ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಹತ್ಯೆ ಮಾಡಿದ ಚೆನ್ನೈನ ಮಹಿಳೆ, ಸಂತ್ರಸ್ತೆ ಪರ ನಿಂತ ಪೊಲೀಸರು!

ಚೆನ್ನೈನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅಚಾತುರ್ಯದಿಂದ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನ ಸಾವಿಗೆ ಕಾರಣರಾಗಿದ್ದರು, ಆದರೆ ಪೊಲೀಸರು ಸತ್ಯಾಂಶ ಮನಗಂಡು ಮಹಿಳೆಯನ್ನು ಆರೋಪಮುಕ್ತಗೊಳಿಸಿದ್ದಾರೆ. ಆ ವ್ಯಕ್ತಿ ಮಹಿಳೆಯ ಅತ್ಯಾಚಾರಕ್ಕೆ ಯುತ್ನಿಸಿರುವುದು ತಿಳಿದುಬಂದ ಹಿನ್ನೆಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಹತ್ಯೆ ಮಾಡಿದ ಚೆನ್ನೈನ ಮಹಿಳೆ, ಸಂತ್ರಸ್ತೆ ಪರ ನಿಂತ ಪೊಲೀಸರು!
Linkup
ಚೆನ್ನೈ:ಅತ್ಯಾಚಾರಕ್ಕೆ ಯತ್ನಿಸಿದವನ ಹತ್ಯೆಗೈದ ಮಹಿಳೆಯನ್ನು ಆರೋಪರಹಿತವಾಗಿ ಪೊಲೀಸರು ಬಿಡುಗಡೆ ಮಾಡಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್‌ ಜಿಲ್ಲೆಯ ಮಿಂಜೂರಿನಲ್ಲಿ ಜರುಗಿದೆ. ಜು.113ರಂದು ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಮಹಿಳೆಯನ್ನು ಪರಿಚಿತನೊಬ್ಬ ಬಲವಂತವಾಗಿ ಬಂಧಿಸಿ ಅಜ್ಞಾತ ಸ್ಥಳಕ್ಕೆ ಎಳೆದೊಯ್ದಿದ್ದ. ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧವೊಡ್ಡಿ ಮಹಿಳೆಯು ಆತನನ್ನು ಜೋರಾಗಿ ತಳ್ಳಿದ್ದರು. ಆಗ ಆತ ಕಲ್ಲೊಂದರ ಮೇಲೆ ಬಿದ್ದು ಗಾಯಗೊಂಡಿದ್ದ. ಕೆಲವು ನಿಮಿಷಗಳ ಬಳಿಕ ಮೃತಪಟ್ಟ ಅವನನ್ನು ಎಳೆದೊಯ್ದು ಮಹಿಳೆಯು ರಸ್ತೆ ಬದಿ ಬಿಸಾಡಿದ್ದರು. ಕೂಡಲೇ ಮನೆಗೆ ತೆರಳಿ ಘಟನೆಯನ್ನು ಪತಿಗೆ ತಿಳಿಸಿದ್ದರು. ಘಟನಾ ಸ್ಥಳಕ್ಕೆ ಪತಿಯು ತಲುಪುವಷ್ಟರಲ್ಲಿ ಪೊಲೀಸರು ಮತ್ತು ಆ್ಯಂಬುಲೆನ್ಸ್‌ ತಂಡವು ಶವವನ್ನು ಪರೀಕ್ಷೆ ಮಾಡುತ್ತಿತ್ತು. ಸ್ಥಳೀಯರು ಕೂಡ ಜಮಾಯಿಸಿದ್ದರು. ಸಿಆರ್‌ಪಿಸಿ ಸೆಕ್ಷನ್‌ 174 ಅಡಿಯಲ್ಲಿಅನುಮಾನಾಸ್ಪದ ಸಾವಿನ ಪ್ರಕರಣವನ್ನು ಕೂಡ ಪೊಲೀಸರು ದಾಖಲಿಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಪೊಲೀಸರಿಗೆ ನಿಜ ವಿಚಾರ ತಿಳಿದು ಬಂತಾದರೂ, ತನ್ನ ಮಾನ-ಪ್ರಾಣ ರಕ್ಷಣೆಗೆ ಮಹಿಳೆಯಿಂದಾದ ಅಚಾತುರ್ಯವನ್ನು ಮನಗಂಡು ಪೊಲೀಸರು ಆಕೆಯನ್ನು ಆರೋಪ ಮುಕ್ತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.