ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಿದ ತಮಿಳು ನಟ ಸೂರ್ಯ ಕುಟುಂಬ

ತಮಿಳಿನ ಖ್ಯಾತ ನಟ ಶಿವಕುಮಾರ್ ಮತ್ತು ಮಕ್ಕಳಾದ ಸೂರ್ಯ ಹಾಗೂ ಕಾರ್ತಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಟ ಸೂರ್ಯ ಕುಟುಂಬ ಒಂದು ಕೋಟಿ ರೂಪಾಯಿ ಕೊಟ್ಟಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಿದ ತಮಿಳು ನಟ ಸೂರ್ಯ ಕುಟುಂಬ
Linkup
ತಮಿಳಿನ ಖ್ಯಾತ ನಟ ಮತ್ತು ಮಕ್ಕಳಾದ ಹಾಗೂ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಟ ಸೂರ್ಯ ಕುಟುಂಬ ಒಂದು ಕೋಟಿ ರೂಪಾಯಿ ಕೊಟ್ಟಿದ್ದಾರೆ. ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ಗೆ ಒಂದು ಕೋಟಿ ರೂಪಾಯಿ ಮೊತ್ತದ ಚೆಕ್‌ಅನ್ನು ನಟ ಸೂರ್ಯ ಹಸ್ತಾಂತರಿಸಿದ್ದಾರೆ. ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯಿಂದಾಗಿ ಇಡೀ ದೇಶ ತತ್ತರಿಸಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜನರಿಗೆ ಸೂಕ್ತ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ ಸಿಗಲಿ ಹಾಗೂ ಸಕಲ ರೀತಿಯಲ್ಲಿ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ನಟ ಸೂರ್ಯ, ಸಹೋದರ ಕಾರ್ತಿ ಹಾಗೂ ತಂದೆ ಶಿವಕುಮಾರ್ ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಬುಧವಾರ (ಮೇ 12) ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ನಟ ಶಿವಕುಮಾರ್ ಮತ್ತು ಮಕ್ಕಳು ಭೇಟಿ ಮಾಡಿ, ಚೆಕ್ ಹಸ್ತಾಂತರಿಸಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ್ಹಾಗೆ, ನಟ ಸೂರ್ಯ ಅಭಿನಯಿಸಿದ್ದ 'ಸೂರರೈ ಪೊಟ್ರು' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಸದ್ಯ ಪಾಂಡಿರಾಜ್ ನಿರ್ದೇಶನದ ಚಿತ್ರ ಹಾಗೂ ಟಿ.ಜೆ.ಜ್ಞಾನವೇಲ್ ನಿರ್ದೇಶನದ ಚಿತ್ರಗಳಲ್ಲಿ ನಟ ಸೂರ್ಯ ಬಿಜಿಯಾಗಿದ್ದಾರೆ. ಇನ್ನೂ ಕಾರ್ತಿಕ್ ಅಭಿನಯದ 'ಸುಲ್ತಾನ್' ಚಿತ್ರ ಇದೇ ವರ್ಷ ಬಿಡುಗಡೆಯಾಗಿತ್ತು. ಇದೀಗ 'ಪೊಣ್ಣಿಯಿನ್ ಸೆಲ್ವನ್' ಹಾಗೂ 'ಸರ್ದಾರ್' ಚಿತ್ರಗಳಲ್ಲಿ ಕಾರ್ತಿ ತೊಡಗಿದ್ದಾರೆ. ಕೋವಿಡ್‌ನಿಂದಾಗಿ ಚಲನಚಿತ್ರ ಚಟುವಟಿಕೆಗಳು ಬಂದ್ ಆಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ಸೂರ್ಯ, ಕಾರ್ತಿ ಹಾಗೂ ಶಿವಕುಮಾರ್ ತೊಡಗಿದ್ದಾರೆ.