ಆಪಲ್ ಐಫೋನ್ ಘಟಕದಲ್ಲಿ ಫುಡ್ ಪಾಯ್ಸನಿಂಗ್: ನೌಕರರ ಪ್ರತಿಭಟನೆಗೆ ಹೆದರಿ 5 ದಿನ ಬಂದ್

ತಮಿಳುನಾಡಿನ ಚೆನ್ನೈ ಸಮೀಪದ ಆಪಲ್ ಪೂರೈಕೆದಾರ ಫಾಕ್ಸ್‌ಕಾನ್‌ ಘಟಕದಲ್ಲಿ ವಿಷಪೂರಿತ ಆಹಾರ ಸೇವನೆಯಿಂದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನೌಕರರಲ್ಲಿ ಆಕ್ರೋಶ ಮೂಡಿಸಿದೆ. ತೀವ್ರಗೊಳ್ಳುತ್ತಿರುವ ಪ್ರತಿಭಟನೆಗೆ ಬೆದರಿ ಐದು ದಿನ ಘಟಕವನ್ನು ಮುಚ್ಚಲಾಗಿದೆ.

ಆಪಲ್ ಐಫೋನ್ ಘಟಕದಲ್ಲಿ ಫುಡ್ ಪಾಯ್ಸನಿಂಗ್: ನೌಕರರ ಪ್ರತಿಭಟನೆಗೆ ಹೆದರಿ 5 ದಿನ ಬಂದ್
Linkup
ಚೆನ್ನೈ: ತಮಿಳುನಾಡು ರಾಜಧಾನಿ ಸಮೀಪ ಇರುವ ಪೂರೈಕೆದಾರ ಘಟಕವನ್ನು ಮುಚ್ಚಲಾಗಿದೆ. () ಘಟನೆಯ ಬೆನ್ನಲ್ಲೇ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಘಟಕದಲ್ಲಿ ಐದು ದಿನಗಳ ರಜೆಯನ್ನು ಘೋಷಿಸಲಾಗಿದೆ ಎಂದು ಕಾಂಚಿಪುರಂನ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಫಾಕ್ಸ್‌ಕಾನ್ () ಮತ್ತು ಆಪಲ್ () ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಿರುವುದನ್ನು ತಮಿಳುನಾಡಿನ ಹಿರಿಯ ಅಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ. ಫಾಕ್ಸ್‌ಕಾನ್ ಘಟಕದಲ್ಲಿ ಕಳೆದ ವಾರ ವಿಷಪೂರಿತ ಆಹಾರ ಸೇವನೆಯಿಂದ ಸುಮಾರು 150 ಉದ್ಯೋಗಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಅಲ್ಲಿನ ನೌಕರರು ಘಟಕದ ವಿರುದ್ಧ ತೀವ್ರ ಪ್ರತಿಭಟನೆಗೆ ಇಳಿದಿದ್ದರು. ಮುಖ್ಯ ಹೆದ್ದಾರಿಯೊಂದನ್ನು ಅಡ್ಡಗಟ್ಟಿದ್ದಕ್ಕಾಗಿ ಬಂಧಿತರಾಗಿದ್ದ ಹತ್ತಾರು ಜನರನ್ನು ಪೊಲೀಸರು ಸೋಮವಾರ ಬಿಡುಗಡೆ ಮಾಡಿದ್ದಾರೆ. ಈ ಘಟಕವು 12 ( 12) ಮಾದರಿಯ ಫೋನ್‌ಗಳನ್ನು ತಯಾರಿಸುತ್ತದೆ. ಘಟಕದ ಕೆಲಸಗಾರರು ಮತ್ತು ಅವರ ಸಂಬಂಧಿಕರು ಚೆನ್ನೈ- ಬೆಂಗಳೂರು ಹೆದ್ದಾರಿಗೆ ತಡೆಯೊಡ್ಡಿದ್ದರು. ಭಾರತದಲ್ಲಿನ ಫಾಕ್ಸ್‌ಕಾನ್ ಉದ್ಯೋಗಿಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಪಲ್ ಸಂಸ್ಥೆಯು ಇತ್ತೀಚೆಗಷ್ಟೇ ಘಟಕದಲ್ಲಿ ಐಫೋನ್ 13 ತಯಾರಿಕೆಯ ಪ್ರಯೋಗವನ್ನು ಆರಂಭಿಸಿತ್ತು. ಆಪಲ್ ಕಂಪೆನಿಯು ಫೆಬ್ರವರಿ ವೇಳೆಗೆ ದೇಶಿ ಮಾರುಕಟ್ಟೆ ಹಾಗೂ ರಫ್ತು ಎರಡೂ ಉದ್ದೇಶಗಳಿಂದ ಭಾರತದಲ್ಲಿ ಈ ಮಾಡೆಲ್‌ನ ವಾಣಿಜ್ಯ ಉತ್ಪಾದನೆಯನ್ನು ಆರಂಭಿಸುವ ನಿರೀಕ್ಷೆಯಿದೆ. ಕಂಪೆನಿಯ ಘಟಕದಲ್ಲಿ ಆಹಾರ ಸೇವಿಸಿದ ನೌಕರರು ತೀವ್ರ ಅಸ್ವಸ್ಥರಾಗಿದ್ದಾರೆ. ಆದರೆ ಈ ಘಟನೆ ಹೊರಗೆ ಬಾರದಂತೆ ಕಂಪೆನಿ ತಡೆಯುತ್ತಿದೆ. ಅಸ್ವಸ್ಥರಾದ ಉದ್ಯೋಗಿಗಳು ಎಲ್ಲಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹಾಗೆಯೇ ಎಷ್ಟು ಮಂದಿಗೆ ಫುಡ್ ಪಾಯ್ಸನಿಂಗ್ ಆಗಿದೆ ಎನ್ನುವುದೂ ನಿಖರವಾಗಿ ತಿಳಿದಿಲ್ಲ ಎಂದು ಉದ್ಯೋಗಿಗಳು ಆರೋಪಿಸಿದ್ದಾರೆ. ಡಿ. 15ರಂದು ನಿಧಾನವಾಗಿ ಪ್ರತಿಭಟನೆ ಆರಂಭವಾಗಿತ್ತು. 256 ನೌಕರರಲ್ಲಿ ಅತಿಸಾರದ ಸಮಸ್ಯೆ ಉಂಟಾಗಿತ್ತು. ಅವರಲ್ಲಿ 159 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಉಳಿದವರಿಗೆ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿರುವಳ್ಳೂರು ಜಿಲ್ಲಾಧಿಕಾರಿ ಅಲ್ಬಿ ಜಾನ್ ತಿಳಿಸಿದ್ದರು. ಅಸ್ವಸ್ಥರಾದವರಲ್ಲಿ ಕನಿಷ್ಠ ಇಬ್ಬರು ನೌಕರರು ಮೃತಪಟ್ಟಿದ್ದಾರೆ ಎಂಬ ವದಂತಿ, ಪ್ರತಿಭಟನೆ ತೀವ್ರಗೊಳ್ಳಲು ಕಾರಣವಾಗಿದೆ. ಅನೇಕ ನೌಕರರು ಕೆಲಸಕ್ಕೆ ಹಾಜರಾಗದೆ ಇದ್ದಿದ್ದರಿಂದ ಪರಿಸ್ಥಿತಿ ಗಂಭೀರವಾಗಿದೆ ಎಂಬ ಅರಿವಾಯಿತು. ಈ ಬಗ್ಗೆ ಮೇಲ್ವಿಚಾರಕರನ್ನು ಪ್ರಶ್ನಿಸಿದಾಗ ಯಾರೂ ಉತ್ತರ ನೀಡಲಿಲ್ಲ. ನಾವು ಪ್ರತಿಭಟನೆಗೆ ಕುಳಿತ ಬಳಿಕವಷ್ಟೇ ಮಾತುಕತೆಗೆ ಮುಂದಾದರು ಎಂದು ನೌಕರರು ಆರೋಪಿಸಿದ್ದಾರೆ. ನೌಕರರ ಪ್ರತಿಭಟನೆಯಿಂದ ಸ್ಥಳದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ. ಫುಡ್ ಪಾಯ್ಸನಿಂಗ್ ಬಗ್ಗೆ ಕಂಪೆನಿ ಯಾವುದೇ ಅಧಿಕೃತ ಹೇಳಿಕೆ ನೀಡದೆ ಇರುವುದು ನೌಕರರ ಅನುಮಾನಗಳನ್ನು ಹೆಚ್ಚಿಸುತ್ತಿದೆ. ಹೀಗಾಗಿ ಇದರ ಪರಿಣಾಮ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಘಟಕಕ್ಕೆ ರಜೆ ಘೋಷಿಸಲಾಗಿದೆ. ಕೋಲಾರದಲ್ಲಿ ನಡೆದಿದ್ದ ಹಿಂಸಾಚಾರಕಳೆದ ವರ್ಷ ಡಿಸೆಂಬರ್‌ನಲ್ಲಿ ಕೋಲಾರದಲ್ಲಿರುವ ಆಪಲ್ ಪೂರೈಕೆದಾರ ವಿಸ್ಟ್ರಾನ್ ಕಾರ್ಪ್‌ನಲ್ಲಿ ವೇತನ ತಾರತಮ್ಯ ಆರೋಪಿಸಿ ನೌಕರರು ಪ್ರತಿಭಟನೆಗೆ ಇಳಿದಿದ್ದರು. ಇದಕ್ಕೆ ಕಂಪೆನಿ ಕಿವಿಗೊಡದೆ ಇದ್ದಿದ್ದರಿಂದ ರೊಚ್ಚಿಗೆದ್ದ ಕೆಲವರು ದಾಳಿ ನಡೆಸಿ ಘಟಕದ ಒಳಗಿದ್ದ ಸಾಧನಗಳು, ವಾಹನಗಳನ್ನು ಧ್ವಂಸಗೊಳಿಸಿದ್ದರು. ಇದರಿಂದ ಸುಮಾರು 60 ಮಿಲಿಯನ್ ಡಾಲರ್ ನಷ್ಟ ಉಂಟಾಗಿತ್ತು.