ಡಾ.ರಾಜ್‌ ಜನ್ಮದಿನೋತ್ಸವ: ಅಣ್ಣಾವ್ರ ಸ್ಮರಣೆ ಮಾಡಿದ ತಾರೆಯರು

ಕನ್ನಡ ಚಿತ್ರರಂಗದ ತಾರೆಯರು ಇಂದು ಡಾ.ರಾಜ್‌ಕುಮಾರ್‌ರವರ ಸ್ಮರಣೆ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ತಮ್ಮ ನುಡಿಮುತ್ತುಗಳ ಮೂಲಕ ಸೆಲೆಬ್ರಿಟಿಗಳು ಡಾ.ರಾಜ್‌ಕುಮಾರ್‌ಗೆ ನಮನ ಸಲ್ಲಿಸಿದ್ದಾರೆ.

ಡಾ.ರಾಜ್‌ ಜನ್ಮದಿನೋತ್ಸವ: ಅಣ್ಣಾವ್ರ ಸ್ಮರಣೆ ಮಾಡಿದ ತಾರೆಯರು
Linkup
ಇಂದು ವರನಟ, ನಟ ಸಾರ್ವಭೌಮ ಡಾ.ರಾಜ್‌ಕುಮಾರ್‌ರವರ 92ನೇ ಜನ್ಮದಿನೋತ್ಸವ. ಅಣ್ಣಾವ್ರ ಹುಟ್ಟುಹಬ್ಬವನ್ನು ಪ್ರತಿ ವರ್ಷವೂ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದರು. ಆದರೆ ಕಳೆದ ವರ್ಷ ಮತ್ತು ಈ ವರ್ಷ ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಜನ್ಮದಿನವನ್ನು ಆಚರಿಸಲು ಅಭಿಮಾನಿಗಳಿಂದ ಸಾಧ್ಯವಾಗಿಲ್ಲ. ಸಾಮಾಜಿಕ ಕಾರ್ಯಗಳ ಮೂಲಕ ಅಣ್ಣಾವ್ರ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಸಾಧ್ಯವಾಗದಿದ್ದರೂ, ಡಾ.ರಾಜ್‌ಕುಮಾರ್‌ರವರ ಸ್ಮರಣೆ ಮಾಡುತ್ತ ಅಪ್ಪಾಜಿಯ ಹುಟ್ಟುಹಬ್ಬವನ್ನು ಅಭಿಮಾನಿ ದೇವರುಗಳು ಇವತ್ತು ಮನೆಯಲ್ಲೇ ಆಚರಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ತಾರೆಯರು ಕೂಡ ಇಂದು ಡಾ.ರಾಜ್‌ಕುಮಾರ್‌ರವರ ಸ್ಮರಣೆ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ತಮ್ಮ ನುಡಿಮುತ್ತುಗಳ ಮೂಲಕ ಸೆಲೆಬ್ರಿಟಿಗಳು ಡಾ.ರಾಜ್‌ಕುಮಾರ್‌ಗೆ ನಮನ ಸಲ್ಲಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ''ನಟ ಸಾರ್ವಭೌಮ ಅಣ್ಣಾವ್ರು ಡಾ.ರಾಜ್‌ಕುಮಾರ್‌ರವರ 92ನೇ ಜನ್ಮಜಯಂತಿಯ ಶುಭಾಶಯಗಳು'' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಟ್ವೀಟ್ ''ಡಾ.ರಾಜ್‌ಕುಮಾರ್ ಯಾವಾಗಲೂ ಲೆಜೆಂಡ್ ಆಗಿಯೇ ಇರುತ್ತಾರೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ರಮೇಶ್ ಅರವಿಂದ್ ಟ್ವೀಟ್ ಡಾ.ರಾಜ್‌ಕುಮಾರ್‌ರವರ ಅಪರೂಪದ ವಿಡಿಯೋವನ್ನು ಶೇರ್‌ ಮಾಡಿ, ''ಇಂದು ಮನಸ್ಸಿನಲ್ಲಿ ಮತ್ತೆ ಹಾರ ಹಾಕಿದೆ'' ಎಂದು ರಮೇಶ್ ಅರವಿಂದ್ ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಟ್ವೀಟ್ ''ಅನ್ಯತಾರೆ ಸಾಮಾನ್ಯ, ಧ್ರುವತಾರೆ ಅಸಮಾನ್ಯ, ಗುರು ಪರಂಪರೆ ಸಾಮಾನ್ಯ, ಗುರುರಾಯರು ಅಸಮಾನ್ಯ, ಮನುಷ್ಯ ಸಾಮಾನ್ಯ, ಅತಿಮಾನುಷ ಅಸಮಾನ್ಯ, ನಟ ಸಾಮಾನ್ಯ, ವರನಟ ಅಸಮಾನ್ಯ, ಶತಮಾನಕ್ಕೆ ಬಂದು ಹೋದ ಅನೇಕರಲ್ಲಿ ಕಲಾಶ್ರೇಷ್ಠ. ಕನ್ನಡಕ್ಕೆ ಅಣ್ಣ ಅಂದರೆ ರಾಜಣ್ಣ. ತುಲಾ ರಾಶಿಯಲ್ಲಿ ಜನಿಸಿದ ಅನರ್ಘ್ಯರತ್ನನ ಜನ್ಮದಿನದ ಶುಭಾಶಯಗಳು'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಸಿಂಪಲ್ ಸುನಿ ಟ್ವೀಟ್ ''ಪದ್ಮಭೂಷಣ, ಕರ್ನಾಟಕ ರತ್ನ, ನ್ಯಾಷನಲ್ ಅವಾರ್ಡ್, ದಾದಾ ಸಾಹೇಬ್ ಫಾಲ್ಕೆ, 11 ಕರ್ನಾಟಕ ರಾಜ್ಯ ಪ್ರಶಸ್ತಿ, 8 ಫಿಲ್ಮ್ ಫೇರ್ ಪ್ರಶಸ್ತಿ.. ಮುಗಿಯದ ಸಾಧನೆಗಳ ಪಟ್ಟಿ. ಅಭಿಮಾನಿಗಳ ದೇವರು ಡಾ.ರಾಜ್‌ಕುಮಾರ್‌ಗೆ 92ನೇ ಹುಟ್ಟುಹಬ್ಬದ ನಮನಗಳು'' ಎಂದು ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ. ವೆಂಕಟೇಶ್ ಪ್ರಸಾದ್ ಟ್ವೀಟ್ ''ಜೀವ ಹೂವಾಗಿದೆ..'' ಹಾಡನ್ನು ಹಾಡುವ ಮೂಲಕ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅಣ್ಣಾವ್ರ ಜನ್ಮದಿನಕ್ಕೆ ಶುಭಕೋರಿದ್ದಾರೆ. ಜೊತೆಗೆ ''ಕನ್ನಡಿಗರ ಆರಾಧ್ಯದೈವ, ನಟ ಸಾರ್ವಭೌಮ, ನಮ್ಮೆಲ್ಲರ ಭಾರತ ರತ್ನ, ಡಾ.ರಾಜ್‌ಕುಮಾರ್‌ ಅವರಿಗೆ ಜನುಮ ಜಯಂತಿಯ ಶುಭಾಶಯಗಳು'' ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಗಣೇಶ್ ಟ್ವೀಟ್ ''ನೀವು ಬದುಕುವುದನ್ನು ಕಲಿಸಿದ ಸಾಕಾರಮೂರ್ತಿ. ಸರಳತೆ, ಸಂಸ್ಕಾರಗಳ ಸಂಗಮ. ಒಬ್ಬ ನಟನಾಗಿ, ಮನುಷ್ಯನಾಗಿ ಹೇಗಿರಬೇಕೆಂದು ದಿಕ್ಸೂಚಿಯಾದ ದಾರಿದೀಪ. 92ನೇ ಹುಟ್ಟುಹಬ್ಬದ ಸವಿನೆನಪು'' ಎಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ. ಶರಣ್ ಟ್ವೀಟ್ ''ಮೇರು ನಟ, ನಟ ಸಾರ್ವಭೌಮ, ನಮ್ಮೆಲ್ಲರ ಪ್ರೀತಿಯ ರಾಜಣ್ಣನವರಿಗೆ ಅವರ ಜನ್ಮದಿನದಂದು ನನ್ನ ಹೃದಯಪೂರ್ವಕ ನಮನಗಳು. ನಿಮ್ಮ ಆಶೀರ್ವಾದ ನಮ್ಮೊಂದಿಗಿರಲಿ'' ಎಂದು ನಟ ಶರಣ್ ಟ್ವೀಟ್ ಮಾಡಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಟ್ವೀಟ್ ''ನಿಮ್ಮ ನೆನಪು ಸದಾ ಜೀವಂತ'' ಎಂದು ರಾಘವೇಂದ್ರ ರಾಜ್‌ಕುಮಾರ್ ಟ್ವೀಟ್ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಟ್ವೀಟ್ ''ಅಪ್ಪಾಜಿ ಅವರ 92ನೇ ಜನ್ಮದಿನದ ಪ್ರಯುಕ್ತ ನಮ್ಮ ಒಂದು ಪುಟ್ಟ ಕಾಣಿಕೆ'' ಎಂದು ಟ್ವೀಟ್ ಮಾಡಿ... ''ನಿನ್ನ ಕಂಗಳ ಬಿಸಿಯ ಹನಿಗಳು...'' ಹಾಡನ್ನು ಹಾಡಿ, ವಿಡಿಯೋವನ್ನು ಹಂಚಿಕೊಂಡಿದ್ದಾರೆ ಪುನೀತ್‌ ರಾಜ್‌ಕುಮಾರ್.