ನಿರ್ಮಾಪಕ ಆರ್‌ಬಿ ಚೌಧರಿ ವಿರುದ್ಧ ದೂರು ನೀಡಿದ ತಮಿಳು ನಟ ವಿಶಾಲ್

ತಮಿಳು ನಟ ವಿಶಾಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಿರಿಯ ನಿರ್ಮಾಪಕ ಆರ್‌.ಬಿ ಚೌಧರಿ ವಿರುದ್ಧ ನಟ ವಿಶಾಲ್ ದೂರು ನೀಡಿದ್ದಾರೆ.

ನಿರ್ಮಾಪಕ ಆರ್‌ಬಿ ಚೌಧರಿ ವಿರುದ್ಧ ದೂರು ನೀಡಿದ ತಮಿಳು ನಟ ವಿಶಾಲ್
Linkup
ತಮಿಳು ನಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಿರಿಯ ನಿರ್ಮಾಪಕ ವಿರುದ್ಧ ನಟ ವಿಶಾಲ್ ದೂರು ನೀಡಿದ್ದಾರೆ. ವಿಶಾಲ್‌ಗೆ ಸಂಬಂಧಿಸಿದ ದಾಖಲೆಗಳನ್ನು ಆರ್‌.ಬಿ ಚೌಧರಿ ವಾಪಸ್ ಮಾಡಿಲ್ಲ. ಹೀಗಾಗಿ ವಿಶಾಲ್ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಇದೇ ವಿಚಾರದ ಕುರಿತಾಗಿ ಟ್ವೀಟ್ ಮಾಡಿರುವ ನಟ ವಿಶಾಲ್, ''ಇರುಂಬು ತಿರೈ' ಚಿತ್ರಕ್ಕಾಗಿ ಪಡೆದಿದ್ದ ಸಾಲವನ್ನು ಮರುಪಾವತಿಸಿದ ತಿಂಗಳುಗಳ ಬಳಿಕವೂ ಚೆಕ್, ಬಾಂಡ್ ಮತ್ತು ಪ್ರಾಮಿಸರಿ ನೋಟ್‌ಗಳನ್ನು ಆರ್.ಬಿ ಚೌಧರಿ ಹಿಂದಿರುಗಿಸಿಲ್ಲ. ಏನೇನೋ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಕೊನೆಗೆ ದಾಖಲೆಗಳು ಮಿಸ್ ಆಗಿವೆ ಎಂದರು. ಹೀಗಾಗಿ, ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ'' ಎಂದಿದ್ದಾರೆ. ತಮಿಳು ನಟ ವಿಶಾಲ್ ನಟನೆಯ ಜೊತೆಗೆ ತಮ್ಮ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಚಿತ್ರಗಳನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ವಿತರಣೆಗೂ ಕೈ ಹಾಕಿದ್ದಾರೆ. 2018ರಲ್ಲಿ ಬಿಡುಗಡೆಯಾದ ತಮ್ಮ 'ಇರುಂಬು ತಿರೈ' ಚಿತ್ರಕ್ಕಾಗಿ ನಟ ವಿಶಾಲ್ ಆರ್.ಬಿ ಚೌಧರಿ ಬಳಿ ಸಾಲ ಪಡೆದಿದ್ದರು. ಕೆಲ ಸಮಯದ ಬಳಿಕ ಆರ್‌.ಬಿ ಚೌಧರಿಗೆ ನಟ ವಿಶಾಲ್ ಸಾಲ ಹಿಂದಿರುಗಿಸಿದ್ದರು. ಸಾಲ ಪಡೆಯುವ ವೇಳೆ ಆರ್‌.ಬಿ ಚೌಧರಿಗೆ ಚೆಕ್ ಸೇರಿದಂತೆ ಕೆಲ ದಾಖಲೆಗಳನ್ನು ಒದಗಿಸಿದ್ದರು. ಆದರೆ, ಸಾಲ ಮರುಪಾವತಿಸಿದರೂ ವಿಶಾಲ್‌ ಅವರಿಗೆ ಸೇರಿದ ದಾಖಲೆಗಳನ್ನು ಆರ್‌.ಬಿ ಚೌಧರಿ ಹಿಂದಿರುಗಿಸಿಲ್ಲ. ದಾಖಲೆಗಳು ಕಾಣೆಯಾಗಿವೆ ಎಂದು ಆರ್‌.ಬಿ ಚೌಧರಿ ಬೇಜವಾಬ್ದಾರಿ ಪ್ರದರ್ಶಿಸಿದ ಕಾರಣ ನಟ ವಿಶಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದ್ಹಾಗೆ, 'ಆಕ್ಷನ್' ಮತ್ತು 'ಚಕ್ರ' ಚಿತ್ರಗಳ ಬಳಿಕ 'ಎನಿಮಿ' ಮತ್ತು 'ತುಪ್ಪಾರಿವಾಲನ್ 2' ಸಿನಿಮಾಗಳಲ್ಲಿ ವಿಶಾಲ್ ಬಿಜಿಯಾಗಿದ್ದಾರೆ.