ಮೂರು ಬಾರಿ 'ರಾಷ್ಟ್ರ ಪ್ರಶಸ್ತಿ' ಪುರಸ್ಕೃತರಾಗಿದ್ದ ಹಿರಿಯ ಛಾಯಾಗ್ರಾಹಕ ಶಿವನ್ ಇನ್ನಿಲ್ಲ

ಸಿನಿಮಾ ಛಾಯಾಗ್ರಹಣಕ್ಕಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದ ಮಲಯಾಳಂ ಛಾಯಾಗ್ರಾಹಕ ಶಿವನ್ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಗುರುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಅವರಿಗೆ ಹೃದಯಾಘಾತವಾಗಿದೆ.

ಮೂರು ಬಾರಿ 'ರಾಷ್ಟ್ರ ಪ್ರಶಸ್ತಿ' ಪುರಸ್ಕೃತರಾಗಿದ್ದ ಹಿರಿಯ ಛಾಯಾಗ್ರಾಹಕ ಶಿವನ್ ಇನ್ನಿಲ್ಲ
Linkup
ಮಲಯಾಳಂನ ಹಿರಿಯ ಛಾಯಾಗ್ರಾಹಕ ಅವರು ಗುರುವಾರ (ಜೂ.24) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಸಿನಿಮಾಗಳ ಛಾಯಾಗ್ರಹಣಕ್ಕಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಶಿವನ್ ಅವರ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಶಿವನ್ ಅವರ ನಿಧನದ ಬಗ್ಗೆ ಅವರ ಪುತ್ರ ಸಂಗೀತ್ ಶಿವನ್ ಅವರು ಮಾಹಿತಿ ನೀಡಿದ್ದಾರೆ. 'ಇದೊಂದು ಅತ್ಯಂತ ದುಃಖದ ವಿಚಾರವಾಗಿದೆ. ನನ್ನ ತಂದೆ ಗುರುವಾರ ಕೊನೆಯುಸಿರೆಳೆದಿದ್ದಾರೆ. ನಮಗೆ ಅವರು ದೊಡ್ಡ ಮಾರ್ಗದರ್ಶಕರು ಮತ್ತು ಸ್ಫೂರ್ತಿಯೂ ಆಗಿದ್ದರು. ಅವರ ಸಾಧನೆಯ ಹಿಂದೆ ಕಠಿಣ ಪರಿಶ್ರಮ, ಸಮರ್ಪಣೆ, ಶಿಸ್ತು ಮತ್ತು ದೂರದೃಷ್ಟಿ ಇತ್ತು. ಅಪ್ಪ, ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಮಗೆ ನಂಬಿಕೆ ಇದೆ, ನೀವು ಮೋಡಗಳು ಮತ್ತು ನಕ್ಷತ್ರಗಳ ನಡುವೆ ನಿಮ್ಮದೇ ಸ್ಥಳದಿಂದ ನಮ್ಮನ್ನು ನೋಡುತ್ತೀರಿ..' ಎಂದು ಫೇಸ್‌ ಬುಕ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ. ಅಂದಹಾಗೆ, ಸ್ಟಿಲ್ ಫೋಟೋಗ್ರಾಫರ್ ಆಗಿದ್ದ ಶಿವನ್, ನಂತರ ಸಿನಿಮಾ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಛಾಯಾಗ್ರಹಕ್ಕಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಅವರು, ನಂತರ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಮಕ್ಕಳ ಚಿತ್ರ 'ಅಭಯಂ' ಸೇರಿದಂತೆ ಅನೇಕ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ. ಯಾಗಂ, ಕಿಲಿವಧಿಲ್, ಕೇಶು, ಒರು ಯಾತ್ರಾ ಮುಂತಾದ ಸಿನಿಮಾಗಳಿಗೆ ಶಿವನ್ ಛಾಯಾಗ್ರಹಣ ಮಾಡಿದ್ದರು. ಶಿವನ್ ಅವರಿಗೆ ಮೂವರು ಪುತ್ರರಿದ್ದಾರೆ. ಸಂಗೀತ್ ಶಿವನ್ ಮತ್ತು ಸಂಜೀವ್ ಶಿವನ್ ಅವರು ನಿರ್ದೇಶಕರಾಗಿ, ನಿರ್ಮಾಪಕರಾಗಿ ಹೆಸರು ಮಾಡಿದ್ದಾರೆ. ಮತ್ತೋರ್ವ ಪುತ್ರ ಬಹುಬೇಡಿಕೆಯ ಛಾಯಾಗ್ರಾಹಕರಾಗಿದ್ದಾರೆ. ಜೊತೆಗೆ ಅನೇಕ ಉತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇನ್ನು, ಶಿವನ್ ಅವರ ನಿಧನಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ.