'ಲವ್ ಮಾಕ್‌ಟೇಲ್' ಚಿತ್ರವನ್ನು ಮನಸಾರೆ ಹೊಗಳಿದ ಆಸ್ಟ್ರೇಲಿಯಾದ ಜನಪ್ರಿಯ ಕ್ರೀಡಾ ಪತ್ರಕರ್ತೆ!

ಡಾರ್ಲಿಂಗ್ ಕೃಷ್ಣ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಸಿನಿಮಾ ಲವ್ ಮಾಕ್‌ಟೇಲ್. 2020ರಲ್ಲಿ ತೆರೆಕಂಡ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಚಿತ್ರಮಂದಿರ ಜೊತೆಗೆ ಓಟಿಟಿಯಲ್ಲೂ ಜಾದೂ ಮಾಡಿತ್ತು. ಇದೀಗ ಈ ಸಿನಿಮಾವನ್ನು ವಿದೇಶಿ ಪತ್ರಕರ್ತೆಯೊಬ್ಬರು ಮನಸಾರೆ ಹೊಗಳಿದ್ದಾರೆ.

'ಲವ್ ಮಾಕ್‌ಟೇಲ್' ಚಿತ್ರವನ್ನು ಮನಸಾರೆ ಹೊಗಳಿದ ಆಸ್ಟ್ರೇಲಿಯಾದ ಜನಪ್ರಿಯ ಕ್ರೀಡಾ ಪತ್ರಕರ್ತೆ!
Linkup
2020ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾಗಳಲ್ಲಿ 'ಲವ್ ಮಾಕ್‌ಟೇಲ್' ಕೂಡ ಒಂದು. ಮೊದಲ ಬಾರಿಗೆ ನಿರ್ದೇಶಿಸಿ, ನಟಿ ಮಿಲನಾ ನಾಗರಾಜ್ ಜೊತೆ ಸೇರಿಕೊಂಡು ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿದ ಸಿನಿಮಾ ಅದು. ಕೊರೊನಾ ಹಾವಳಿ ಇದ್ದಾಗಿಯೂ ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಇದೀಗ ಆ ಸಿನಿಮಾವನ್ನು ಆಸ್ಟ್ರೇಲಿಯಾದ ಜನಪ್ರಿಯ ಕ್ರೀಡಾ ಪತ್ರಕರ್ತೆ ನೋಡಿದ್ದಾರೆ. ಜೊತೆಗೆ ಮನಸಾರೆ ಹೊಗಳಿದ್ದಾರೆ. 'ಲವ್ ಮಾಕ್‌ಟೇಲ್' ಸಿನಿಮಾ ನೋಡಿ ಟ್ವೀಟ್ ಮಾಡಿರುವ ಅವರು, 'ನಾನು ಈಗ ತಾನೇ ಲವ್ ಮಾಕ್‌ಟೇಲ್ ಸಿನಿಮಾ ನೋಡಿದೆ. ನೀವುಗಳು ಅದ್ಭುತ, ಇದು ಗ್ರೇಟ್ ಸಿನಿಮಾ. ನಾನು ನೋಡುವಾಗ ತುಂಬ ಸಲ ನಕ್ಕಿದ್ದೇನೆ. ಕೊನೆಯಲ್ಲಿ ತುಂಬ ಬೇಸರವಾಯಿತು. ಚಿತ್ರದ ಸಂಗೀತ ಅದ್ಭುತವಾಗಿದೆ. ಇದರಲ್ಲಿ ಎಲ್ಲ ರೀತಿಯ ಎಮೋಷನ್ಸ್‌ ಇದೆ. ಇದರ ಸೀಕ್ವೆಲ್ ಸಿದ್ಧವಾಗುತ್ತಿದೆ ಎಂದು ಕೇಳಿದ್ದೇನೆ' ಎಂದು ಹೇಳಿದ್ದಾರೆ. ದಿಯಾ, ಕೆಜಿಎಫ್‌ ಕೂಡ ನೋಡಿದ್ದಾರೆ ವಿದೇಶದಲ್ಲಿದ್ದರೂ, ಕನ್ನಡ ಭಾಷೆ ಅರ್ಥವಾಗದೇ ಇದ್ದರೂ, ಕ್ಲೊಯಿ ಅಮಂಡಾ ಬೈಲಿ ಕನ್ನಡ ಸಿನಿಮಾಗಳನ್ನು ಫಾಲೋ ಮಾಡುತ್ತಿದ್ದಾರೆ. 'ದಿಯಾ' ನೋಡಿ ಖುಷಿಪಟ್ಟಿರುವ ಅವರು, ಕೆಜಿಎಫ್‌ ಕೂಡ ನೋಡಿದ್ದಾರೆ. ಸದ್ಯ 'ಕೆಜಿಎಫ್: ಚಾಪ್ಟರ್‌ 2' ನೋಡಲು ಕಾತರರಾಗಿದ್ದಾರೆ. ಇನ್ನು, ಜೋಡಿಯ ಬಗ್ಗೆ ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಕ್ಲೊಯಿ ಅಮಂಡಾ ಬೈಲಿಗೆ ಮಾಹಿತಿ ನೀಡಿದ್ದಾರೆ. ಕೃಷ್ಣ ಮತ್ತು ಮಿಲನಾ ನಿಜಜೀವನದಲ್ಲೂ ಮದುವೆ ಆಗಿದ್ದಾರೆ ಎಂಬುದನ್ನು ತಿಳಿದು 'ವಾವ್‌' ಎಂದು ಟ್ವೀಟ್ ಮಾಡಿದ್ದಾರೆ ಕ್ಲೊಯಿ ಅಮಂಡಾ. ಅಂದಹಾಗೆ, ಇವರು ಭಾರತದ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ಹಾಗಾಗಿ, ಭಾರತದಲ್ಲಿ ಇವರನ್ನು ತುಂಬ ಜನ ಫಾಲೋ ಮಾಡುತ್ತಾರೆ. ಈ ಹಿಂದೆ ತಮಿಳು ನಟ ಶಿವಕಾರ್ತಿಕೇಯನ್ 'ಲವ್ ಮಾಕ್‌ಟೇಲ್' ನೋಡಿ ಹೊಗಳಿದ್ದರು. ಸಿನಿಮಾದ ಕಥೆ, ಎಮೋಷನ್ಸ್, ಕಾಮಿಡಿ ಎಲ್ಲವನ್ನೂ ಇಷ್ಟಪಟ್ಟಿದ್ದ ಅವರು, ಕೃಷ್ಣ ಅವರ ನಂಬರ್ ಕಲೆಕ್ಟ್‌ ಮಾಡಿಕೊಂಡು, ಮೇಸೆಜ್ ಮಾಡಿದ್ದರು. ಅದನ್ನು ನೋಡಿ, ಅವರಿಗೆ ಕೃಷ್ಣ ಕರೆಮಾಡಿ ಮಾತನಾಡಿದ್ದರು. ಆಗ ಸಿನಿಮಾ ಬಗ್ಗೆ ಸಾಕಷ್ಟು ಮೆಚ್ಚುಗೆ ಮಾತುಗಳನ್ನಾಡಿದ್ದರು ಶಿವಕಾರ್ತಿಕೇಯನ್. ಅದೇ ರೀತಿ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಕೂಡ, 'ಈ ಸಿನಿಮಾ ಹೃದಯಕ್ಕೆ ಹತ್ತಿರವಾಯಿತು. 90ರ ದಶಕದ ಹಾಗೂ 2000ರ ಆರಂಭದ ಕಾಲದ ಎಲ್ಲರಿಗೂ ಈ ಸಿನಿಮಾ ಇಷ್ಟವಾಗಲಿದೆ. ಟ್ಯೂಷನ್ ಕ್ರಷ್‌, ಎಸ್‌ಎಂಎಸ್ ಕಾಲದ ಪ್ರೀತಿ-ಪ್ರೇಮ, ಗಲ್ಲಿಯಲ್ಲಿ ಆಡುತ್ತಿದ್ದ ಕ್ರಿಕೆಟ್, ಸ್ಮಾರ್ಟ್ ಫೋನ್‌ ಬರುವುದಕ್ಕೂ ಮೊದಲು ಇದ್ದ ಪ್ರೀತಿ... ಇದೆಲ್ಲ ಒಂದು ಕ್ಷಣ ನನ್ನನ್ನು ಆ ಕಾಲಕ್ಕೆ ಕರೆದೊಯ್ಯಿತು' ಎಂದು 'ಲವ್ ಮಾಕ್‌ಟೇಲ್‌' ಬಗ್ಗೆ ಅಲ್ಲು ಸಿರೀಶ್ ಹೇಳಿದ್ದರು.