ಟಾಲಿವುಡ್‌ನ 'ಈ' ಸ್ಟಾರ್ ಹೀರೋ ಮೇಲೆ ರಶ್ಮಿಕಾ ಮಂದಣ್ಣಗೆ ಕ್ರಶ್ ಆಗಿದೆ..!

ತೆಲುಗು ನಟ 'ಡಾರ್ಲಿಂಗ್' ಪ್ರಭಾಸ್ ಮೇಲೆ ಕನ್ನಡ ನಟಿ ರಶ್ಮಿಕಾ ಮಂದಣ್ಣಗೆ ಕ್ರಶ್ ಆಗಿದ್ಯಂತೆ. ಹಾಗಂತ ಖುದ್ದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಟಾಲಿವುಡ್‌ನ 'ಈ' ಸ್ಟಾರ್ ಹೀರೋ ಮೇಲೆ ರಶ್ಮಿಕಾ ಮಂದಣ್ಣಗೆ ಕ್ರಶ್ ಆಗಿದೆ..!
Linkup
ಕೊಡಗಿನ ಕುವರಿ, ಕನ್ನಡ ನಟಿ ರಶ್ಮಿಕಾ ಮಂದಣ್ಣಗೆ ಟಾಲಿವುಡ್‌ನ ಸ್ಟಾರ್ ನಟರೊಬ್ಬರ ಮೇಲೆ ಕ್ರಶ್ ಆಗಿದೆ. ಆ ಸ್ಟಾರ್ ನಟ ಯಾರು ಅಂತ ಊಹಿಸಿ ನೋಡೋಣ... ಕೆಲವರ ತಲೆಯಲ್ಲಿ ವಿಜಯ್ ದೇವರಕೊಂಡ ಹೆಸರು ಬರಬಹುದು. ಆದರೆ, ನಟಿ ರಶ್ಮಿಕಾ ಮಂದಣ್ಣಗೆ ಕ್ರಶ್ ಆಗಿರುವುದು 'ಬಾಹುಬಲಿ' ಖ್ಯಾತಿಯ ನಟ ಮೇಲೆ.! ಹೌದು.. 'ಡಾರ್ಲಿಂಗ್' ಪ್ರಭಾಸ್ ಮೇಲೆ ನಟಿ ರಶ್ಮಿಕಾ ಮಂದಣ್ಣಗೆ ಕ್ರಶ್ ಆಗಿದ್ಯಂತೆ. ಹಾಗಂತ ಖುದ್ದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ''ಯಾರ ಜೊತೆಗೆ ಡೇಟಿಂಗ್‌ಗೆ ಹೋಗಲು ಇಷ್ಟ ಪಡ್ತೀರಾ?'' ಎಂಬ ಪ್ರಶ್ನೆ ಸಂದರ್ಶನದಲ್ಲಿ ಎದುರಾದಾಗ, ''ಪ್ರಭಾಸ್'' ಅಂತ ನಟಿ ಹೇಳಿದ್ದಾರೆ. ''ಪ್ರಭಾಸ್‌ಗೆ ನಾನು ದೊಡ್ಡ ಅಭಿಮಾನಿ. ನನಗೆ ಅವರ ಮೇಲೆ ಕ್ರಶ್ ಆಗಿದೆ. ಚಾನ್ಸ್ ಸಿಕ್ಕರೆ ಖಂಡಿತ ನಾನು ಅವರೊಟ್ಟಿಗೆ ಡೇಟಿಂಗ್‌ಗೆ ಹೋಗುತ್ತೇನೆ. ಅವರೊಟ್ಟಿಗೆ ನಟಿಸುವುದೂ ನನಗೆ ಇಷ್ಟ'' ಎಂದು ಸಂದರ್ಶನದಲ್ಲಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಅಂದ್ಹಾಗೆ, ನಟ ಪ್ರಭಾಸ್ ಹಾಗೂ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಕೂಡ ಈ ಹಿಂದೆ ತೆಲುಗು ಸಿನಿ ಅಂಗಳದಲ್ಲಿ ಹರಿದಾಡಿತ್ತು. ಆದರೆ, ಅದು ಸದ್ಯಕ್ಕೆ ಗಾಸಿಪ್ ಆಗಿಯೇ ಉಳಿದಿದೆ. ಕನ್ನಡ ನಟ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಬಳಿಕ ನಟಿ ರಶ್ಮಿಕಾ ಮಂದಣ್ಣ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲೇ ಬಿಜಿಯಾಗಿದ್ದಾರೆ. ಬಾಲಿವುಡ್‌ನಲ್ಲಿ 'ಮಿಷನ್ ಮಜ್ನು' ಹಾಗೂ 'ಗುಡ್‌ಬೈ' ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ತೆಲುಗಿನ 'ಪುಷ್ಪ' ಚಿತ್ರದಲ್ಲೂ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ ಈ ಚಿತ್ರಗಳ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದು, ಚಿತ್ರೀಕರಣ ಆರಂಭಗೊಂಡ ಬಳಿಕ ಶೂಟಿಂಗ್ ಸೆಟ್‌ಗೆ ರಶ್ಮಿಕಾ ಮಂದಣ್ಣ ಹಾಜರ್ ಆಗಲಿದ್ದಾರೆ.