'ಕನಸುಗಾರನ ಕಹಾನಿ': ರವಿಚಂದ್ರನ್ ಕುರಿತಾದ ವಿಶೇಷ ಸರಣಿ ನಿರೀಕ್ಷಿಸಿ....

ಸಿನಿಮಾನೇ ಉಸಿರಾಗಿಸಿಕೊಂಡಿರುವ ರವಿಚಂದ್ರನ್‌ಗೆ ಈ ವರ್ಷ.. ಅಂದ್ರೆ 2021 ತುಂಬಾನೇ ಸ್ಪೆಷಲ್. ರವಿಚಂದ್ರನ್ ಇತ್ತೀಚೆಗಷ್ಟೇ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ರವಿಚಂದ್ರನ್ ಅವರ ಈಶ್ವರಿ ಪ್ರೊಡಕ್ಷನ್ಸ್‌ಗೆ ಇದೇ ವರ್ಷ 50 ವರ್ಷಗಳು ತುಂಬುತ್ತಿವೆ. ರವಿಚಂದ್ರನ್ ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷಗಳನ್ನು ಪೂರೈಸಲಿದ್ದಾರೆ. ಹಾಗೇ, ರವಿಚಂದ್ರನ್ ಅವರು ತಮ್ಮ ರಾಜಾಜಿನಗರದ ನಿವಾಸಕ್ಕೆ ಕಾಲಿಟ್ಟು 30 ವರ್ಷಗಳು ತುಂಬಲಿದೆ. ಈ ವಿಶೇಷ ಸಂದರ್ಭದ ಪ್ರಯುಕ್ತ ನಿಮ್ಮ 'ವಿಜಯ ಕರ್ನಾಟಕ ವೆಬ್' ರವಿಚಂದ್ರನ್ ಕುರಿತಾಗಿ 'ಕನಸುಗಾರನ ಕಹಾನಿ' ಎಂಬ ವಿಶೇಷ ಸರಣಿಯೊಂದನ್ನು ಪ್ರಾರಂಭಿಸುತ್ತಿದೆ.

'ಕನಸುಗಾರನ ಕಹಾನಿ': ರವಿಚಂದ್ರನ್ ಕುರಿತಾದ ವಿಶೇಷ ಸರಣಿ ನಿರೀಕ್ಷಿಸಿ....
Linkup
'ಪ್ರೇಮ ಲೋಕ'ದ 'ಕನಸುಗಾರ'.. ಯಾವುದೇ ಪ್ರಯೋಗಕ್ಕೂ 'ಅಂಜದ ಗಂಡು'.. ಅಭಿಮಾನಿಗಳ ಮೆಚ್ಚಿನ 'ರಾಮಾಚಾರಿ'.. ಚಿಕ್ಕ ಮಕ್ಕಳಿಗೂ ಇಷ್ಟವಾಗುವ 'ರವಿ ಮಾಮ'.. ಶಿಸ್ತಿನ 'ಸಿಪಾಯಿ'.. ಸಾವಿರಕ್ಕೆ ಒಬ್ಬ 'ಕಲಾವಿದ'.. ಒನ್ ಅಂಡ್ ಒನ್ಲಿ ರವಿಚಂದ್ರನ್..! ಸ್ಯಾಂಡಲ್‌ವುಡ್‌ನಲ್ಲಿ ಅಕ್ಷರಶಃ ಹೊಸ ಕ್ರೇಜ್ ಸೃಷ್ಟಿಸಿದ 'ಕ್ರೇಜಿ ಸ್ಟಾರ್' ರವಿಚಂದ್ರನ್. ಸಿನಿಮಾ ಮೇಕಿಂಗ್‌ನಲ್ಲಿ ಹೊಸ ಭಾಷ್ಯ ಬರೆದ 'ಮೂವಿ ಮಾಂತ್ರಿಕ' ರವಿಚಂದ್ರನ್. ಸಿನಿಮಾನೇ ಉಸಿರಾಗಿಸಿಕೊಂಡಿರುವ ರವಿಚಂದ್ರನ್‌ಗೆ ಈ ವರ್ಷ.. ಅಂದ್ರೆ 2021 ತುಂಬಾನೇ ಸ್ಪೆಷಲ್. ಅದ್ಹೇಗೆ ಅಂದ್ರೆ, ರವಿಚಂದ್ರನ್ ಇತ್ತೀಚೆಗಷ್ಟೇ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದಲ್ಲದೆ ರವಿಚಂದ್ರನ್ ಅವರ ಈಶ್ವರಿ ಪ್ರೊಡಕ್ಷನ್ಸ್‌ಗೆ ಇದೇ ವರ್ಷ 50 ವರ್ಷಗಳು ತುಂಬುತ್ತಿವೆ. ರವಿಚಂದ್ರನ್ ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷಗಳನ್ನು ಪೂರೈಸಲಿದ್ದಾರೆ. ಹಾಗೇ, ರವಿಚಂದ್ರನ್ ಅವರು ತಮ್ಮ ರಾಜಾಜಿನಗರದ ನಿವಾಸಕ್ಕೆ ಕಾಲಿಟ್ಟು 30 ವರ್ಷಗಳು ತುಂಬಲಿದೆ. ಇಷ್ಟೆಲ್ಲಾ ವಿಶೇಷತೆಗಳು ಇದೇ ವರ್ಷ ಒಟ್ಟೊಟ್ಟಿಗೆ ಬಂದಿವೆ. ಇದೇ ಸೂಪರ್ ಸ್ಪೆಷಲ್ ಸಂದರ್ಭದ ಪ್ರಯುಕ್ತ ನಿಮ್ಮ 'ವಿಜಯ ಕರ್ನಾಟಕ ವೆಬ್' ರವಿಚಂದ್ರನ್ ಕುರಿತಾಗಿ ವಿಶೇಷ ಸರಣಿಯೊಂದನ್ನು ಪ್ರಾರಂಭಿಸುತ್ತಿದೆ. ರವಿಚಂದ್ರನ್ ಬಗ್ಗೆ ಅನೇಕರಿಗೆ ತಿಳಿಯದ ಸಂಗತಿಗಳು, ಅವರು ಸೃಷ್ಟಿಸಿದ ದಾಖಲೆಗಳು, ಅವರ ಬದುಕು ಮತ್ತು ಸಿನಿ ಜರ್ನಿ ಸೇರಿದಂತೆ ಅಪರೂಪದ ಮಾಹಿತಿಯನ್ನು ನಿಮ್ಮ ವಿಜಯ ಕರ್ನಾಟಕ ವೆಬ್ '' ಎಂಬ ಶೀರ್ಷಿಕೆಯಡಿ ವಿಶೇಷ ಸರಣಿಯನ್ನು ಹೊರತರುತ್ತಿದೆ. ರವಿಚಂದ್ರನ್ ಅವರ ಆಪ್ತ ಬಳಗ, ರವಿಚಂದ್ರನ್ ಜೊತೆಗೆ ಕೆಲಸ ಮಾಡಿರುವವರು, ರವಿಚಂದ್ರನ್ ಅವರನ್ನು ಹತ್ತಿರದಿಂದ ಬಲ್ಲವರು 'ಕನಸುಗಾರನ ಕಹಾನಿ' ವಿಶೇಷ ಸರಣಿಯಡಿ ಮಾತನಾಡಲಿದ್ದಾರೆ. ರವಿಚಂದ್ರನ್ ಬಗ್ಗೆ ಅವರಿಗೆ ಗೊತ್ತಿರುವ ಅನೇಕ ವಿಷಯಗಳನ್ನು 'ಕನಸುಗಾರನ ಕಹಾನಿ' ಮೂಲಕ ತಿಳಿಸಿಕೊಡಲಿದ್ದಾರೆ. 'ಕನಸುಗಾರನ ಕಹಾನಿ' ವಿಶೇಷ ಸರಣಿ ನಿಮ್ಮ ವಿಜಯ ಕರ್ನಾಟಕ ವೆಬ್, ವಿಜಯ ಕರ್ನಾಟಕ ಅಧಿಕೃತ ಫೇಸ್‌ಬುಕ್ ಪುಟ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಜೂನ್ 28 ರಿಂದ ಹಲವು ಕಂತುಗಳಲ್ಲಿ ಪ್ರಸಾರವಾಗಲಿದೆ. ತಪ್ಪದೆ ವೀಕ್ಷಿಸಿ...