Ashika: ನಟಿ ಆಶಿಕಾ ರಂಗನಾಥ್ ಈಗ ಕಬಡ್ಡಿ ಆಟಗಾರ್ತಿ! ಯಾವ ಸಿನಿಮಾದಲ್ಲಿ?

ಸ್ಯಾಂಡಲ್‌ವುಡ್‌ನಲ್ಲಿ ಗಣೇಶ್, ಶ್ರೀಮುರಳಿ, ಶರಣ್‌ ಮುಂತಾದ ಸ್ಟಾರ್‌ ನಟರ ಸಿನಿಮಾಗಳಲ್ಲಿ ನಟಿಸಿರುವ ಆಶಿಕಾ ರಂಗನಾಥ್ ಈಗ ಇದೇ ಮೊದಲ ಬಾರಿಗೆ ಪರಭಾಷೆಯ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಕಬಡ್ಡಿ ಆಟಗಾರ್ತಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

Ashika: ನಟಿ ಆಶಿಕಾ ರಂಗನಾಥ್ ಈಗ ಕಬಡ್ಡಿ ಆಟಗಾರ್ತಿ! ಯಾವ ಸಿನಿಮಾದಲ್ಲಿ?
Linkup
ಸ್ಯಾಂಡಲ್‌ವುಡ್‌ನ 'ಚುಟು ಚುಟು ಹುಡುಗಿ..' ಗುರುವಾರವಷ್ಟೇ (ಆ.5) ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಜೊತೆಗೆ ಒಂದು ಗುಡ್ ನ್ಯೂಸ್ ಕೂಡ ಅವರು ನೀಡಿದ್ದರು. ಅದೇನೆಂದರೆ, ತಮಿಳು ನಟ ಮುಂದಿನ ಸಿನಿಮಾದಲ್ಲಿ ಆಶಿಕಾ ನಾಯಕಿಯಾಗಿದ್ದು, ಆ ಮೂಲಕ ತಮಿಳಿಗೆ ಎಂಟ್ರಿ ನೀಡಿದ್ದಾರೆ. ಇದೀಗ ಮತ್ತೊಂದು ಹೊಸ ಅಪ್‌ಡೇಟ್ ನೀಡಿರುವ ಆಶಿಕಾ, ಇದೀಗ ಕಬಡ್ಡಿ ಆಟಗಾರ್ತಿ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಯಾವ ಚಿತ್ರಕ್ಕಾಗಿ ಈ ಪಾತ್ರ? ಅಂದಹಾಗೆ, ಆಶಿಕಾ ಕಬಡ್ಡಿ ಆಟಗಾರ್ತಿ ಪಾತ್ರ ಮಾಡುತ್ತಿರುವುದು ಅಥರ್ವ ಜೊತೆಗಿನ ತಮ್ಮ ಚೊಚ್ಚಲ ತಮಿಳು ಚಿತ್ರದಲ್ಲಿ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಆಶಿಕಾ, 'ನನಗೆ ತುಂಬ ಹಿಂದಿನಿಂದಲೂ ತಮಿಳು-ತೆಲುಗಿನಿಂದ ಆಫರ್ಸ್ ಬರುತ್ತಿದ್ದವು. ಆದರೆ, ಕನ್ನಡದಲ್ಲಿ ಸಾಕಷ್ಟು ಬ್ಯುಸಿ ಇದ್ದಿದ್ದರಿಂದ ನಾನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ನಾನಿಲ್ಲಿ ಒಪ್ಪಿಕೊಂಡಿದ್ದ ಸಿನಿಮಾ ಕೆಲಸಗಳು ಮುಕ್ತಾಯಗೊಂಡಿವೆ. ಜೊತೆಗೆ ತಮಿಳಿನಿಂದ ಒಳ್ಳೆಯ ಪ್ರಾಜೆಕ್ಟ್ ಬಂದಿದ್ದರಿಂದ ನಾನು ಒಪ್ಪಿಕೊಳ್ಳಬೇಕಾಯ್ತು' ಎಂದಿದ್ದಾರೆ ಆಶಿಕಾ. 'ಈ ತಂಡದ ಬಗ್ಗೆ ನನಗೆ ಇನ್ನೊಂದು ಖುಷಿ ವಿಷಯ ಏನೆಂದರೆ, ನನ್ನ ಶೆಡ್ಯೂಲ್ ಬ್ಯುಸಿ ಇದ್ದರೂ, ಡೇಟ್ಸ್‌ ಹೊಂದಾಣಿಕೆ ಮಾಡಿಕೊಳ್ಳಲು ಅವರು ರೆಡಿ ಇದ್ದರು. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ನಾನು ಕಬಡ್ಡಿ ಆಟಗಾರ್ತಿ ಆಗಿ ಕಾಣಿಸಿಕೊಳ್ಳಲಿದ್ದೇನೆ. ತಂಡವು ನನ್ನ ವರ್ಕೌಟ್ ವಿಡಿಯೋಗಳನ್ನು ನೋಡಿದೆ. ನಾನೇ ಆ ಪಾತ್ರಕ್ಕೆ ಸೂಕ್ತ ಎಂದು ನಿರ್ಧಾರ ಮಾಡಿ, ಆಯ್ಕೆ ಮಾಡಿಕೊಂಡಿದೆ' ಎನ್ನುವ ಅವರು, ಪರಭಾಷೆಯಲ್ಲಿ ನಟಿಸಿದರೂ, 'ನಾನು ಯಾವತ್ತೂ ಕನ್ನಡವಳೇ..' ಎಂಬುದನ್ನು ಮರೆಯುವುದಿಲ್ಲವಂತೆ! ಈಗಾಗಲೇ ಈ ಸಿನಿಮಾಗೆ ಮುಹೂರ್ತ ಕೂಡ ನೆರವೇರಿದೆ. '2.0', 'ಐ'ನಂತಹ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ನಿರ್ಮಾಪಕರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. 'ಮದಗಜ' ಸಿನಿಮಾ ಮುಗಿಸಿದ ನಂತರ ಆ ಸಿನಿಮಾದ ಸೆಟ್‌ ಸೇರಿಕೊಳ್ಳಲಿದ್ದಾರಂತೆ ಆಶಿಕಾ. 'ಕಲವಾಣಿ' ಸೇರಿದಂತೆ ನಾಲ್ಕೈದು ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿರುವ ಎ. ಸರ್ಕುಣಂ, ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.