ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ

ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲ್ಲೆಯಾಗಿದೆ. ಯಾಕೆ ಈ ಹಲ್ಲೆ ನಡೆದಿದೆ? ಏನು ಕಾರಣ? ಮುಂತಾದವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ
Linkup
ನಟ ಅವರು ಬೆಂಗಳೂರಿನ ನಿವಾಸಕ್ಕೆ ಬರುವ ಪ್ಲ್ಯಾನ್‌ನಲ್ಲಿದ್ದರು. ತಮಿಳುನಾಡಿನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಜಯ್ ಸೇತುಪತಿ ಬಂದಿಳಿದ ನಂತರದಲ್ಲಿ ವಿಜಯ್ ಸೇತುಪತಿ ಮೇಲೆ ಹಲ್ಲೆ ನಡೆದಿದೆ. ನಿನ್ನೆ ರಾತ್ರಿ 11 ಗಂಟೆಗೆ (ನ.2) ಈ ಘಟನೆ ನಡೆದಿದೆ. ಏನಿದು ಘಟನೆ? ವಿಜಯ್ ಸೇತುಪತಿ ಜೊತೆಗೆ ಬರುತ್ತಿದ್ದ ಸಹ ಪ್ರಯಾಣಿಕ ಕುಡಿದ ಅಮಲಿನಲ್ಲಿ ವಿಮಾನದಲ್ಲಿಯೇ ಅವರ ಪಿಎ ಜೊತೆಗೆ ಒಂದಷ್ಟು ಗಲಾಟೆ ಮಾಡಿಕೊಂಡಿದ್ದರು. ಆ ವೇಳೆ ವಿಜಯ್ ಸೇತುಪತಿ ಅವರಿಬ್ಬರ ಗಲಾಟೆಯನ್ನು ಬಿಡಿಸಲು ಹೋಗಿ ಮಾತಿನ ಚಕಮಕಿ ನಡೆದಿತ್ತು. ಇನ್ನು ವಿಜಯ್ ಸೇತುಪತಿ ಅವರು ವಿಮಾನದಿಂದ ಇಳಿದು ಹೋಗುತ್ತಿರುವಾಗ ಆ ಸಹ ಪ್ರಯಾಣಿಕ ಏಕಾಏಕಿ ವಿಜಯ್ ಮೇಲೆ ಹಲ್ಲೆ ಮಾಡಿದ್ದಾನೆ. ಆ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ರಾಜಿ ಸಂಧಾನ ಆಯ್ತಾ? ಹಲ್ಲೆ ನಡೆದಾಗ ಏರ್‌ಪೋರ್ಟ್‌ನಲ್ಲಿದ್ದ ಸಿಬ್ಬಂದಿಗಳು ಗಲಾಟೆ ಬಿಡಿಸುವ ಪ್ರಯತ್ನ ಮಾಡಿದ್ದಾರೆ, ಸಹ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. ಆನಂತರದಲ್ಲಿ ವಿಜಯ್ ಸೇತುಪತಿ ದೂರು ನೀಡಲು ಮುಂದಾಗಿದ್ದಾರೆ. ವಿಜಯ್ ಸೇತುಪತಿ & ಸಹಪ್ರಯಾಣಿಕರ ಮಧ್ಯೆ ರಾಜಿ ಸಂಧಾನ ಆಗಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಹಲ್ಲೆ ಮಾಡಿದವರು ತಮಿಳುನಾಡಿನ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ. ಅಪ್ಪು ಮನೆಗೆ ಭೇಟಿ ನೀಡುವ ಪ್ಲ್ಯಾನ್ ಇತ್ತು ಸದ್ಯ ವಿಜಯ್ ಸೇತುಪತಿ ಅವರು ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿದ್ದಾರೆ. ಅಲ್ಲಿ 'ಮಾಸ್ಟರ್‌ಶೆಫ್' ಶೋ ಶೂಟಿಂಗ್‌ನಲ್ಲಿ ವಿಜಯ್ ಭಾಗವಹಿಸಬೇಕಿತ್ತು, ಆನಂತರದಲ್ಲಿ ಪುನೀತ್ ರಾಜ್‌ಕುಮಾರ್ ಮನೆ, ಸಮಾಧಿಗೆ ವಿಜಯ್ ಭೇಟಿ ಕೊಡುವ ಪ್ಲ್ಯಾನ್ ಮಾಡಿದ್ದರು. ಆದರೆ ಹಲ್ಲೆಯಿಂದಾಗಿ ವಿಜಯ್ ಪುನೀತ್ ಮನೆಗೆ ತೆರಳಿರಲಿಲ್ಲ. ಇಂದು ಸಂಜೆ ಅವರು ಪುನೀತ್ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕನ್ನಡದ ಮೇಲೆ ವಿಜಯ್ ಸೇತುಪತಿಗೆ ಅಭಿಮಾನ ಮೊದಲು ಕನ್ನಡದ 'ಅಖಾಡ' ಸಿನಿಮಾದಲ್ಲಿ ವಿಜಯ್ ಸೇತುಪತಿ ಬಣ್ಣ ಹಚ್ಚಿದ್ದರು. ಇನ್ನು , ಕನ್ನಡ ಚಿತ್ರರಂಗದ ಕುರಿತು ವಿಜಯ್ ಸೇತುಪತಿಗೆ ದೊಡ್ಡ ಅಭಿಮಾನವಿದೆ. ಮಾಸ್ಟರ್ ಶೆಫ್ ಶೋ ಅಡುಗೆ ಕುರಿತಾದ ಶೋ ಆಗಿದ್ದು, ಅದರಲ್ಲಿ ವಿಜಯ್ ಸೇತುಪತಿ ಅವರು ತಮಿಳು ಅವತರಣಿಕೆಯ ನಿರೂಪಣೆ ಮಾಡುತ್ತಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿಯೂ ಈ ಶೋ ಮೂಡಿಬರುತ್ತಿದೆ. ಅಪ್ಪು ಮನೆಗೆ ನಟ-ನಟಿಯರ ದಂಡು ಈಗಾಗಲೇ ನಟರಾದ ಮೆಗಾಸ್ಟಾರ್ ಚಿರಂಜೀವಿ, ಶ್ರೀಕಾಂತ್, ಅಲಿ, ಶರತ್ ಕುಮಾರ್, ನಂದಮೂರಿ ಬಾಲಕೃಷ್ಣ ಮುಂತಾದವರು ಅಪ್ಪು ಕೊನೆಯ ದರ್ಶನ ಪಡೆದಿದ್ದರು. ನಟರಾದ ಅಕ್ಕಿನೇನಿ ನಾಗಾರ್ಜುನ, ರಾಮ್ ಚರಣ್ ತೇಜ, ಶಿವಕಾರ್ತಿಕೇಯನ್ ಅವರು ಈಗಾಗಲೇ ಅಪ್ಪು ಮನೆಗೆ ಭೇಟಿ ನೀಡಿ ದೊಡ್ಮನೆ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.