ಉಪೇಂದ್ರ ನಟನೆಯ 'ಕಬ್ಜ' ಚಿತ್ರಕ್ಕಾಗಿ ಬಂತು ಲಾರಿಗಟ್ಟಲೇ ಬಂದೂಕು

ಉಪೇಂದ್ರ ನಟನೆಯ ‘ಕಬ್ಜ’ ಚಿತ್ರ ದೊಡ್ಡ ಮಟ್ಟದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಆರ್‌. ಚಂದ್ರು ನಿರ್ದೇಶನದ ಈ ಚಿತ್ರದಲ್ಲಿಲಾರಿಗಟ್ಟಲೆ ಬಂದೂಕುಗಳನ್ನು ಬಳಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಉಪೇಂದ್ರ ನಟನೆಯ 'ಕಬ್ಜ' ಚಿತ್ರಕ್ಕಾಗಿ ಬಂತು ಲಾರಿಗಟ್ಟಲೇ ಬಂದೂಕು
Linkup
ಪದ್ಮಾ ಶಿವಮೊಗ್ಗ ಚಿತ್ರೀಕರಣದ ಹಂತದಲ್ಲಿರುವಾಗಲೇ ಸುದ್ದಿಯಾಗಿರುವ ಚಿತ್ರ ‘ಕಬ್ಜ’. ಈ ಚಿತ್ರ ಪಿರಿಯಾಡಿಕಲ್‌ ಆಗಿರುವುದು ಮೇಕಿಂಗ್‌ನ ಮತ್ತೊಂದು ವಿಶೇಷ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ದಿನಗಳ ಚಿತ್ರಣ ಸಿನಿಮಾದಲ್ಲಿ ಇರುವುದರಿಂದ ಪ್ರತಿಯೊಂದು ವಸ್ತುವೂ ಹಿಂದಿನ ಕಾಲದ್ದಾಗಿರಲಿದೆ. ಭೂಗತ ಜಗತ್ತಿನ ಕಥೆಯನ್ನೂ ಸಿನಿಮಾ ಒಳಗೊಂಡಿರುವುದರಿಂದ ಬಂದೂಕುಗಳ ಭರಾಟೆಯೂ ಜೋರಾಗಿ ಇರಲಿದೆ. ಈ ಚಿತ್ರೀಕರಣಕ್ಕಾಗಿ ಮುಂಬೈನಿಂದ ಲಾರಿಗಟ್ಟಲೆ ಶಸ್ತ್ರಾಸ್ತ್ರಗಳನ್ನು ತರಿಸಲಾಗಿದೆ. ಎಷ್ಟೆಷ್ಟು ಬಂದೂಕು ಇವೆ? ‘ಸಿನಿಮಾ ರೆಟ್ರೋ ಸ್ಟೈಲ್‌ನಲ್ಲಿರುವುದರಿಂದ ಪ್ರೇಕ್ಷಕರನ್ನು ದಶಕಗಳ ಹಿಂದಕ್ಕೆ ಕರೆದುಕೊಂಡು ಹೋಗಬೇಕಿದೆ. ಚಿತ್ರೀಕರಣಕ್ಕಾಗಿ ಮಿನಿ ಲಾರಿ ಬಂದೂಕು, ಪಿಸ್ತೂಲು, ಬೇರೆ ಬೇರೆ ಶಸ್ತ್ರಾಸ್ತ್ರಗಳು ಈಗಾಗಲೇ ನಮ್ಮ ಬಳಿ ಇವೆ. ಕಬ್ಜ ವಾರ್‌ ಮೂವಿ ಎನ್ನಬಹುದು. ಗ್ಯಾಂಗ್‌ ವಾರ್‌, ಮಿಲಿಟರಿ ವಾರ್‌, ಪೊಲೀಸ್‌ ಡಿಪಾರ್ಟ್‌ಮೆಂಟ್‌ ವಾರ್‌ಗಳ ದೃಶ್ಯಗಳು ಚಿತ್ರದಲ್ಲಿವೆ. ಬ್ರಿಟಿಷ್‌ ಕಾಲದ ವಾರ್‌ ದೃಶ್ಯಗಳೂ ಇವೆ. ಎಂ 134 ಬಂದೂಕು, 500 ಮೀಟರ್‌ ದೂರದವರೆಗೆ ಚಿಮ್ಮುವ ರಾಕೆಟ್‌ ಲಾಂಚರ್‌, ರಿವಾಲ್ವರ್ಸ್ ಎಲ್ಲವೂ ಇವೆ’ ಎಂದಿದ್ದಾರೆ ಚಂದ್ರು. ಬಂದೂಕು ತೂಕ ಎಷ್ಟು? ಚಿತ್ರೀಕರಣಕ್ಕಾಗಿ ತರಿಸಲಾದ ಶಸ್ತ್ರಾಸ್ತ್ರಗಳಲ್ಲಿಅತಿ ಹೆಚ್ಚು ತೂಕದ ಬಂದೂಕುಗಳು ಇವೆ. 40-50 ಕೆಜಿ ತೂಕದ ಬಂದೂಕುಗಳನ್ನು ಯುದ್ಧದ ದೃಶ್ಯದಲ್ಲಿ ಬಳಸಲಾಗಿದೆಯಂತೆ. ‘ಮಷಿನ್‌ ಗನ್‌ನಂಥ ಬಂದೂಕುಗಳಿವೆ. ಒಮ್ಮೆ ಟ್ರಿಗರ್‌ ಒತ್ತಿದರೆ ಒಂದಾದ ಮೇಲೆ ಒಂದರಂತೆ 250 ಬುಲೆಟ್‌ ಚಿಮ್ಮುತ್ತದೆ. ಇದರ ತೂಕ 40 ಕೆಜಿ ಇದೆ. ಈ ಸಿನಿಮಾ ರೆಗ್ಯುಲರ್‌ ಪ್ಯಾಟರ್ನ್‌ನಲ್ಲಿಲ್ಲ. ಹೊಸ ಶೈಲಿಯ ಚಿತ್ರ. ಬೇರೆ ಥರದ ಅಂಡರ್‌ವರ್ಲ್ಡ್ ಸ್ಟೋರಿ ಇದೆ’ ಎನ್ನುತ್ತಾರೆ ಆರ್‌. ಚಂದ್ರು. ಹೇಗೆ ಶೂಟಿಂಗ್ ಮಾಡಲಾಗುತ್ತದೆ? ದಶಕಗಳ ಹಿಂದೆ ಬಳಸುತ್ತಿದ್ದಂಥ ವಸ್ತುಗಳು ಮುಂಬೈನಲ್ಲಿ ಶೂಟಿಂಗ್‌ಗೆ ಸಿಗುತ್ತವೆ. ‘ಪಿರಿಯಾಡಿಕಲ್‌ ಸಿನಿಮಾಗಳಿಗೆ ಬೇಕಾಗುವ ಹಳೆಯ ಕಾಲದ ವಸ್ತುಗಳನ್ನು ಮುಂಬೈ ಸಂಸ್ಥೆಯೊಂದು ಸಂಗ್ರಹಿಸಿಟ್ಟುಕೊಂಡಿದೆ. ಇದನ್ನು ನಿರ್ವಹಣೆ ಮಾಡಲು ಬೆಂಗಳೂರಿನಲ್ಲಿ ಒಬ್ಬರು ಇದ್ದಾರೆ. ಕೆಲವು ಒರಿಜಿನಲ್‌ ಆಗಿವೆ, ಇನ್ನು ಕೆಲವನ್ನು ನಾವು ಅದೇ ರೀತಿ ಕಾಣುವಂತೆ ಮಾಡಿಸಿದ್ದೇವೆ. ಚಿತ್ರೀಕರಣ ಸಮಯದಲ್ಲಿ ಹಳೆಯ ಕಾಲದ ಒರಿಜಿನಲ್‌ ಬಂದೂಕುಗಳನ್ನು ಬಳಸಿದರೂ ಸಿಜಿಯಲ್ಲಿ ಗುಂಡು ಸಿಡಿದಂತೆ ತೋರಿಸುತ್ತೇವೆ’ ಎನ್ನುತ್ತಾರೆ ಅವರು. ಸಿನಿಮಾದಲ್ಲಿ ದಶಕಗಳ ಹಿಂದಿನ ಕಾರು, ಟೂವೀಲರ್‌, ಸೈಕಲ್‌ಗಳನ್ನು ಬಳಸಲಾಗಿದೆ. ಇಡೀ ಸಿನಿಮಾವನ್ನು ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ನಿರ್ದೇಶಕ ಏನು ಹೇಳ್ತಾರೆ? ‘ಕಬ್ಜ’ ಸಿನಿಮಾದಲ್ಲಿ ವಾರ್‌ಗಳು ನಡೆಯುತ್ತವೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ತೋರಿಸುವಂಥ ಹೊಡೆದಾಟವಲ್ಲ. ಬದಲಿಗೆ ಹಾಲಿವುಡ್‌ ಸಿನಿಮಾಗಳಲ್ಲಿ ನೋಡಬಹುದಾದ ಗ್ಯಾಂಗ್‌ವಾರ್‌ ಸ್ಟೈಲ್‌ನಲ್ಲಿ ಆ್ಯಕ್ಷನ್‌ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದೇವೆ. ಅತಿ ಹೆಚ್ಚು ವಾರ್‌ ದೃಶ್ಯಗಳಿವೆ ಎಂದು ಹೇಳಿದ್ದಾರೆ ನಿರ್ದೇಶಕ ಆರ್‌. ಚಂದ್ರು ಬಾಲಿವುಡ್ ನಟ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ 'ಕಬ್ಜ' ಚಿತ್ರಕ್ಕಾಗಿ ಭಾರೀ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ.