ಅಣ್ಣನ ಕೊಲೆ ಮಾಡಿದ ಆರೋಪದಡಿ ಕನ್ನಡ ಸಿನಿಮಾ ನಟಿ ಶನಯಾ ಕಾಟ್ವೆ ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಕನ್ನಡ ನಟಿಯೊಬ್ಬರು ಸ್ವಂತ ಅಣ್ಣನನ್ನೇ ಕೊಲೆಗೈದಿದ್ದಾರೆ. ಕೇವಲ ಕೊಲೆ ಮಾಡುವುದರ ಜೊತೆಗೆ ದೇಹದ ಅಂಗಾಂಗವನ್ನು ಕತ್ತರಿಸಿ ಬೇರೆ ಬೇರೆ ಕಡೆ ಎಸೆಯಲಾಗಿದೆ ಎಂಬ ಆರೋಪದಡಿ ನಟಿಯನ್ನು ಬಂಧಿಸಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಣ್ಣನ ಕೊಲೆ ಮಾಡಿದ ಆರೋಪದಡಿ ಕನ್ನಡ ಸಿನಿಮಾ ನಟಿ ಶನಯಾ ಕಾಟ್ವೆ ಬಂಧಿಸಿದ ಹುಬ್ಬಳ್ಳಿ ಪೊಲೀಸರು
Linkup
ಕನ್ನಡ ನಟಿ ಅವರನ್ನು ಬಂಧಿಸಿದ್ದಾರೆ. ಗ್ರಾಮೀಣ ಪೊಲೀಸರು 32 ವರ್ಷದ ಸಹೋದರನನ್ನು ಕೊಲೆ ಮಾಡಿದ ಆರೋಪದಡಿ ಶನಾಯಾ ಅವರನ್ನು ಬಂಧಿಸಿದ್ದಾರೆ. ಶನಾಯಾ ಅವರು ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದ ನಿಯಾಜ್ ಅಹ್ಮದ್ ಎಂಬಾತನನ್ನು ಅನೇಕ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಅದಕ್ಕೆ ಅವರ ಅಣ್ಣ ವಿರೋಧ ವ್ಯಕ್ತಪಡಿಸಿದ್ದನು. ಏಪ್ರಿಲ್ 9ರಂದು ನಟಿಯ ಪ್ರಿಯತಮ ಹಾಗೂ ಅವನ ಸಹಚರರು ಸೇರಿ ಶನಯಾ ಕಾಟ್ವೆ ಅಣ್ಣ ರಾಕೇಶ್‌ನನ್ನು ಕೊಲೆ ಮಾಡಿದ್ದಾರೆ. ಕೊಲೆ ಆದನಂತರದಲ್ಲಿ ಮೂರು ದಿನ ಶವವನ್ನು ಕಾರ್‌ನಲ್ಲಿ ಮುಚ್ಚಿಟ್ಟಿದ್ದರು. ಶವದ ವಾಸನೆ ಬರುತ್ತಿದ್ದಂತೆ ರುಂಡ, ಮುಂಡ, ಎರಡು ಕೈ, ಎರಡು ಕಾಲುಗಳನ್ನು ಕತ್ತರಿಸಿದ ದೇಹವನ್ನು ಕತ್ತರಿಸಿ ಬೇರೆ ಬೇರೆ ಕಡೆ ಎಸೆದಿದ್ದರು. ಈ ಪ್ರಕರಣವನ್ನು ಹುಬ್ಬಳ್ಳಿ ಪೊಲೀಸರು ಬೇಧಿಸಿದ್ದಾರೆ. ನಿಯಾಜ್ ಅಹ್ಮದ್ ಕಟಿಗಾರ, ತೌಸೀಫ ಅಹ್ಮದ್ ಚೆನ್ನಾಪುರ, ಅಲ್ತಾಫ ತಾಜುದ್ದೀನ ಮುಲ್ಲಾ, ಅಮನ ಅಲಿಯಾಸ್ ಮಹ್ಮದ್ ಉಮರ ಗಿರಣಿವಾಲೆ ಮುಂತಾದವರನ್ನು ಬಂಧನ ಮಾಡಲಾಗಿದೆ. ಶನಯಾ ಕಾಟ್ವೆ, ಮಲೀಕ್, ಫಿರೋಜ್, ಶೈಪುದ್ದೀನ್ ಅವರನ್ನು ಕೂಡ ಬಂಧಿಸಲಾಗಿದೆ. ಒಟ್ಟಿನಲ್ಲಿ ನಟಿ ಸೇರಿದಂತೆ 8 ಜನರನ್ನು ಈ ಕೇಸ್‌ನಲ್ಲಿ ಬಂಧಿಸಲಾಗಿದೆ. ಏಪ್ರಿಲ್ 22ಕ್ಕೆ ಶನಯಾ ಕಾಟ್ವೆ ಬಂಧನ ಮಾಡಲಾಗಿದೆ. ಮಾಡೆಲ್, ನಟಿಯೂ ಆಗಿದ್ದ ಶನಯಾ ಕಾಟ್ವೆ "ಇದಂ ಪ್ರೇಮಂ ಜೀವನಂ" ಸಿನಿಮಾದಲ್ಲಿ ನಟಿಸಿದ್ದರು. 2018ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಆ ನಂತರದಲ್ಲಿ ಅವರು 'ಒಂದು ಗಂಟೆಯ ಕಥೆ' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.