400 ಬುಡಕಟ್ಟು ಕುಟುಂಬಗಳ ನೆರವಿಗೆ ಧಾವಿಸಿದ ರಾಣಾ ದಗ್ಗುಬಾಟಿ

ತೆಲುಗು ನಟ ರಾಣಾ ದಗ್ಗುಬಾಟಿ ಸುಮಾರು 400 ಬುಡಕಟ್ಟು ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.

400 ಬುಡಕಟ್ಟು ಕುಟುಂಬಗಳ ನೆರವಿಗೆ ಧಾವಿಸಿದ ರಾಣಾ ದಗ್ಗುಬಾಟಿ
Linkup
ಕೋವಿಡ್ ಎರಡನೇ ಅಲೆ ಹಾಗೂ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಹಳಷ್ಟು ಜನರಿಗೆ ಅನೇಕ ಸ್ಟಾರ್‌ಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ತೆಲುಗು ನಟ ಕೂಡ ಜನರಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಸುಮಾರು 400 ಬುಡಕಟ್ಟು ಕುಟುಂಬಗಳಿಗೆ ರಾಣಾ ದಗ್ಗುಬಾಟಿ ಸಹಾಯ ಹಸ್ತ ಚಾಚಿದ್ದಾರೆ. ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿರುವ ಬುಡಕಟ್ಟು ಕುಟುಂಬಗಳಿಗೆ ಕೋವಿಡ್‌ನಂತಹ ಸಾಂಕ್ರಾಮಿಕ ಸಮಯದಲ್ಲಿ ಬೇಕಾಗಿರುವ ಅವಶ್ಯಕ ಮೂಲಭೂತ ವ್ಯವಸ್ಥೆಯನ್ನು ರಾಣಾ ದಗ್ಗುಬಾಟಿ ಕಲ್ಪಿಸಿದ್ದಾರೆ. ಅಲ್ಲಿನ ಎಲ್ಲಾ ಹಳ್ಳಿಗಳಿಗೂ ದಿನಸಿ ಸಾಮಗ್ರಿಗಳು ಹಾಗೂ ಅತ್ಯವಶ್ಯಕ ಔಷಧಿಗಳನ್ನು ರಾಣಾ ದಗ್ಗುಬಾಟಿ ತಂಡ ಒದಗಿಸಿದೆ. ಹಾಗ್ನೋಡಿದರೆ, ರಾಣಾ ದಗ್ಗುಬಾಟಿ ಅಭಿನಯದ 'ಅರಣ್ಯ' ಚಿತ್ರ ಇತ್ತೀಚೆಗಷ್ಟೇ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಕಾಡಿನಲ್ಲಿ ಆನೆಗಳ ಜೊತೆಗೆ ವಾಸಿಸುವ ವ್ಯಕ್ತಿಯ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಅಭಿನಯಿಸಿದ್ದರು. ಚಿತ್ರೀಕರಣದ ವೇಳೆ ಬುಡಕಟ್ಟು ಜನರ ಕಷ್ಟವನ್ನು ಕಣ್ಣಾರೆ ಕಂಡಿದ್ದ ರಾಣಾ ದಗ್ಗುಬಾಟಿ ಇದೀಗ ಅದೇ ಜನರ ಕಷ್ಟಕ್ಕೆ ಮಿಡಿದಿದ್ದಾರೆ. ಅಂದ್ಹಾಗೆ, ಸದ್ಯ ತೆಲುಗಿನ 'ವಿರಾಟ ಪರ್ವಂ' ಮತ್ತು ಇನ್ನೂ ಹೆಸರಿಡದ ರೀಮೇಕ್ ಚಿತ್ರವೊಂದರಲ್ಲಿ ನಟ ರಾಣಾ ದಗ್ಗುಬಾಟಿ ಬಿಜಿಯಾಗಿದ್ದಾರೆ. ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದ ಬಳಿಕ ಈ ಎರಡೂ ಚಿತ್ರಗಳ ಶೂಟಿಂಗ್ ಮತ್ತೆ ಆರಂಭವಾಗಲಿದೆ.