ಮ ಊರಿನಿಂದ ದೂರವಿರುವ ಅವರು ಮನೆಯವರಿಗೆ ಗೊತ್ತಾಗದಂತೆ ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಈ ರಿಲೇಶನ್‌ಶಿಪ್‌ ಹೇಗೆ ಬದಲಾಗುತ್ತದೆ? ಹೇಗೆ ಗಟ್ಟಿಯಾಗುತ್ತದೆ ಎಂಬುವುದನ್ನೆಲ್ಲ ಈ ಸಿನಿಮಾದಲ್ಲಿ ನೋಡಬಹುದು' ಎಂದಿದ್ದಾರೆ. ನಿನ್ನ ಸನಿಹಕೆ ಚಿತ್ರದ ಟ್ರೇಲರ್‌ನಲ್ಲಿ ಡಾ. ರಾಜ್‌ಕುಮಾರ್‌ ಮೊಮ್ಮಗಳು, ನಟ ರಾಮ್‌ಕುಮಾರ್‌ ಮಗಳು ಧನ್ಯಾ ನಟನೆಯೂ ಎಲ್ಲರ ಗಮನ ಸೆಳೆದಿದೆ. ಟ್ರೇಲರ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, 'ಇತ್ತೀಚೆಗೆ ರಿಲೀಸ್‌ ಆಗಿರುವ ಇದರ 'ನೀ ಪರಿಚಯ...' ಅನ್‌ಪ್ಲಗ್‌ ಸಾಂಗ್‌ ಕೂಡ ಹಿಟ್‌ ಆಗಿದೆ. ಧನ್ಯಾ ಮತ್ತು ನಾನು ಹಾಡಿರುವ ಈ ಹಾಡು 5ನೇ ದಿನವೂ ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸಿನಿಮಾದ ಹಾಡೊಂದನ್ನು ಹೀರೋ, ಹಿರೋಯಿನ್‌ ಬೇರೆ ವರ್ಷನ್‌ನಲ್ಲಿ ಹಾಡಿರುವುದು ಇದೇ ಮೊದಲು ಎನ್ನಬಹುದು. ನಮ್ಮಿಬ್ಬರಿಗೂ ಬೇರೆ ಸಿನಿಮಾಗಳಲ್ಲಿ ಹಾಡಲು ಆಫರ್‌ ಬರುತ್ತಿವೆ. ಆದರೆ, ಈ ಸಿನಿಮಾ ರಿಲೀಸ್‌ ಇರೋದ್ರಿಂದ ಒಪ್ಪಿಕೊಂಡಿಲ್ಲ. ಮುಂದೆ ಹಾಡುವ ಇಚ್ಛೆ ಇಬ್ಬರಿಗೂ ಇದೆ' ಎಂದಿದ್ದಾರೆ ಸೂರಜ್‌ ಗೌಡ. ಕೋಟ್: ಲಿವಿಂಗ್‌ ರಿಲೇಶನ್‌ಶಿಪ್‌ನ ರಿಯಲಿಸ್ಟಿಕ್‌ ಕಥೆಗಳನ್ನು ಫನ್ನಿಯಾಗಿ ಹೇಳಿರುವ ಚಿತ್ರವೇ 'ನಿನ್ನ ಸನಿಹಕೆ'. ಆಧುನಿಕ ಬದುಕಿನಲ್ಲಿ ರಿಲೇಶನ್‌ಶಿಪ್‌ಗಳು ಹೇಗಿರುತ್ತವೆ ಎಂಬುದನ್ನು ಇದರಲ್ಲಿ ನೋಡಬಹುದು. -ಸೂರಜ್‌ ಗೌಡ, ನಟ, ನಿರ್ದೇಶಕ