'ಬಹದ್ದೂರ್ ಗಂಡು' ಚಿತ್ರಕ್ಕಾಗಿ ಭರ್ಜರಿ ಫೈಟ್ ಮಾಡಿದ 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್!

'ಕನ್ನಡತಿ' ಧಾರಾವಾಹಿ ಮೂಲಕ ದೊಡ್ಡ ಹೆಸರು ಸಂಪಾದಿಸಿರುವ ನಟ ಕಿರಣ್ ರಾಜ್‌ ಈಗ 'ಬಹದ್ದೂರ್ ಗಂಡು' ಆಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಿದ್ಧ್ ನಿರ್ದೇಶನದ ಈ ಸಿನಿಮಾದಲ್ಲಿ ಅವರು ಭಾರಿ ಫೈಟ್‌ ಕೂಡ ಮಾಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

'ಬಹದ್ದೂರ್ ಗಂಡು' ಚಿತ್ರಕ್ಕಾಗಿ ಭರ್ಜರಿ ಫೈಟ್ ಮಾಡಿದ 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್!
Linkup
'ಕನ್ನಡತಿ' ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟ ಕಿರಣ್‌ ರಾಜ್‌ ಇದೀಗ ಬಹದ್ದೂರ್‌ ಗಂಡು ಸಿನಿಮಾದಲ್ಲಿ ನಟಿಸುತ್ತಿದ್ದು, ಅದರಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಿದ್ಧ್‌ ನಿರ್ದೇಶನದ ಈ ಸಿನಿಮಾದ ಪಾತ್ರಕ್ಕಾಗಿ ಅವರು 6 ತಿಂಗಳು ತಯಾರಿ ಮಾಡಿಕೊಂಡಿದ್ದಾರೆ. ಇದರ ಚಿತ್ರೀಕರಣ ಶೇ. 60ರಷ್ಟು ಮುಗಿದಿದ್ದು, ಇಂದು ಟೀಸರ್‌ ರಿಲೀಸ್‌ ಆಗಲಿದೆ. 'ಕಿರಣ್‌ ರಾಜ್‌ ಬಹಳ ಡೆಡಿಕೇಟೆಡ್‌ ನಟ. ಬಹದ್ದೂರ್‌ ಗಂಡು ಟೈಟಲ್‌ಗೆ ತಕ್ಕಂತೆ ತಯಾರಾಗಬೇಕು ಎಂದು ಅವರಿಗೆ ಹೇಳಿದ್ದೆ. ಅದಕ್ಕೆ ತಕ್ಕಂತೆ ಅವರು ಬಾಡಿಬಿಲ್ಡ್‌ ಮಾಡಿ ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡರು. ಈ ಚಿತ್ರದಲ್ಲಿವಿಶೇಷವಾದ ಪೋಲ್‌ ಫೈಟ್‌ ಇದೆ. ಇದರಲ್ಲಿ ಅವರು ಕೋಲನ್ನು ಬಳಸಿ ಫೈಟ್‌ ಮಾಡಿದ್ದಾರೆ' ಎಂದಿದ್ದಾರೆ ನಿರ್ದೇಶಕ ಪ್ರಸಿದ್ಧ್‌. 'ರತ್ನಮಂಜರಿ' ಚಿತ್ರ ನಿರ್ದೇಶನ ಮಾಡಿರುವ ಅವರಿಗೆ ಇದು ಎರಡನೇ ಚಿತ್ರ. ಡಾ. ರಾಜ್‌ಕುಮಾರ್‌ ಅವರ ಮೇಲಿನ ಅಭಿಮಾನದಿಂದ ಚಿತ್ರಕ್ಕೆ 'ಬಹದ್ದೂರ್‌ ಗಂಡು' ಎಂಬ ಹೆಸರನ್ನು ಇಟ್ಟಿದ್ದೇವೆ ಎಂದು ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ಈ ಚಿತ್ರಕ್ಕಾಗಿ ವಿಶೇಷವಾಗಿ ದಿನವಿಡೀ ವರ್ಕೌಟ್‌ ಸೆಷನ್‌ನಲ್ಲಿ ಭಾಗಿಯಾಗಿದ್ದ ಕಿರಣ್ ರಾಜ್‌ ಮಾರ್ಷಲ್‌ ಆರ್ಟ್ಸ್ ಕೂಡ ಕಲಿತಿದ್ದಾರೆ. ಚಾಮರಾಜನಗರದಲ್ಲಿ ಮಳೆ ಪ್ರಾರಂಭ ಆಗುವ ಮೊದಲು ಈಶ್ವರನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಅಲ್ಲಿ ಸುಮಾರು 7 ವರ್ಷಗಳಿಂದ ಮಳೆ ಬಂದಿರುವುದಿಲ್ಲ. ಇದರ ನಡುವೆ ಹೀರೋ ನಗರದಿಂದ ಹಳ್ಳಿಗೆ ಬಂದು ಊರ ಜನರ ಪ್ರೀತಿ ಗಳಿಸುತ್ತಾನೆ. ಹಳ್ಳಿಗೆ ಬಂದ ಆತನ ಉದ್ದೇಶ ಏನು? ಅಲ್ಲಿ ಮಳೆ ಬರುತ್ತದಾ ಎನ್ನುವುದು ಈ ಸಿನಿಮಾದ ಕಥೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ, ಯಳಂದೂರು, ವಡ್ಡಗೆರೆ, ಸತ್ತಿಗಾಲ ಇತರೆ ಸ್ಥಳಗಳಲ್ಲಿ 30 ದಿನಗಳವರಗೆ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಮತ್ತು ನಿಸರ್ಗ ಲಕ್ಷ್ಮಣ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸ್ಪ್ಲಿಟ್‌ ಪರ್ಸನಾಲಿಟಿ ಸಿಂಡ್ರೋಮ್‌ ಇರುವಂತಹ ಹುಡುಗಿಯ ಪಾತ್ರ ಯಶಾ ಶಿವಕುಮಾರ್‌ಗೆ ಸಿಕ್ಕಿದೆ. ಚಿತ್ರದ ಛಾಯಾಗ್ರಾಹಣ ಕೆಲಸವನ್ನು ಚಾಮರಾಜನಗರದ ಕಿಟ್ಟಿ ಕೌಶಿಕ್ ಮಾಡಿದ್ದಾರೆ. ಮಳ್ಳವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ ಈ ಸಿನಿಮಾಕ್ಕಿದೆ. ತಾರಾಬಳಗದಲ್ಲಿ ಕರಿಸುಬ್ಬು, ನಾಗೇಶ್, 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಗೋವಿಂದೇಗೌಡ, ರಮೇಶ್ ಭಟ್ ನಟಿಸಿದ್ದಾರೆ.