ಕ್ರಿಕೆಟಿಗನೊಂದಿಗೆ '2.0' ನಿರ್ದೇಶಕ ಶಂಕರ್ ಪುತ್ರಿಯ ಮದುವೆ! ಹಾರೈಸಿದ ಸಿಎಂ ಸ್ಟಾಲಿನ್‌

ತಮಿಳಿನಲ್ಲಿ 'ಜಂಟಲ್‌ಮನ್', 'ಅನ್ನಿಯನ್‌' 'ಶಿವಾಜಿ', 'ಎಂಧಿರನ್', '2.0'ನಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಶಂಕರ್ ಅವರ ಪುತ್ರಿ ಐಶ್ವರ್ಯಾ ಅವರ ವಿವಾಹವು ರೋಹಿತ್ ದಾಮೋದರನ್‌ ಅವರೊಂದಿಗೆ ಭಾನುವಾರ (ಜೂ.27) ನಡೆದಿದೆ.

ಕ್ರಿಕೆಟಿಗನೊಂದಿಗೆ '2.0' ನಿರ್ದೇಶಕ ಶಂಕರ್ ಪುತ್ರಿಯ ಮದುವೆ! ಹಾರೈಸಿದ ಸಿಎಂ ಸ್ಟಾಲಿನ್‌
Linkup
'ಶಿವಾಜಿ', 'ಎಂಧಿರನ್', '2.0' ಸಿನಿಮಾಗಳ ಖ್ಯಾತಿಯ ನಿರ್ದೇಶಕ ಅವರ ಪುತ್ರಿ ಐಶ್ವರ್ಯಾ ಅವರ ವಿವಾಹ ಖ್ಯಾತ ಕ್ರಿಟೆಟಿಗ ರೋಹಿತ್ ದಾಮೋದರನ್‌ ಅವರೊಂದಿಗೆ ನಡೆದಿದೆ. ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಚೆನ್ನೈನ ಖಾಸಗಿ ಹೋಟೆಲ್‌ವೊಂದರಲ್ಲಿ ನೆರವೇರಿದೆ. ಕಠಿಣ ಕೋವಿಡ್ ನಿಮಯಗಳನ್ನು ಅನುಸರಿಸಿ, ವಿವಾಹವು ನಡೆದಿದ್ದು, ತಮಿಳುನಾಡು ಮುಖ್ಯಮಂತ್ರಿ ಮತ್ತು ಅವರ ಪುತ್ರ, ಶಾಸಕ, ನಟ ಉದಯನಿಧಿ ಸ್ಟಾಲಿನ್ ಕೂಡ ಮದುವೆಗೆ ಅಗಮಿಸಿ, ನೂತನ ದಂಪತಿಗೆ ಶುಭ ಹಾರೈಸಿದ್ದಾರೆ. ಸದ್ಯ ಕೋವಿಡ್‌ ಇರುವ ಕಾರಣ, ಬಹಳಷ್ಟು ಎಚ್ಚರಿಕೆಯನ್ನು ಶಂಕರ್ ಮತ್ತು ಅವರ ಪತ್ನಿ ಈಶ್ವರಿ ವಹಿಸಿದ್ದರು. ಹಾಗಾಗಿ, ವಧು ಮತ್ತು ವರನ ಕಡೆಯ ಕೆಲವೇ ಕೆಲವು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಸರ್ಕಾರದ ನಿಯಮಾವಳಿಗಳ ಪ್ರಕಾರ, 50ಕ್ಕಿಂತ ಕಡಿಮೆ ಜನರು ಮದುವೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ಮೂಲಗಳ ಮಾಹಿತಿ. ಇನ್ನು, ಮನೆಯ ಅಲಂಕಾರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾ ನಿರ್ದೇಶಕ ಮುತ್ತುರಾಜ್ ಮಾಡಿದ್ದರು. ಶಂಕರ್ ಅವರ 'ಐ', '2.0' ಚಿತ್ರಗಳಿಗೆ ಮುತ್ತುರಾಜ್ ಕಲಾ ನಿರ್ದೇಶನ ಮಾಡಿದ್ದಾರೆ. ಮುಂದಿನ 'ಇಂಡಿಯನ್‌ 2'ಗೂ ಅವರಿಂದಲೇ ಕಲಾ ನಿರ್ದೇಶನ ಮಾಡಿಸಲಾಗುತ್ತಿದೆ. ಸದ್ಯ ಸಿಂಪಲ್ ಆಗಿ, ಅರ್ಧ ದಿನದಲ್ಲೇ ಮಗಳ ಮದುವೆ ಮಾಡಿರುವ ಶಂಕರ್‌, ಕೊರೊನಾ ವೈರಸ್ ಹಾವಳಿ ಕಡಿಮೆ ಆದಮೇಲೆ ಮುಂದಿನ ಒಂದು ಅಥವಾ ಎರಡು ತಿಂಗಳ ನಂತರ ದೊಡ್ಡಮಟ್ಟದಲ್ಲಿ ಆರತಕ್ಷತೆ ಮಾಡುವ ಆಲೋಚನೆ ಅವರಿಗೆ ಇದೆ. ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ತಾರೆಯರು, ತಂತ್ರಜ್ಞರನ್ನು ಆಹ್ವಾನಿಸುವ ಉದ್ದೇಶ ಅವರಿಗೆ ಇದೆ. ಅಂದಹಾಗೆ, ಶಂಕರ್ ಅವರ ಪುತ್ರಿ ಐಶ್ವರ್ಯಾ ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಇನ್ನು, ರೋಹಿತ್, ಉದ್ಯಮಿ ದಾಮೋದರನ್‌ ಅವರ ಪುತ್ರ. ಮಧುರೈ ಪ್ಯಾಂಥರ್ಸ್ ಕ್ರಿಕೆಟ್‌ ತಂಡದ ಒಡೆತನವನ್ನೂ ದಾಮೋದರನ್‌ ಹೊಂದಿದ್ದಾರೆ. ಅದೇ ತಂಡಕ್ಕೆ ರೋಹಿತ್ ಕ್ಯಾಪ್ಟನ್ ಆಗಿದ್ದಾರೆ.