ನಿಜ ಜೀವನದಲ್ಲಿ ಕನಸುಗಾರನ ಕನಸುಗಳು ಏನೇನು?

ಕನ್ನಡ ಚಿತ್ರರಂಗದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕನಸುಗಾರ ಅಂತಲೇ ಜನಪ್ರಿಯ. ತಮ್ಮ ಸಿನಿಮಾಗಳ ಕನಸನ್ನು ತೆರೆಮೇಲೆ ಭಿನ್ನ-ವಿಭಿನ್ನವಾಗಿ ಕಟ್ಟಿಕೊಟ್ಟಿರುವ ರವಿಚಂದ್ರನ್‌ಗೆ ನಿಜ ಜೀವನದಲ್ಲಿ ಇರುವ ಕನಸುಗಳೇನೇನು ಗೊತ್ತಾ?

ನಿಜ ಜೀವನದಲ್ಲಿ ಕನಸುಗಾರನ ಕನಸುಗಳು ಏನೇನು?
Linkup
ಕನ್ನಡ ಚಿತ್ರರಂಗದಲ್ಲಿ ಕ್ರೇಜಿ ಸ್ಟಾರ್ ಕನಸುಗಾರ ಅಂತಲೇ ಜನಪ್ರಿಯ. ತಮ್ಮ ಸಿನಿಮಾಗಳ ಕನಸನ್ನು ತೆರೆಮೇಲೆ ಭಿನ್ನ-ವಿಭಿನ್ನವಾಗಿ ಕಟ್ಟಿಕೊಟ್ಟಿರುವ ರವಿಚಂದ್ರನ್‌ಗೆ ನಿಜ ಜೀವನದಲ್ಲಿ ಇರುವ ಕನಸುಗಳೇನೇನು ಗೊತ್ತಾ? ಕನಸುಗಾರನ ರಿಯಲ್ ಕನಸುಗಳ ಬಗ್ಗೆ ನಿರ್ದೇಶಕ ನಿಮ್ಮ 'ವಿಜಯ ಕರ್ನಾಟಕ ವೆಬ್' ಆರಂಭಿಸಿರುವ '' ವಿಶೇಷ ಸರಣಿಯಲ್ಲಿ ಹಂಚಿಕೊಂಡಿದ್ದಾರೆ. ಕನಸುಗಾರನ ಕನಸುಗಳೇನು? ''ಅಂದಿನ ಕಾಲದಲ್ಲೇ ಬೆಂಗಳೂರಿನಲ್ಲಿ ಒಂದು ಫಿಲ್ಮ್ ಸಿಟಿ ಮಾಡಬೇಕು ಎಂಬ ಪ್ರಪೋಸಲ್‌ನ ರಾಮಕೃಷ್ಣ ಹೆಗಡೆ ಅವರಿಗೆ ರವಿಚಂದ್ರನ್ ನೀಡಿದ್ದರು. ಒಬ್ಬ ಪ್ರೊಡ್ಯೂಸರ್, ಆರ್ಟಿಸ್ಟ್ ಹಾಗೂ ತಂತ್ರಜ್ಞರ ಜೊತೆ ಫಿಲ್ಮ್ ಸಿಟಿ ಒಳಗೆ ಹೋದರೆ ಸಿನಿಮಾದ ಫಸ್ಟ್ ಕಾಪಿಯೊಂದಿಗೆ ಹೊರಗೆ ಬರಬೇಕು ಅನ್ನೋದು ಅವರ ಕಾನ್ಸೆಪ್ಟ್ ಆಗಿತ್ತು. ಅವತ್ತಿನ ದಿನಕ್ಕೆ ರಾಮೋಜಿ ಫಿಲ್ಮ್ ಸಿಟಿ ಇರಲಿಲ್ಲ'' ''ಮಕ್ಕಳಿಗೆ ಕನ್ನಡ ಪಾಠಗಳು ಹಾಗೂ ನೀತಿ ಕಥೆಗಳನ್ನು ಮ್ಯೂಸಿಕ್ ಮೂಲಕ ಹೇಳುವ ಕನಸು ರವಿಚಂದ್ರನ್ ಅವರಿಗಿತ್ತು. ಮೊಬೈಲ್ ಡಬ್ಬಿಂಗ್ ಸ್ಟುಡಿಯೋ ಮಾಡುವ ಆಸೆ ರವಿಚಂದ್ರನ್ ಅವರಿಗಿತ್ತು. ಇದನ್ನೆಲ್ಲ ಯೋಚನೆ ಮಾಡಿದ್ದರು. ಇಂತಹ ಅನೇಕ ಕನಸುಗಳು ಅವರಿಗಿದೆ'' ರವಿ ಕಲಾ ನಿವಾಸ ''ರಾಜಾಜಿನಗರದ ಮನೆ ರವಿಚಂದ್ರನ್ ಪಾಲಿಗೆ ಅವರ ತಂದೆ ಕಟ್ಟಿರೋ ದೇವಸ್ಥಾನ. ಆ ಮನೆಯಲ್ಲೇ 'ಪ್ರೇಮಲೋಕ', 'ರಣಧೀರ', 'ಚಕ್ರವ್ಯೂಹ' ಆಗಿದ್ದು. ಆ ಮನೆಗೆ ಒಂದು ಹಿಸ್ಟರಿ ಇದೆ. 'ರವಿ ಕಲಾ ನಿವಾಸ' ಅಂತ ಮನೆಗೆ ಹೆಸರು. ರವಿಚಂದ್ರನ್ ಹಾಗೂ ಅವರ ಅಕ್ಕ ಕಲಾ ಹೆಸರನ್ನು ಸೇರಿಸಿ ಮನೆಗೆ ಹೆಸರಿಡಲಾಗಿದೆ'' ಮೊದಲ ಶಾಟ್ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ ''ಅಭಿಮಾನಿಯಾಗಿ ರವಿಚಂದ್ರನ್ ಅವರ ಎಲ್ಲಾ ಚಿತ್ರಗಳೂ ನನಗೆ ಇಷ್ಟ. ಟೆಕ್ನಿಕಲಿ 'ಶಾಂತಿ ಕ್ರಾಂತಿ', 'ಏಕಾಂಗಿ', 'ಅಹಂ ಪ್ರೇಮಾಸ್ಮಿ', 'ಅಪೂರ್ವ' ಚಿತ್ರಗಳು ನನಗೆ ಇಷ್ಟ. ಅವರು ನಿರ್ದೇಶನ ಮಾಡಿರುವ ಸಿನಿಮಾಗಳು ಒಂದೊಂದು ವಿಭಿನ್ನ ಅನುಭವ ಕೊಡುತ್ತದೆ. ಅವರು ನಿರ್ದೇಶನ ಮಾಡುವ ಚಿತ್ರದಲ್ಲಿ ಫಸ್ಟ್ ಶಾಟ್ ಏನಿಡುತ್ತಾರೆ ಎಂಬ ಕುತೂಹಲ ನನಗೆ ಇರುತ್ತದೆ. ಯಾಕಂದ್ರೆ, ಫಸ್ಟ್ ಶಾಟ್ ಬಗ್ಗೆ ಅವರು ತುಂಬಾ ಯೋಚನೆ ಮಾಡುತ್ತಾರೆ'' ''ಸಿನಿಮಾನ ಪ್ರೀತಿಸಿ ಅಂತ ಎಲ್ಲರಿಗೂ ಅವರು ಹೇಳ್ತಾರೆ. ಈಶ್ವರಿ ಪ್ರೊಡಕ್ಷನ್ಸ್‌ನಿಂದ ರವಿಚಂದ್ರನ್ ಅವರ ನಿರ್ದೇಶನದ ಚಿತ್ರಗಳು ಇನ್ನೂ ಸಾಕಷ್ಟು ಬರಬೇಕು ಎಂಬುದೇ ನಮ್ಮ ನಿರೀಕ್ಷೆ, ಆಸೆ, ಕೋರಿಕೆ, ಕನವರಿಕೆ'' ಎಂದು ಸಂದರ್ಶನದಲ್ಲಿ ನಿರ್ದೇಶಕ ರಘುರಾಮ್ ಹೇಳಿದ್ದಾರೆ.