Darshan: 'ಯಾವುದೇ ಕಾರಣಕ್ಕೂ ರಾಜಿ ಆಗಲ್ಲ'- ನಿರ್ಮಾಪಕ ಉಮಾಪತಿ ಶ್ರೀನಿವಾಸ್‌

'ಚಾಲೆಂಜಿಂಗ್ ಸ್ಟಾರ್' ದರ್ಶನ್ ಹೆಸರಿನಲ್ಲಿ 25 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಬಂದಿದೆ ಎಂಬ ಕಾರಣ ಕೊಟ್ಟು ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣಾ ಕುಮಾರಿ ಎಂಬ ಮಹಿಳೆಯನ್ನು, ದರ್ಶನ್‌ ಅವರಿಗೆ ಭೇಟಿ ಮಾಡಿಸಿದ್ದ ಪ್ರಕರಣ ಈಗ ಸಾಕಷ್ಟು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬುಧವಾರ ಈ ಪ್ರಕರಣದ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

Darshan: 'ಯಾವುದೇ ಕಾರಣಕ್ಕೂ ರಾಜಿ ಆಗಲ್ಲ'- ನಿರ್ಮಾಪಕ ಉಮಾಪತಿ ಶ್ರೀನಿವಾಸ್‌
Linkup
ನಟ ಅವರ ಹೆಸರಿನಲ್ಲಿ 25 ಕೋಟಿ ರೂ. ಸಾಲಕ್ಕೆ ಅರ್ಜಿಕ್ಕೆ ಹಾಕಿದ್ದರು ಎಂಬ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಇದು ದರ್ಶನ್ ಸ್ನೇಹಿತರು ವರ್ಸಸ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಎಂಬಂತೆ ಆಗಿತ್ತು. ಆನಂತರ ದರ್ಶನ್‌ ಅವರು ಕೂಡ ಮೈಸೂರಿನಲ್ಲಿ ಪ್ರೆಸ್‌ಮೀಟ್ ಮಾಡಿದ್ದರು. ಮಂಗಳವಾರ (ಜು.13) ನಿರ್ಮಾಪಕರ ಪರವಾಗಿಯೂ ಅವರು ಮಾತನಾಡಿದ್ದರು. ಇಂದು (ಜು.14) ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್, 'ನಾನು ಮತ್ತು ದರ್ಶನ್ ಅವರು ಸದಾ ಕಾಲ ಜೊತೆಗೆ ಇರುತ್ತೇವೆ. ನಮ್ಮನ್ನು ದೂರ ಮಾಡೋಕೆ ಯಾರಿಗೂ ಆಗಲ್ಲ' ಎಂದಿದ್ದಾರೆ. ಜೊತೆಗೆ, ಈ ಪ್ರಕರಣದಲ್ಲಿ ರಾಜಿ ಆಗೋದಿಲ್ಲ ಎಂಬ ಮಾತುಗಳನ್ನು ಅವರು ಹೇಳಿದ್ದಾರೆ. ನಾನಾಗಲೀ, ದರ್ಶನ್ ಅವರಗಾಲೀ ರಾಜಿ ಮಾಡಿಕೊಳ್ಳಲ್ಲ! 'ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ತನಿಖೆ ನಡೆಯುತ್ತಿದೆ. ಅದು ತನಿಖೆ ಆಗುತ್ತಿರಲಿ. ಕೇಸ್ ವಿಚಾರದಲ್ಲಿ ನಾನಾಗಲೀ, ದರ್ಶನ್ ಅವರಗಾಲೀ ರಾಜಿ ಮಾಡಿಕೊಳ್ಳೋದೇ ಇಲ್ಲ. ಅದು ನಡೆಯುತ್ತಿರುತ್ತದೆ. ನಮ್ಮ ಅವರ ಸಂಬಂಧ ಸದಾ ಕಾಲ ಹಾಗೇ ಇರುತ್ತದೆ. ನಾವು ಜೊತೆಗೆ ಮಾತನಾಡುತ್ತಿದ್ದೇವೆ. ನಮ್ಮ ಮಧ್ಯೆ ತಂದಿಡುವುದಕ್ಕೆ ನೋಡಿದ್ರು, ಇದೀಗ ಅದೆಲ್ಲದಕ್ಕೂ ದರ್ಶನ್ ಅವರೇ ಉತ್ತರ ಕೊಟ್ಟಿದ್ದಾರೆ. ಯಾರಿಗೆ ಏನ್ ಉತ್ತರ ಸಿಗಬೇಕಿತ್ತೋ, ಸಿಕ್ಕಿದೆ' ಎಂದು ಉಮಾಪತಿ ಶ್ರೀನಿವಾಸ್. 'ನಾನು ಮತ್ತು ದರ್ಶನ್ ಸರ್ ಚೆನ್ನಾಗಿಯೇ ಇದ್ದೇವೆ' ಕಾನೂನು ಚೌಕಟ್ಟಿನಲ್ಲಿ ನಾನು ಮನವಿ ಮಾಡಿಕೊಂಡಿರುವುದು ಸಾಬೀತು ಆಗಬೇಕು. ಆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಸಂಧಾನ ಮಾಡಿಕೊಳ್ಳುವುದಿಲ್ಲ. ನಾವು ಮತ್ತು ದರ್ಶನ್ ಸರ್ ಚೆನ್ನಾಗಿಯೇ ಇದ್ದೇವೆ. ಸ್ನೇಹಿತರದ್ದು ಏನಿತ್ತೋ, ಅದು ಸಂಧಾನ ಆಗಿದೆ ಅಂತ ಹೇಳಿದ್ದು. ಅದು ಬಿಟ್ಟರೆ ಬೇರೇ ಏನಿಲ್ಲ. ದರ್ಶನ್ ಅವರಿಗೆ ಎಲ್ಲವೂ ಗೊತ್ತಿದೆ. ಅವರು ನಿನ್ನೆಯೇ ಮಾಹಿತಿ ನೀಡಿದ್ದಾರೆ. ಮಂಗಳವಾರವೇ ದರ್ಶನ್‌ ಅವರನ್ನು ಭೇಟಿ ಮಾಡಿ, ಪ್ರೀತಿ-ವಿಶ್ವಾಸದಿಂದ ಮಾತನಾಡಿದ್ದೇವೆ' ಎಂದಿದ್ದಾರೆ ಉಮಾಪತಿ. ಮಂಗಳವಾರ (ಜು.13) ದರ್ಶನ್ ಹೇಳಿದ್ದೇನು? 'ನಾನು ಈಗಲೂ ಉಮಾಪತಿಯವರ ಬಗ್ಗೆ ಏನೂ ಹೇಳಲ್ಲ. ಅವರು ನಮ್ಮ ನಿರ್ಮಾಪಕರು, ಯಾವಾಗಲೂ ನಿರ್ಮಾಪಕರೇ. ಈ ಬಗ್ಗೆ ನಾನು ಅವರು ಮಾತಾಡಿಕೊಳ್ಳುತ್ತೇವೆ. ಇದೇನಾದ್ರೂ ನಿಲ್ಲುವಂತಹ ಪ್ರಕರಣವೇ? ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರನ್ನು ನಾನು ಬಿಟ್ಟುಕೊಡುವುದಿಲ್ಲ. ಇವಾಗಲೂ ಅವರ ಜೊತೆ ಮಾತಾಡಿದ್ದೇನೆ. ಚೆಂಡು ಅವರ ಅಂಗಳದಲ್ಲಿ ಇತ್ತು. ಇಂದು ಅವರೂ ಆ ಬಗ್ಗೆ ಮಾತನಾಡಿದ್ದಾರೆ. ಎಲ್ಲವನ್ನೂ ಇಲ್ಲಿಗೇ ಮುಗಿಸೋಣ' ಎಂದಿದ್ದರು ದರ್ಶನ್. ದರ್ಶನ್ ಅವರ ಹೆಸರಿನಲ್ಲಿ 25 ಕೋಟಿ ರೂ. ವಂಚನೆಗೆ ಯತ್ನಿಸಿದ ಪ್ರಕರಣ ದಿನದಿಂದ ದಿನಕ್ಕೆ ರೋಚಕ ಟ್ವಿಸ್ಟ್‌ ಪಡೆಯುತ್ತಿದೆ. ಅರುಣಾ ಕುಮಾರಿ ಎಂಬ ನಕಲಿ ಬ್ಯಾಂಕ್ ಮ್ಯಾನೇಜರ್ ಈ ಪ್ರಕರಣದ ಹಿಂದೆ ಇದ್ದರು. ಇದೀಗ ಅವರನ್ನು ವಿಚಾರಣೆ ಮಾಡಲಾಗಿದೆ. ಇನ್ನು, ಈ ಮಹಿಳೆಯ ಹಿಂದೆ ಯಾರಿದ್ದಾರೆ? ಇಷ್ಟೆಲ್ಲ ರಾದ್ದಾಂತಕ್ಕೆ ಯಾರು ಕಾರಣ ಅನ್ನೋದು ಈಗ ಚರ್ಚೆಯ ವಿಷಯವಾಗಿದೆ.