ರೇಪ್ ದೃಶ್ಯವಿದ್ದಾಗಲೆಲ್ಲ ನನ್ನ ಕರೆದು 'ರೇಪ್ ಸ್ಪೆಷಲಿಸ್ಟ್' ಅಂತ ಬಿರುದು ಕೊಟ್ಟುಬಿಟ್ರು: ನಟ ರಂಜೀತ್

ಬಾಲಿವುಡ್‌ನ 350ಕ್ಕೂ ಅಧಿಕ ಸಿನಿಮಾ, ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ರಂಜೀತ್ ಅವರಿಗೆ 'ರೇಪ್ ಸ್ಪೆಷಲಿಸ್ಟ್' ಎಂದು ಬಿರುದು ನೀಡಲಾಗಿತ್ತು. ಯಾವುದೇ ರೇಪ್ ದೃಶ್ಯವಿದ್ದರೂ ಕೂಡ ರಂಜೀತ್ ಅವರನ್ನು ಕರೆಯಲಾಗುತ್ತಿತ್ತಂತೆ.

ರೇಪ್ ದೃಶ್ಯವಿದ್ದಾಗಲೆಲ್ಲ ನನ್ನ ಕರೆದು 'ರೇಪ್ ಸ್ಪೆಷಲಿಸ್ಟ್' ಅಂತ ಬಿರುದು ಕೊಟ್ಟುಬಿಟ್ರು: ನಟ ರಂಜೀತ್
Linkup
ಖಳನಾಯಕ-ಖಳನಾಯಕಿಯರು ಸಿನಿಮಾ, ಧಾರಾವಾಹಿಯಲ್ಲಿ ರಾಕ್ಷಸ ಗುಣ ಪ್ರದರ್ಶನ ಮಾಡುತ್ತಾರೆ. ಇದು ತೆರೆಗೋಸ್ಕರ ಸೀಮಿತ. ಆದರೆ ಕೆಲವರು ಅವರನ್ನು ನಿಜ ಜೀವನದಲ್ಲಿಯೂ ವಿಲನ್ ಆಗಿ ನೋಡುತ್ತಾರೆ ಎಂಬುದು ದುರಂತ. ಅಂತೆಯೇ 350ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ನಟ ಅವರನ್ನು 'ರೇಪ್ ಸ್ಪೆಷಲಿಸ್ಟ್' ಅಂತ ಕರೆಯಲಾಗುತ್ತಿತ್ತಂತೆ.. 70ರ ದಶಕದ ಖಳನಾಯಕ ರಂಜೀತ್ ರಂಜೀತ್ 70 ರ ದಶಕದಲ್ಲಿ ಖಳನಾಯಕನ ಪಾತ್ರ ಮಾಡಿ ಅಬ್ಬರಿಸಿದ್ದರು. ಹುಡುಗಿಯ ರೇಪ್ ಮಾಡೋದು, ಕೊಲೆ, ಸುಲಿಗೆ-ಮೋಸ, ವಂಚನೆ ಈ ಎಲ್ಲ ದೃಶ್ಯಗಳಲ್ಲಿ ರಂಜೀತ್ ಕಾಣಿಸಿಕೊಂಡಿದ್ದರು. ಸಿನಿಮಾಗಳಲ್ಲಿ ರಂಜೀತ್ ಅವರು ರೇಪಿಸ್ಟ್ ಆಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಟಿವಿ ಧಾರಾವಾಹಿಗಳಲ್ಲಿ ಅವರು ಪಾಸಿಟಿವ್ ಪಾತ್ರ ಪೋಷಾಕು ಧರಿಸಿದ್ದರು. ಇತ್ತೀಚೆಗೆ ಅವರು ಚಿತ್ರರಂಗದಲ್ಲಿ ತಾನು ಹೇಗೆ ಕಾಣಿಸಿಕೊಂಡಿದ್ದೆ ಎಂಬುದನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ವಿಲನ್ ಪಾತ್ರ ಮಾಡುತ್ತಿರುವುದಕ್ಕೆ ಬೇಸರಪಟ್ಟುಕೊಂಡಿದ್ದ ರಂಜೀತ್ ಕುಟುಂಬ ಆಗಿನ ಕಾಲದಲ್ಲಿ ಸಿನಿಮಾ ಒಪ್ಪಿಕೊಳ್ಳುವ ಮುಂಚೆ ಕಥೆ ಕೇಳುವ ಅಭ್ಯಾಸ ಇರುತ್ತಿರಲಿಲ್ಲವಂತೆ. ಸ್ಕ್ರಿಪ್ಟ್ ಬದಲಾಗಬೇಕು ಅಂತ ರಂಜೀತ್ ಎಂದಿಗೂ ಹೇಳುತ್ತಿರಲಿಲ್ಲ. ಅಷ್ಟೇ ಅಲ್ಲದೆ ಖಳನಾಯಕನ ಪಾತ್ರ ಮಾಡುವುದರಲ್ಲಿ ಯಾವುದೇ ಸಮಸ್ಯೆಯೂ ಇರಲಿಲ್ಲ. ಆದರೆ ರಂಜೀತ್ ಕುಟುಂಬ ಆರಂಭದಲ್ಲಿ ವಿಲನ್ ಪಾತ್ರ ಮಾಡುತ್ತಿರುವುದಕ್ಕೆ ಬೇಸರಪಟ್ಟುಕೊಂಡರೂ ಕೂಡ, ಆಮೇಲೆ ವೃತ್ತಿ ಎಂದು ಸಮಾಧಾನ ಹೊಂದಿತ್ತು. ಯಾವುದೇ ರೇಪ್ ದೃಶ್ಯವಿದ್ದರೂ ರಂಜೀತ್‌ಗೆ ಕರೆ ಹೋಗುತ್ತಿತ್ತು "ನನ್ನ ಭವಿಷ್ಯ ಹೀಗೆ ಇರಬೇಕು ಅಂತ ನಾನು ಯಾವತ್ತೂ ಪ್ಲ್ಯಾನ್ ಮಾಡಿದವನಲ್ಲ. ನನ್ನ ಬಳಿಗೆ ಬಂದಿದ್ದನ್ನು ಸ್ವೀಕರಿಸುತ್ತ ಹೋದೆ. ಹೀರೋಯಿನ್‌ಗಳಿಗೆ ಇರಿಸುಮುರಿಸು ಆಗಬಾರದು ಅಂತ ನಾನು ನನ್ನ ಪಾಡಿಗೆ ಹೋಗಿಬಿಡುತ್ತಿದ್ದೆ. ನಾನು ಕೆಲ ಸಿನಿಮಾಗಳನ್ನು ಒಪ್ಪಿಕೊಳ್ಳದಿದ್ದಾಗಲೂ ಕೂಡ, ಕೆಲ ನಿರ್ದೇಶಕರು ಸಿನಿಮಾದಲ್ಲಿ ರೇಪ್ ದೃಶ್ಯ ಇದ್ದರೆ ನನ್ನ ಕರೆಯುತ್ತಿದ್ದರು. ಆನಂತರದಲ್ಲಿ ರೇಪ್ ಸ್ಪೆಷಲಿಸ್ಟ್ ಎಂದು ಬಿರುದು ಬಂತು" ಎಂದು ರಂಜೀತ್ ಹೇಳಿದ್ದಾರೆ. ಮೊದಲ ಸಿನಿಮಾ ಯಶಸ್ಸು ಕಾಣದಿದ್ದಾಗ ದೆಹಲಿಗೆ ಮರಳಲು ಯೋಚಿಸಿದ್ದ ರಂಜೀತ್ ಆಕಸ್ಮಿಕವಾಗಿ ನಟನಾದ ರಂಜೀತ್ ಅವರು ಸಾಕಷ್ಟು ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ. ಮೊದಲ ಸಿನಿಮಾ ಯಶಸ್ಸು ಕಾಣದಿದ್ದಾಗ ಮುಂಬೈನಿಂದ ಮತ್ತೆ ದೆಹಲಿಗೆ ಹೋಗಲು ಅವರು ಪ್ಲ್ಯಾನ್ ಮಾಡಿದ್ದರಂತೆ. ಜೊತೆಗೆ ರಂಜೀತ್ ಒಡನಾಟವಿತ್ತು. 'ರೇಷ್ಮಾ ಔರ ಶೆರಾ' ಸಿನಿಮಾದಲ್ಲಿ ನಟಿಸುವ ಅವಕಾಶ ಗಳಿಸಿದ ನಂತರದಲ್ಲಿ ರಂಜೀತ್‌ಗೆ ಒಂದಾದ ಮೇಲೆ ಒಂದರಂತೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಟ ರಂಜೀತ್‌ ಅವರು ಗೋಪಾಲ್ ಬೇಡಿ ಎಂದು ಮೊದಲು ಹೆಸರಿತ್ತು. 'ಹೌಸ್‌ಫುಲ್', 'ತಿಯಾನ್', 'ದಿಲ್ ದಿಯಾ ಹೇ', 'ಬೊಂಬೆ ಟು ಗೋವಾ' ಮುಂತಾದ ಸಿನಿಮಾಗಳಲ್ಲಿ ರಂಜೀತ್ ನಟಿಸಿದ್ದಾರೆ. ಸಾಕಷ್ಟು ಧಾರಾವಾಹಿಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ. ನಿರ್ದೇಶಕ, ನಿರ್ಮಾಪಕನಾಗಿಯೂ ರಂಜೀತ್ ಗುರುತಿಸಿಕೊಂಡಿದ್ದಾರೆ.