ತಪ್ಪಾಗಿದೆ, ಕ್ಷಮೆ ಕೇಳಿದೆ, ಮತ್ತೆ ಯಾಕೆ ಅದನ್ನೇ ಎಳಿತಿದ್ದೀರಿ? ನಟಿ ಯುವಿಕಾ ಚೌಧರಿ ಬೇಸರ!

ನಟಿ ಯುವಿಕಾ ಚೌಧರಿ ಅವರು ಒಂದು ವಿಡಿಯೋದಲ್ಲಿ ಜಾತಿನಿಂದನೆ ಮಾಡುವ ಪದ ಬಳಕೆ ಮಾಡಿದ್ದರು, ಆಮೇಲೆ ಕ್ಷಮೆ ಕೂಡ ಕೇಳಿದ್ದರು. ಹೀಗಿದ್ದರೂ ಕೂಡ ಆ ವಿಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ.

ತಪ್ಪಾಗಿದೆ, ಕ್ಷಮೆ ಕೇಳಿದೆ, ಮತ್ತೆ ಯಾಕೆ ಅದನ್ನೇ ಎಳಿತಿದ್ದೀರಿ? ನಟಿ ಯುವಿಕಾ ಚೌಧರಿ ಬೇಸರ!
Linkup
ಪತಿ ಪ್ರಿನ್ಸ್ ನರುಲಾ ಮನೆಯಲ್ಲೇ ಹೇರ್ ಸ್ಟೈಲ್ ಮಾಡಿಸಿಕೊಳ್ಳುತ್ತಿದ್ದ ವಿಡಿಯೋ ಮಾಡುವಾಗ ನಟಿ ಅವರು ಒಂದು ಪದ ಬಳಕೆ ಮಾಡಿದ್ದರು, ಅದನ್ನು ಕೇಳಿಸಿಕೊಂಡ ನೆಟ್ಟಿಗರು ಜಾತಿ ನಿಂದನೆ ಮಾಡುತ್ತಾರೆ ಎಂದು ಆರೋಪ ಮಾಡಿದ್ದರು. ಆಮೇಲೆ ಯುವಿಕಾ ಕೂಡ ಕ್ಷಮೆ ಕೇಳಿದ್ದರು, ಆದರೆ ಇದು ಮುಗಿಯುವಂತೆ ಕಾಣುತ್ತಿಲ್ಲವಂತೆ! ಯುವಿಕಾ ಚೌಧರಿ ಬಂಧನ ಮಾಡಲು ಒತ್ತಾಯ! #ArrestYuvikaChaudhary ಹ್ಯಾಶ್ ಟ್ಯಾಗ್ ಅಡಿಯಲ್ಲಿ ಯುವಿಕಾ ಚೌಧರಿಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಅವರವರ ಅಭಿಪ್ರಾಯ ಹೊರಹಾಕುತ್ತಿದ್ದರು. ಜಾತಿ ನಿಂದನೆ ಮಾಡಿರುವ ನಟಿ ಯುವಿಕಾ ಚೌಧರಿಯನ್ನು ಬಂಧಿಸಲೇಬೇಕು ಅಂತ ಅನೇಕರು ಒತ್ತಾಯ ಮಾಡಿದ್ದರು. ಕ್ಷಮೆ ಕೇಳಿದ ಯುವಿಕಾ ಚೌಧರಿ! ವಿಡಿಯೋದಲ್ಲಿ ಬಳಸಿದ ಪದದ ಬಗ್ಗೆ ಜನರು ವಿರೋದ ಮಾಡುತ್ತಿದ್ದಾರೆ ಎಂದು ಗೊತ್ತಾದಕೂಡಲೇ ''ವಿಡಿಯೋದಲ್ಲಿ ನಾನು ಬಳಸಿದ ಪದದ ಅರ್ಥ ಗೊತ್ತಿರಲಿಲ್ಲ. ಬೇರೆಯವರನ್ನು ನೋಯಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ನಾನು ಯಾರನ್ನೂ ಎಂದಿಗೂ ನೋಯಿಸುವುದಿಲ್ಲ. ಪ್ರತಿಯೊಬ್ಬರಲ್ಲಿಯೂ ನಾನು ಕ್ಷಮೆ ಕೇಳುತ್ತೇನೆ. ನೀವೆಲ್ಲ ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ'' ಎಂದು ವಿಡಿಯೋ ಮೂಲಕ ಕ್ಷಮೆ ಕೇಳಿದ್ದರು. ಯಾಕೆ ಎಳೆಯುತ್ತಿದ್ದೀರಿ? ಯುವಿಕಾ ಪ್ರಶ್ನೆ! ಆದರೂ ಕೂಡ ಯುವಿಕಾ ಕ್ಷಮೆ ಕೇಳಿದರೂ ಕೂಡ ಕೆಲವರು ಒಪ್ಪಲು ರೆಡಿಯಿಲ್ಲ, ಮತ್ತೆ ಯುವಿಕಾರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಯುವಿಕಾ, "ನನ್ನ ತಪ್ಪು ಅರ್ಥ ಆಗಿದೆ, ಕ್ಷಮೆ ಕೇಳಿದೆ, ಪಾಠವೂ ಕಲಿತೆ. ಆದರೆ ಈಗ ಏನು ಮಾಡೋದು? ಬೇರೆ ವಿಚಾರಗಳ ಬಗ್ಗೆ ಮಾತನಾಡೋದು ಬಿಟ್ಟು ಜನರು ಯಾಕೆ ಇದೇ ವಿಚಾರವನ್ನು ಮತ್ತೆ ಎಳೆಯುತ್ತಿದ್ದಾರೆ ಅಂತ ಅರ್ಥವಾಗುತ್ತಿಲ್ಲ. ಮಹಿಳಾ ಸಬಲೀಕರಣ, ಕೊರೊನಾ ವೈರಸ್‌ನಂತಹ ದೊಡ್ಡ ವಿಚಾರಗಳ ಬಗ್ಗೆ ಮಾತನಾಡೋದು ಬಿಟ್ಟು ಇದರ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ?" ಎಂದು ಬೇಸರ ಹೊರಹಾಕಿದ್ದಾರೆ. ಜನರಿಗೆ ಎಷ್ಟು ಸಮಯವಿದೆ, ಅಲ್ವೇ? "ನಾವು ನಮ್ಮಿಷ್ಟದವರನ್ನು ಕಳೆದುಕೊಳ್ಳುತ್ತಿದ್ದೇವೆ. ಆದರೆ ಜನರು ಅವರು ಹಾಗೆ ಮಾಡಿದರು ಅಂತ ಮಾತನಾಡ್ತಾರೆ. ನನಗೆ ನಿಜಕ್ಕೂ ಬೇಸರ ಆಗತ್ತೆ. ನನ್ನ ತಪ್ಪಿನ ಬಗ್ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಬೇಸರ ಆಗತ್ತೆ. ಈ ಟಾಪಿಕ್ ಟ್ರೆಂಡಿಂಗ್‌ನಲ್ಲಿದೆ ಅಂದರೆ ದೊಡ್ಡ ವಿಚಾರಗಳನ್ನು ಬಿಟ್ಟು, ಕ್ಷಮೆ ಕೇಳಿದ ನಂತರವೂ ಕೂಡ ಜನರಿಗೆ ಇಂತಹ ವಿಚಾರಗಳನ್ನು ಚರ್ಚೆ ಮಾಡೋಕೆ ಎಷ್ಟು ಸಮಯ ಇದೆ ಅಂತ ನಾನು ಯೋಚನೆ ಮಾಡುತ್ತಿದ್ದೇನೆ" ಎಂದು ಯುವಿಕಾ ಚೌಧರಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟನೆಯ 'ಮಳೆಯಲಿ ಜೊತೆಯಲಿ' ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಯುವಿಕಾ ಚೌಧರಿ ಅವರು ಹಿಂದಿಯ 'ಓಂ ಶಾಂತಿ ಓಂ', 'ಎನಿಮಿ', 'ವೀರೇ ಕಿ ವೆಡ್ಡಿಂಗ್' ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದರು, ಇನ್ನು ರಿಯಾಲಿಟಿ ಶೋದಲ್ಲಿಯೂ ಭಾಗವಹಿಸಿದ್ದರು.