ಪ್ರಜ್ವಲ್ ದೇವರಾಜ್ & ರಚಿತಾ ರಾಮ್ ನಟನೆಯ 'ವೀರಂ' ಚಿತ್ರದಲ್ಲಿ ಖಡಕ್ ವಿಲನ್!

ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಚಿರಾಗ್ ಜಾನಿ 'ವೀರಂ' ಚಿತ್ರದಲ್ಲಿ ಖಡಕ್ ಕೇಡಿ ಪಾತ್ರದಲ್ಲಿ ಮಿಂಚಲಿದ್ದಾರೆ.

ಪ್ರಜ್ವಲ್ ದೇವರಾಜ್ & ರಚಿತಾ ರಾಮ್ ನಟನೆಯ 'ವೀರಂ' ಚಿತ್ರದಲ್ಲಿ ಖಡಕ್ ವಿಲನ್!
Linkup
ಡೈನಾಮಿಕ್ ಪ್ರಿನ್ಸ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಚಿತ್ರ ''. ಖಾದರ್ ಕುಮಾರ್ ನಿರ್ದೇಶನದ 'ವೀರಂ' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ದೀಪಕ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಇದೀಗ ಇದೇ ಚಿತ್ರತಂಡಕ್ಕೆ ಖಡಕ್ ವಿಲನ್ ಎಂಟ್ರಿಕೊಟ್ಟಿದ್ದಾರೆ. ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ 'ವೀರಂ' ಚಿತ್ರದಲ್ಲಿ ಖಡಕ್ ಕೇಡಿ ಪಾತ್ರದಲ್ಲಿ ಮಿಂಚಲಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ದೀಪಕ್ ಕುಮಾರ್ ಜೊತೆ ಸೇರಿ ಪ್ರಜ್ವಲ್ ದೇವರಾಜ್ ವಿರುದ್ಧ ಚಿರಾಗ್ ಜಾನಿ ತೊಡೆ ತಟ್ಟಿ ನಿಲ್ಲಲಿದ್ದಾರೆ. ಈ ಹಿಂದೆ ಪುರಿ ಜಗನ್ನಾಥ್ ನಿರ್ದೇಶನದ ಇಶಾನ್ ನಟನೆಯಲ್ಲಿ ಮೂಡಿಬಂದ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಕಂಡ 'ರೋಗ್' ಚಿತ್ರದಲ್ಲಿ ಚಿರಾಗ್ ಜಾನಿ ನಟಿಸಿದ್ದರು. ಇದೀಗ 'ವೀರಂ' ಚಿತ್ರಕ್ಕಾಗಿ ಸ್ಯಾಂಡಲ್‌ವುಡ್‌ಗೆ ಚಿರಾಗ್ ಜಾನಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ತಮಿಳಿನ 'ಅಂಜಾನ್', 'ಕಾಪ್ಪಾನ್', 'ಉನ್ ಕಾದಲ್ ಇರುಂದಾಳ್' ಚಿತ್ರಗಳಲ್ಲಿ ಚಿರಾಗ್ ಜಾನಿ ವಿಲನ್ ಆಗಿ ಅಬ್ಬರಿಸಿದ್ದರು. ಸದ್ಯ 'ರಾಮ್' ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಚಿರಾಗ್ ಜಾನಿ ಅತಿ ಶೀಘ್ರದಲ್ಲೇ 'ವೀರಂ' ಚಿತ್ರದ ಶೂಟಿಂಗ್ ಸೆಟ್‌ಗೆ ಸೇರಿಕೊಳ್ಳಲಿದ್ದಾರೆ. 'ವೀರಂ' ಚಿತ್ರದ ಶೂಟಿಂಗ್ ಈಗಾಗಲೇ ಆರಂಭಗೊಂಡಿದ್ದು, ಆಗಸ್ಟ್ ಅಂತ್ಯದೊಳಗೆ ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆಯುವುದು ಚಿತ್ರತಂಡದ ಪ್ಲಾನ್. ಪ್ರಜ್ವಲ್ ದೇವರಾಜ್ ಜನ್ಮದಿನದ ಪ್ರಯುಕ್ತ 'ವೀರಂ' ಚಿತ್ರದ ಸ್ಪೆಷಲ್ ಟೀಸರ್ ಬಿಡುಗಡೆಯಾಗಿತ್ತು. ಸ್ಪೆಷಲ್ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಅಂದ್ಹಾಗೆ, 'ವೀರಂ' ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ.