Ninna Sanihake: ಡಾ. ರಾಜ್ ಮೊಮ್ಮಗಳ 'ನಿನ್ನ ಸನಿಹಕೆ' ಸಿನಿಮಾಗಾಗಿ ಕಾದಿದ್ದವರಿಗೆ ನಿರಾಸೆ!

ನಟ ಸೂರಜ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ, ಡಾ. ರಾಜ್‌ಕುಮಾರ್ ಮೊಮ್ಮಗಳು, ನಟ ರಾಮ್‌ಕುಮಾರ್ ಪುತ್ರಿ ಧನ್ಯಾ ನಟಿಸಿರುವ 'ನಿನ್ನ ಸನಿಹಕೆ' ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ವಾರ (ಆ.20) ಆ ಸಿನಿಮಾ ತೆರೆಗೆ ಬರಬೇಕಿತ್ತು.

Ninna Sanihake: ಡಾ. ರಾಜ್ ಮೊಮ್ಮಗಳ 'ನಿನ್ನ ಸನಿಹಕೆ' ಸಿನಿಮಾಗಾಗಿ ಕಾದಿದ್ದವರಿಗೆ ನಿರಾಸೆ!
Linkup
ಸೂರಜ್‌ ನಟನೆ ಮತ್ತು ನಿರ್ದೇಶನದ ಮತ್ತು ಡಾ. ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ನಟನೆಯ '' ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿದೆ. ಇತ್ತೀಚೆಗೆ ಲಾಕ್‌ಡೌನ್‌ ಕುರಿತ ಸರ್ಕಾರದ ನಿರ್ಧಾರದಿಂದ ಸೂರಜ್‌ ಈ ವಾರ ರಿಲೀಸ್‌ ಮಾಡದಿರಲು ನಿರ್ಧರಿಸಿದ್ದಾರೆ. 'ನಿನ್ನ ಸನಿಹಕೆ' ಚಿತ್ರವನ್ನು ವರಮಹಾಲಕ್ಷ್ಮಿ ಹಬ್ಬದಂದು ರಾಜ್ಯದಾದ್ಯಂತ ರಿಲೀಸ್‌ ಮಾಡಲಿರುವುದಾಗಿ ಪ್ರಕಟಿಸಲಾಗಿತ್ತು. ಆದರೆ, ಈಗ ಸರ್ಕಾರ ಇದುವರೆಗೆ ಇರುವ ವೀಕೆಂಡ್‌ ಲಾಕ್‌ಡೌನ್‌ ಮತ್ತು ಸಂಜೆ ಕರ್ಫ್ಯೂ ನಿಯಮಗಳನ್ನು ಮುಂದುವರಿಸುತ್ತಿರುವುದರಿಂದ ಸಿನಿಮಾ ರಿಲೀಸ್‌ ಮಾಡದಿರಲು ಸೂರಜ್‌ ನಿರ್ಧರಿಸಿದ್ದಾರೆ. ನಮ್ಮ 'ನಿನ್ನ ಸನಿಹಕ' ಚಿತ್ರದ ಎಲ್ಲಾ ಹಾಡು ಮತ್ತು ಟ್ರೈಲರ್ ಅನ್ನು ನೀವೆಲ್ಲರೂ ನೋಡಿ ಇಷ್ಟಪಟ್ಟು ಹರಸಿ ಹಾರೈಸಿದ್ದೀರಿ, ನಿಮ್ಮೆಲ್ಲರ ನಿರಂತರ ಬೆಂಬಲ ಹಾಗೂ ಚಿತ್ರದ ಮೇಲಿನ ನಿಮ್ಮ ಪ್ರೀತಿಗೆ ತಂಡದ ಪರವಾಗಿ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ಕೋವಿಡ್-19ರ ಅಸಹಜ ಸ್ಥಿತಿಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಇರುವ ಕಾರಣ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಬರುವ ನಮ್ಮ ಪ್ರೇಕ್ಷಕರ ಕಾಳಜಿಯನ್ನು ಪರಿಗಣಿಸಿ ಚಿತ್ರದ ಬಿಡುಗಡೆಯನ್ನು ಕೆಲ ದಿನಗಳ ಕಾಲ ಮುಂದೆ ಹಾಕಬೇಕಾದ ಕಠಿಣ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸುತ್ತಿರುವುದು ವಿಷಾದದ ಸಂಗತಿಯೇ ಸರಿ. ಆದರೆ ನಿಮ್ಮೆಲ್ಲರ ಸುರಕ್ಷೆ ನಮ್ಮ ಮೊದಲ ಆದ್ಯತೆ ಆಗಿರುವುದರಿಂದ ಹೆಚ್ಚು ದಿನ ತಡ ಮಾಡದೇ ಸದ್ಯದಲ್ಲೇ ಸುರಕ್ಷಿತವಾದ ದಿನಾಂಕದೊಂದಿಗೆ ಚಿತ್ರಮಂದಿರಕ್ಕೆ ಬರುತ್ತೇವೆ ಎಂದು ಈ ಮೂಲಕ ತಿಳಿಸುತ್ತೇವೆ' ಎಂದು 'ನಿನ್ನ ಸನಿಹಕೆ' ಚಿತ್ರತಂಡ ಹೇಳಿಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚಿತ್ರದ ಹೀರೋ ಮತ್ತು ನಿರ್ದೇಶಕ ಸೂರಜ್ ಗೌಡ, 'ನಾವು ಈ ನಿಯಮಗಳನ್ನು ತೆಗೆದುಹಾಕುತ್ತಾರೆ ಎಂದು ನಿರೀಕ್ಷಿಸಿ, ಈ ವಾರ ಸಿನಿಮಾ ರಿಲೀಸ್‌ ಮಾಡಲು ಮೊದಲು ಪ್ಲ್ಯಾನ್ ಮಾಡಿದ್ದೆವು. ಆದರೆ, ಅದಾಗಲಿಲ್ಲ. ವೀಕೆಂಡ್‌ ಲಾಕ್‌ಡೌನ್‌ ಮತ್ತು ಕರ್ಫ್ಯೂನಿಂದಾಗಿ ಸಂಜೆ ಕಲೆಕ್ಷನ್‌ಗೆ ಹೊಡೆತ ಬೀಳುತ್ತದೆ. ನಿಯಮ ಸಡಿಲಿಕೆ ಆದ ನಂತರ ರಿಲೀಸ್‌ ಮಾಡಲಿದ್ದೇವೆ. ಮುಂದಿನ ಒಂದೆರಡು ವಾರಗಳಲ್ಲಿ ರಿಲೀಸ್‌ ಆಗುವ ಭರವಸೆ ಇದೆ' ಎಂದಿದ್ದಾರೆ. ಮೊದಲ ಬಾರಿಗೆ ರಾಜ್ ಮೊಮ್ಮಗಳು ಧನ್ಯಾ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಸಂಗೀತ ನಿರ್ದೇಶನ ಈ ಸಿನಿಮಾದ ಹಾಡುಗಳು ಈಗಾಗಲೇ ದೊಡ್ಡ ಹಿಟ್ ಆಗಿವೆ. ಚಿತ್ರದ ಎಲ್ಲ ಹಾಡುಗಳಿಗೆ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ.