'365 ಡೇಸ್' ಸಿನಿಮಾ ನಟನ ಖಾಸಗಿ ಫೋಟೋಗಳು ಲೀಕ್; ಕೊನೆಗೂ ಮೌನ ಮುರಿದ ನಟ

'365 ಡೇಸ್' ಸಿನಿಮಾ ನಟ ಮೈಕೆಲ್ ಮೊರೊನೆ ಖಾಸಗಿ ಫೋಟೋಗಳು ಲೀಕ್ ಆಗಿದ್ದವು, ಆ ಕುರಿತು ಅವರು ಮಾತನಾಡಿದ್ದಾರೆ. ಇನ್ನು ಬಾಲಿವುಡ್‌ನಿಂದ ಕೂಡ ಮೈಕೆಲ್‌ಗೆ ಸಿನಿಮಾ ಅವಕಾಶಗಳು ಸಿಗುತ್ತಿವೆಯಂತೆ.

'365 ಡೇಸ್' ಸಿನಿಮಾ ನಟನ ಖಾಸಗಿ ಫೋಟೋಗಳು ಲೀಕ್; ಕೊನೆಗೂ ಮೌನ ಮುರಿದ ನಟ
Linkup
ನೆಟ್‌ಫ್ಲಿಕ್ಸ್‌ನಲ್ಲಿ ಕಳೆದ ವರ್ಷದಿಂದ 365ಕ್ಕೆ 365 ದಿನವೂ ಟ್ರೆಂಡಿಂಗ್‌ನಲ್ಲಿದ್ದ '' ಸಿನಿಮಾದ ನಟ ಅವರ ಖಾಸಗಿ ಫೋಟೋಗಳು ಲೀಕ್ ಆಗಿದ್ದವು. ಅವು '365 ಡೇಸ್' ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ವೇಳೆ ತೆಗೆದ ಫೋಟೋಗಳಾಗಿತ್ತು. ಆ ಕುರಿತು ಮೌನ ಮುರಿದಿದ್ದಾರೆ. ಮೈಕೆಲ್ ಹೇಳಿದ್ದೇನು? ಇಟಾಲಿಯನ್ ನಟ ಮೈಕೆಲ್ ಮೊರೊನೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದು, "ಕಲಾವಿದರಾದಮೇಲೆ ನಿಮ್ಮ ಜೀವನ ಸಾರ್ವಜನಿಕವಾಗುವುದು. ಆದರೆ ಮನುಷ್ಯನಾಗಿ ನನಗೆ ಖಾಸಗಿತನ ಬೇಕು ಅನಿಸುವುದು. ನಾನು ಖಾಸಗಿತನದ ಅಭಿಮಾನಿ. ಬೇರೆಯವರ ಖಾಸಗಿತನವನ್ನು ಬಳಸಿಕೊಳ್ಳೋದು ಎಂದಿಗೂ ಸರಿಯಲ್ಲ ಹಾಗೂ ಅಗೌರವ ತೋರುವುದಾಗಿದೆ. ಏನು ನಡೆದಿದೆಯೋ ಅದು ನನ್ನ ಪ್ರಕಾರ ಅಪರಾಧವಾಗಿದೆ" ಎಂದು ಮೈಕೆಲ್ ಅಭಿಪ್ರಾಯ ಹೊರಹಾಕಿದ್ದರು. 356 ಡೇಸ್ ಸಿನಿಮಾ ವೇಳೆ ತೆಗೆದ ಫೋಟೋಗಳು ಅವು "ನಾನು ನಿಜವಾಗಿಯೂ ಆನ್‌ಲೈನ್ ಕುಟುಂಬಕ್ಕೆ ಧನ್ಯವಾದ ಹೇಳುವೆ. ಖಾಸಗಿ ಫೋಟೋಗಳು ಲೀಕ್ ಆದಕೂಡಲೇ ಅದರ ವಿರುದ್ಧ ಕ್ರಮ ಕೈಗೊಂಡವರಿಗೆ ಧನ್ಯವಾದಗಳು. ಆ ಫೋಟೋಗಳು ನಾನು ಅಧಿಕೃತವಾಗಿ ಕೆಲಸ ಮಾಡುವ ವೇಳೆ ತೆಗೆದ ಫೋಟೋಗಳಾಗಿದ್ದವು" ಎಂದು ಮೈಕೆಲ್ ಹೇಳಿಕೊಂಡಿದ್ದಾರೆ. ಬಾಲಿವುಡ್‌ನಿಂದಲೂ ಆಫರ್ ಲಾಕ್‌ಡೌನ್ ಸಮಯದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಭಾರೀ ಹಿಟ್ ನೀಡಿದಂತಹ ಸಿನಿಮಾ ಅಂದರೆ ಅದು '356 ಡೇಸ್'. 2018ರಲ್ಲಿ ಪತ್ನಿ ರೌಬಾರಿಂದ ವಿಚ್ಛೇದನ ಪಡೆದಿದ್ದ ಮೈಕೆಲ್ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾದರು. '356 ಡೇಸ್' ಸಿನಿಮಾ ರಿಲೀಸ್ ಆದಮೇಲೆ ರಾತ್ರೋ ರಾತ್ರಿ ಅವರು ಫೇಮಸ್ ಆದರು. ಮೈಕೆಲ್ ಇನ್‌ಸ್ಟಾಗ್ರಾಮ್‌ನಲ್ಲಿ 12 ಮಿಲಿಯನ್ ಫಾಲೋವರ್ಸ್ ಹೊಂದಿದರು. ಸದ್ಯ ಅವರಿಗೆ ಸಿಕ್ಕಾಪಟ್ಟೆ ಸಿನಿಮಾ ಆಫರ್ ಬರುತ್ತಿದ್ದು, ಬಾಲಿವುಡ್‌ನಿಂದಲೂ ಅವಕಾಶ ಸಿಗುತ್ತಿರುವುದು ವಿಶೇಷ. '356 ಡೇಸ್' ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ದೃಶ್ಯಗಳಿವೆ, ಇನ್ನು ಈ ಚಿತ್ರ ಅತ್ಯಾಚಾರ ಮಾಡಲು ಪ್ರೇರೇಪಣೆ ನೀಡುವುದು ಎಂದು ಕೂಡ ಆರೋಪ ಮಾಡಲಾಗಿತ್ತು.