ಹೊಸಬರ 'ಕರ್ಮಣ್ಯೇ ವಾಧಿಕಾರಸ್ತೇ' ಚಿತ್ರಕ್ಕೆ ಹಾರೈಸಿದ ಶಾಸಕ ಅರವಿಂದ ಬೆಲ್ಲದ

ಪ್ರತೀಕ್ ಸುಬ್ರಮಣಿ, ದಿವ್ಯಾ, ನಾಟ್ಯ ರಂಗ ಮುಂತಾದವರು ನಟಿಸಿರುವ 'ಕರ್ಮಣ್ಯೇ ವಾಧಿಕಾರಸ್ತೇ' ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ರಿಲೀಸ್ ಮಾಡಲಾಗಿದೆ. ಧಾರವಾಡ ಶಾಸಕ ಅರವಿಂದ ಬೆಲ್ಲದ ಮುಖ್ಯ ಅತಿಥಿಯಾಗಿ ಬಂದಿದ್ದರು.

ಹೊಸಬರ 'ಕರ್ಮಣ್ಯೇ ವಾಧಿಕಾರಸ್ತೇ' ಚಿತ್ರಕ್ಕೆ ಹಾರೈಸಿದ ಶಾಸಕ ಅರವಿಂದ ಬೆಲ್ಲದ
Linkup
'' ಎಂದರೆ, 'ನಿನ್ನ ಕೆಲಸ ನೀನು ಮಾಡು.. ಫಲಾಫಲಗಳನ್ನು ನನಗೆ ಬಿಡು' ಎಂದು. ಈ ವಾಕ್ಯದ ಅರ್ಥವನ್ನೇ ಇಟ್ಟುಕೊಂಡು, ಅದನ್ನೇ ಶೀರ್ಷಿಕೆಯನ್ನಾಗಿಸಿ, ಇಲ್ಲೊಂದು ತಂಡ ಸಿನಿಮಾ ಮಾಡಿದೆ. ಈಚೆಗಷ್ಟೇ 'ಕರ್ಮಣ್ಯೇ ವಾಧಿಕಾರಸ್ತೇ' ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನೆರವೇರಿತು. ವಿಶೇಷವೆಂದರೆ, ಇದಕ್ಕೆ ಮುಖ್ಯ ಅತಿಥಿಯಾಗಿ ಧಾರವಾಡ ಶಾಸಕ ಆಗಮಿಸಿದ್ದರು. ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಅರವಿಂದ ಬೆಲ್ಲದ ಅವರು, 'ನನಗೆ ಈ ಚಿತ್ರದ ನಾಯಕ ಪ್ರತೀಕ್ ಚಿಕ್ಕಂದಿನಿಂದಲೂ ಪರಿಚಯ. ಅವನು ಸಿನಿಮಾಗೆ ಬರುತ್ತಾನೆ ಎಂದು ತಿಳಿದಾಗ ಇವನಿಗೆ ಸಿನಿಮಾ ಏಕೆ ಬೇಕು ಅಂದುಕೊಂಡಿದ್ದೆ. ಈಗ ಟ್ರೇಲರ್ ನೋಡಿ ಸಂತಸವಾಯಿತು. ಎಲ್ಲರ ಶ್ರಮ ಈ ಟ್ರೈಲರ್‌ನಲ್ಲೇ ಕಾಣುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ' ಎಂದರು. ಇನ್ನು, ಶಾಸಕರಿಗೆ ಧನ್ಯವಾದ ಹೇಳಿದ ನಾಯಕ ಪ್ರತೀಕ್ ಸುಬ್ರಮಣಿ, 'ನಾನು ಚಿತ್ರರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಹಾಗೂ ನಿರ್ದೇಶಕ ಶ್ರೀಹರಿ ಆನಂದ್ ಕಿರುಚಿತ್ರವೊಂದರ ಮೂಲಕ ಪರಿಚಿತರಾದೇವು. ಅಂದಿನಿಂದ ಈ ಚಿತ್ರದ ಕಥೆ ಹಿಡಿದುಕೊಂಡು ಸಾಕಷ್ಟು ಅಲೆದಿದ್ದೇವೆ. ಕೊನೆಗೆ ದೇವರ ಹಾಗೆ ನಿರ್ಮಾಪಕ ರಮೇಶ್ ರಾಮಯ್ಯ ಸಿಕ್ಕರು. ನಂತರ ಚಿತ್ರ ಆರಂಭವಾಯಿತು. ಮಧ್ಯೆ ಕೊರೊನಾದಿಂದ ಸಾಕಷ್ಟು ಅಡೆತಡೆಗಳು ಎದುರಾದವು. ಕೊನೆಗೆ ಚಿತ್ರ ಈಗ ರಿಲೀಸ್ ಹಂತಕ್ಕೆ ಬಂದಿದೆ. ಟ್ರೇಲರ್ ಗಿಂತ ಹತ್ತು ಪಟ್ಟು ಸಿನಿಮಾ ಚೆನ್ನಾಗಿದೆ ಎಂಬ ಭರವಸೆ ಇದೆ. ನೋಡಿ ಹರಸಿ' ಎಂದರು. ಟೈಟಲ್ ಇಟ್ಟಿದ್ದು ಹೀರೋ 'ನಾನು ಹಾಗೂ ಪ್ರತೀಕ್ ಸುಬ್ರಮಣಿ ಸಿನಿರಂಗದಲ್ಲಿ ಒಟ್ಟಿಗೆ ಸೈಕಲ್ ತುಳಿದವರು.‌ ಕಥೆ ಸಿದ್ದಮಾಡಿಕೊಂಡಾಗ ಚಿತ್ರದ ಶೀರ್ಷಿಕೆ ಏನು ಇಡಬೇಕು ಎಂಬ ಚರ್ಚೆ ನಡೆಯಿತು. ಕೊನೆಗೆ ಪ್ರತೀಕ್ ಈ ಹೆಸರು ಸೂಚಿಸಿದರು. ಚಿತ್ರ ನಿರ್ಮಾಣಕ್ಕೆ ಯಾರು ಸಿಗದಿದ್ದಾಗ, ಆಪತ್ಭಾಂಧವನಂತೆ ಬಂದವರು ರಮೇಶ್ ರಾಮಯ್ಯ. ಅವರಿಗೆ ನಮ್ಮ ಧನ್ಯವಾದ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ದಾಂಡೇಲಿಯಲ್ಲಿ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ. ನನ್ನೊಡನೆ ಸಹಕರಿಸಿದ ಚಿತ್ರತಂಡಕ್ಕೆ ಸಾವಿರ‌ ಧನ್ಯವಾದ' ಎಂದರು ನಿರ್ದೇಶಕ ಶ್ರೀಹರಿ ಆನಂದ್. 'ನಾನು ಅನುಭವಿ ನಿರ್ಮಾಪಕನಲ್ಲ. ನಾನು ವೃತ್ತಿಯಲ್ಲಿ ವೈದ್ಯ. ಇಪ್ಪತ್ತ್ಮೂರು ವರ್ಷಗಳಿಂದ ಹೊರದೇಶದಲ್ಲಿದ್ದರೂ, ಮನಸ್ಸೆಲ್ಲಾ ಇಲ್ಲೇ ಇತ್ತು. ಅಲ್ಲೇ ಸಾಕಷ್ಟು ಸಿನಿಮಾ ನೋಡುತ್ತಿದ್ದೆ. ನನ್ನ ಪರಿಚಿತರೊಬ್ಬರ ಮೂಲಕ ಪ್ರತೀಕ್ ಇಮೇಲ್ ಮೂಲಕ ಸಂಪರ್ಕಿಸಿದರು. ಕೊನೆಗೆ ಇಲ್ಲಿಗೆ ಬಂದಾಗ ಮಾತುಕತೆಯಾಗಿ, ನಿರ್ಮಾಣಕ್ಕೆ ಮುಂದಾದೆ. ಚಿತ್ರ ಚೆನ್ನಾಗಿದೆ, ನಿಮ್ಮೆಲ್ಲರ ಬೆಂಬಲವಿರಲಿ' ಎಂದರು ನಿರ್ಮಾಪಕ ರಮೇಶ್ ರಾಮಯ್ಯ. 'ಚಿತ್ರದಲ್ಲಿ ಎರಡು ಹಾಡುಗಳಿದೆ. ಒಂದನ್ನು ಸಂಚಿತ್ ಹೆಗ್ಡೆ ಹಾಗೂ ಅಶ್ವಿನಿ ಜೋಷಿ ಹಾಡಿದ್ದಾರೆ. ಮತ್ತೊಂದನ್ನು ನಾನು ಹಾಗೂ ಈಶಾ ಸುಚಿ ಹಾಡಿದ್ದೇವೆ. ನಿಶ್ಚಲ್ ಹಾಡುಗಳನ್ನು ಬರೆದಿದ್ದಾರೆ' ಎಂದು ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ಉದಯ್ ಲೀಲಾ ಛಾಯಾಗ್ರಹಣ ಮಾಡಿದ್ದು, ವಿಜೇತ್ ಚಂದ್ರ ಸಂಕಲನದ ಹೊಣೆ ಹೊತ್ತಿದ್ದಾರೆ. ಪ್ರತೀಕ್ ಸುಬ್ರಮಣಿ ನಾಯಕಿಯಾಗಿ ದಿವ್ಯಾ ನಟಿಸಿದ್ದು, ನೇಪಾಳದ ಡೋಲ್ಮ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಭಿಷೇಕ್ ಶೆಟ್ಟಿ, ನಾಟ್ಯ ರಂಗ, ಉಗ್ರಂ ಮಂಜು, ನಟನ ಪ್ರಶಾಂತ್ ಮುಂತಾದವರು ಪೋಷಕ ಪಾತ್ರದಲ್ಲಿದ್ದಾರೆ.