ನಟಿ ರಶ್ಮಿಕಾ ಮಂದಣ್ಣ ಪೋಷಕರಿಗೆ ಅದೊಂದು ವಿಚಾರಕ್ಕೆ ಶುರುವಾಗಿದೆ ಆತಂಕ! ಏನದು?

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗಾಗಲೇ ನಟಿಯಾಗಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಟಾಲಿವುಡ್, ಬಾಲಿವುಡ್‌ನಲ್ಲೂ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಆದರೆ, ಅವರ ಪೋಷಕರಿಗೆ ಮಗಳ ಬಗ್ಗೆ ಒಂದು ಆತಂಕ ಕಾಡುವುದಕ್ಕೆ ಶುರುವಾಗಿದೆ.

ನಟಿ ರಶ್ಮಿಕಾ ಮಂದಣ್ಣ ಪೋಷಕರಿಗೆ ಅದೊಂದು ವಿಚಾರಕ್ಕೆ ಶುರುವಾಗಿದೆ ಆತಂಕ! ಏನದು?
Linkup
'ನ್ಯಾಷನಲ್ ಕ್ರಶ್‌' ಈಗ ಬಾಲಿವುಡ್‌ನಲ್ಲಿ ಬ್ಯುಸಿ. ಹಿಂದಿ, ತೆಲುಗು, ತಮಿಳು ಸಿನಿಮಾಗಳ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಮುಂಬೈ ಟು ಹೈದರಾಬಾದ್ ಅಂತ ಅವರು ಓಡಾಡುತ್ತಲೇ ಇರುತ್ತಾರೆ. ಆದರೆ, ಈ ಮಧ್ಯೆ ಕೊಡಗಿನಲ್ಲಿರುವ ಅವರ ಪೋಷಕರಿಗೆ ಒಂದು ಆತಂಕ ಶುರುವಾಗಿದೆ. ಅಲ್ಲಿ ಪುತ್ರಿ ಶೂಟಿಂಗ್ ಸೆಟ್‌ಗೆ ಕಾಲಿಟ್ಟರೆ, ಇಲ್ಲಿ ಇವರಿಗೆ ಬೇಜಾರು ಮಾಡಿಕೊಳ್ಳುತ್ತಾರಂತೆ. ಅಷ್ಟಕ್ಕೂ ಏನಿದು ವಿಷಯ? ಮುಂದೆ ಓದಿ. ಸದ್ಯ ಎಲ್ಲೆಡೆ ಕೊರೊನಾ ಛಾಯೆ ಇನ್ನೂ ಇದೆ. ಇದರ ಜೊತೆಗೆ ಸಿನಿಮಾಗಳ ಶೂಟಿಂಗ್ ಕೂಡ ಶುರುವಾಗಿದೆ. ಅದರಲ್ಲೂ ರಶ್ಮಿಕಾ ಅಂತೂ ಸಿಕ್ಕಾಪಟ್ಟೆ ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ದಿನವೂ ಸೆಟ್‌ಗೆ ಹೋಗಬೇಕು. ಕೊರೊನಾದ ಆತಂಕ ಇರುವಾಗಲೇ ಮಗಳು ಶೂಟಿಂಗ್‌ಗೆ ಹೋಗುವುದು ರಶ್ಮಿಕಾ ಪೋಷಕರಿಗೆ ಬೇಸರ ಉಂಟು ಮಾಡಿದೆ. ಶೂಟಿಂಗ್‌ಗೆ ಹೋದ ಮೇಲೆ ಕ್ಯಾಮೆರಾ ಮುಂದೆ ಬಂದಾಗ ಮಾಸ್ಕ್‌ ಧರಿಸುವಂತಿಲ್ಲ. ಇದೂ ಕೂಡ ಆತಂಕಕ್ಕೆ ಮತ್ತೊಂದು ಕಾರಣ. ಈ ಬಗ್ಗೆ ರಶ್ಮಿಕಾ ಈಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 'ಅವರು (ಪೋಷಕರು) ಹೊರಗೆ ಏನಾಗುತ್ತಿದೆ ಎಂದು ನೋಡುತ್ತಿದ್ದಾರೆ. ನಾನು ನಟಿ ಆಗಿರುವುದರಿಂದ ಚಿತ್ರೀಕರಣದ ಸಂದರ್ಭದಲ್ಲಿ ಮಾಸ್ಕ್‌ ತೆಗೆಯಬೇಕು ಎಂದು ಅವರಿಗೆ ತಿಳಿದಿದೆ. ಆದರೆ, ಅವರು ಏನನ್ನೂ ಹೇಳುವುದಿಲ್ಲ. ಯಾಕೆಂದರೆ, ಇದು ಕೆಲಸ. ನಾನು ಮತ್ತು ನನ್ನ ಕೆಲಸದ ನಡುವೆ ಯಾರನ್ನೂ ಬರಲು ನಾನು ಬಿಡುವುದಿಲ್ಲ. ಶೂಟಿಂಗ್‌ಗೆ ಹೋಗಬೇಡ, ಅದು ಸೇಫ್ ಅಲ್ಲ ಅಂತ ಅವರು ಹೇಳಲು ಬಂದರೆ, ನಾನು ಕೇಳುವುದಿಲ್ಲ ಎಂದು ನನ್ನ ಪೋಷಕರಿಗೂ ತಿಳಿದಿದೆ. ಶೂಟಿಂಗ್‌ಗೆ ಅಂತ ಸಾಕಷ್ಟು ಹಣ ಖರ್ಚು ಮಾಡುತ್ತಿರುತ್ತಾರೆ. ನಾನು ನನ್ನ ಕೆಲಸವನ್ನು ಮುಗಿಸಲೇಬೇಕಿರುತ್ತದೆ' ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ! ಸದ್ಯ ರಶ್ಮಿಕಾ ಕಾಲ್‌ಶೀಟ್ ಸಿಗುವುದು ಸುಲಭದ ಮಾತಲ್ಲ. ಇನ್ನೆರಡು ವರ್ಷ ಅವರು ಸಖತ್ ಬ್ಯುಸಿ. ಅಲ್ಲು ಅರ್ಜುನ್-ರಶ್ಮಿಕಾ ಕಾಂಬಿನೇಷನ್‌ನ ಬಹುನಿರೀಕ್ಷಿತ '' ಸಿನಿಮಾಗೆ ಶೂಟಿಂಗ್ ಪುನಃ ಶುರುವಾಗಿದೆ. ಅದು ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ. ಹಿಂದಿಯ 'ಮಿಷನ್‌ ಮಜ್ನು' ಮತ್ತು 'ಗುಡ್‌ಬೈ' ಸಿನಿಮಾಗಳ ಶೂಟಿಂಗ್‌ನಲ್ಲೂ ರಶ್ಮಿಕಾ ಬ್ಯುಸಿ ಇದ್ದಾರೆ. ಇದೆಲ್ಲದರ ಜೊತೆಗೆ ತೆಲುಗಿನ ಶರ್ವಾನಂದ್‌ ಜೊತೆಗೆ 'ಆಡವಾಳ್ಳು ಮೀಕು ಜೋಹಾರ್ಲು' ಎಂಬ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಇದೀಗ ತಮಿಳಿನ ಶಿವಕಾರ್ತಿಕೇಯನ್ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸುವಂತೆ ರಶ್ಮಿಕಾಗೆ ಆಫರ್ ಬಂದಿದೆಯಂತೆ!