ವಿಶೇಷ ಅನುಮತಿ ಪಡೆದು ಅಮೆರಿಕಕ್ಕೆ ಹೋದ ರಜನಿಕಾಂತ್ ಆರೋಗ್ಯದ ಬಗ್ಗೆ ಖ್ಯಾತ ನಟಿಗೆ ಅನುಮಾನ!

ನಟ ರಜನಿಕಾಂತ್ ಅವರು ಭಾರತ ಸರ್ಕಾರದಿಂದ ಅನುಮತಿ ಪಡೆದು ಅಮೆರಿಕಕ್ಕೆ ಹಾರಿದ್ದಾರೆ. ಅದನ್ನೇ ನಟಿ ಕಸ್ತೂರಿ ಶಂಕರ್ ಅವರು ಪ್ರಶ್ನೆ ಮಾಡಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ವಿಶೇಷ ಅನುಮತಿ ಪಡೆದು ಅಮೆರಿಕಕ್ಕೆ ಹೋದ ರಜನಿಕಾಂತ್ ಆರೋಗ್ಯದ ಬಗ್ಗೆ ಖ್ಯಾತ ನಟಿಗೆ ಅನುಮಾನ!
Linkup
ನಟ ಅವರು ಆರೋಗ್ಯ ತಪಾಸಣೆಗೆಂದು ಮಗಳು, ಪತ್ನಿ ಜೊತೆಗೆ ಅಮೆರಿಕಕ್ಕೆ ಹಾರಿದ್ದಾರೆ. ಸದ್ಯ ಲಾಕ್‌ಡೌನ್ ಇರೋದರಿಂದ ಭಾರತ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ರಜನಿ ಅಮೆರಿಕಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಇದನ್ನೇ ನಟಿ ಅವರು ಪ್ರಶ್ನೆ ಮಾಡಿದ್ದಾರೆ. ಕಸ್ತೂರಿ ಶಂಕರ್ ಹೇಳಿದ್ದೇನು? ಮೇ ತಿಂಗಳಿನಿಂದ ಭಾರತದಿಂದ ಅಮೆರಿಕಕ್ಕೆ ಜನರು ಬರುವುದನ್ನು ನಿರ್ಬಂಧಿಸಿದೆ. ಮೆಡಿಕಲ್ ಎಂದು ಕೂಡ ಅನುಮತಿ ನೀಡುತ್ತಿಲ್ಲ. ಹೇಗೆ ರಜನಿಕಾಂತ್ ಅವರಿಗೆ ಅಮೆರಿಕಕ್ಕೆ ಹೋಗಲು ಅವಕಾಶ ಸಿಕ್ಕಿತು? ಹಠಾತ್ತನೆ ರಾಜಕೀಯದಿಂದ ಹೊರಗೆ ಬಂದಿರಿ. ನೀವು ಸ್ಪಷ್ಟನೆ ಕೊಡಬೇಕು. ಅನಿವಾಸಿ ಭಾರತೀಯರು ಅಥವಾ ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವವರು ಅಮೆರಿಕಕ್ಕೆ ಬರಬಹುದು. ಬೇರೆ ದೇಶಗಳಲ್ಲಿರುವ ಭಾರತೀಯರು ಅಮೆರಿಕಕ್ಕೆ ಬರಬಹುದು. ಆದ್ದರಿಂದ ರಜನಿ ಪ್ರಯಾಣದ ವಿಚಾರದಲ್ಲಿ ರಹಸ್ಯ ಅಡಗಿದೆ. ಭಾರತ ಸರ್ಕಾರದಿಂದ ಆರೋಗ್ಯ ವಿಚಾರವಾಗಿ ರಜನಿ ಅನುಮತಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಹೇಗಿದೆ? ಭಾರತದಲ್ಲಿ ರಜನಿ ಆರೋಗ್ಯ ಸಮಸ್ಯೆ ಪರಿಹಾರಪಡಿಸಲು ಉತ್ತಮ ಆಸ್ಪತ್ರೆಗಳಿಲ್ಲವೇ? ನನಗೆ ಪರಿಸ್ಥಿತಿ ಕೆಟ್ಟದಾಗಿರಬಹುದು ಎಂದು ಅನಿಸುತ್ತದೆ. ರಜನಿಕಾಂತ್ ಅವರಿಗೆ ನಿಯಮ ಪಾಲಿಸೋದಿಲ್ಲ ಅಂತ ಅಭಿಮಾನಿಗಳು ಹೇಳಬೇಡಿ. ನಿಜಕ್ಕೂ ಇದು ಹೇಳಲು ಭಯಾನಕ ವಿಷಯ ಅನಿಸುವುದು. ಏನಾದರೂ ಇದ್ದರೂ, ಇಂತಹ ಬೃಹತ್ ಗಣ್ಯರು ಕಾನೂನು ಪಾಲಿಸುವ ಪ್ರಜೆಯಾಗಿ ಬರಲು ಬಹಳ ಜಾಗರೂಕರಾಗಿರಬೇಕು. ಈ ರೀತಿ ರೋಲ್ ಮಾಡೆಲ್‌ನ್ನು ವಿಮರ್ಶೆ ಮಾಡಿದಾಗ ಅಭಿಮಾನಿಗಳು ಕೆರಳುತ್ತಾರೆ. ಯಾರೂ ಕೂಡ ಅವರನ್ನು ಪ್ರಶ್ನೆ ಮಾಡೋದಿಲ್ಲ. ರಜನಿಯನ್ನು ಪ್ರಶ್ನೆ ಮಾಡಲು ನನಗೆ ಎಷ್ಟು ಧೈರ್ಯ ಇರಬೇಕು ಎಂದು ನನಗೆ ಅವರ ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಸಹಜ ಸ್ಥಿತಿಗಿಂತ ಬೇರೆ ಇದೆ ಎಂದಾಗ ರಜನಿ ಪ್ರತಿ ನಡೆಯಲ್ಲೂ ನನಗೆ ಕುತೂಹಲ ಇರುತ್ತದೆ. ಅನೇಕ ಬಾರಿ ನಾನು ರಜನಿಯನ್ನು ಬೆಂಬಲಿಸಿದ್ದೇನೆ, ಆದರೆ ಈ ಬಾರಿ ಹಾಗೆ ಮಾಡಲ್ಲ. ರಜನಿ ಆರೋಗ್ಯದ ಬಗ್ಗೆ ನನಗೆ ಸಂದೇಹ ಇತ್ತು, ಹೀಗಾಗಿ ನಾನು ಪ್ರಶ್ನೆ ಮಾಡಿದೆ. ಪ್ರತಿಯೊಬ್ಬರಿಗೂ ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ. ಅದರಲ್ಲಿ ತಪ್ಪೇನು? ಜಯಲಲಿತಾ ಅಮ್ಮ ಆಸ್ಪತ್ರೆಯಲ್ಲಿದ್ದಾಗ ಕೂಡ ಜನರು ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಬಯಸಿದ್ದರು. ಕೆಲ ರಜನಿ ಅಭಿಮಾನಿಗಳು ಅಶ್ಲೀಲವಾಗಿ ನನಗೆ ಬೈಯ್ಯುತ್ತಿದ್ದಾರೆ. ಇದರಿಂದ ಯಾರಿಗೆ ಧಕ್ಕೆ ಆಗುವುದು ಎಂದು ಯೋಚಿಸಿ. ರಜನಿಕಾಂತ್ ಅವರು ನೂರಾರು ವರ್ಷಗಳ ಕಾಲ ಆರೋಗ್ಯವಾಗಿ ಇರಲಿ ಎಂದು ಬಯಸಿದ್ದೇನೆ.