ಹಾಲಿವುಡ್‌ ಸಿನಿಮಾದಲ್ಲಿ ಪ್ರಭಾಸ್‌? 'ಇಂಪಾಸಿಬಲ್' ಎಂದು ಫ್ಯಾನ್ಸ್‌ಗೆ ಶಾಕ್ ಕೊಟ್ಟ ನಿರ್ದೇಶಕ!

'ಬಾಹುಬಲಿ' ಪ್ರಭಾಸ್ ಟಾಲಿವುಡ್‌, ಬಾಲಿವುಡ್‌ ದಾಟಿ ಹಾಲಿವುಡ್‌ಗೆ ಹಾರುತ್ತಾರಂತೆ ಎಂಬ ಸುದ್ದಿ ಭಾರಿ ಸದ್ದು ಮಾಡಿದೆ. ಟಾಮ್‌ ಕ್ರ್ಯೂಸ್‌ನಂತಹ ಸ್ಟಾರ್ ಹೀರೋ ಜೊತೆಗೆ ಪ್ರಭಾಸ್ ನಟಿಸಲಿದ್ದಾರೆ ಎಂಬ ನ್ಯೂಸ್ ಸಖತ್ ವೈರಲ್ ಆಗಿದೆ. ಹಾಗಾದರೆ, ಇದೆಲ್ಲದರ ಹಿಂದಿನ ಅಸಲಿಯತ್ತೇನು?

ಹಾಲಿವುಡ್‌ ಸಿನಿಮಾದಲ್ಲಿ ಪ್ರಭಾಸ್‌? 'ಇಂಪಾಸಿಬಲ್' ಎಂದು ಫ್ಯಾನ್ಸ್‌ಗೆ ಶಾಕ್ ಕೊಟ್ಟ ನಿರ್ದೇಶಕ!
Linkup
'ಪ್ಯಾನ್ ಇಂಡಿಯಾ ಸ್ಟಾರ್' ಪ್ರಭಾಸ್‌ಗೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಿರ್ಮಾಪಕರು ಅವರ ಕಾಲ್‌ಶೀಟ್‌ಗಾಗಿ ಕಾದು ಕುಳಿತಿದ್ದಾರೆ. ಈಗ ಬಾಲಿವುಡ್‌ಗೂ ದೊಡ್ಡದಾಗಿಯೇ ಎಂಟ್ರಿ ನೀಡಿದ್ದಾರೆ ಪ್ರಭಾಸ್. ಈ ಮಧ್ಯೆ ಪ್ರಭಾಸ್ ಸಿನಿಮಾದಲ್ಲೂ ಬಣ್ಣ ಹಚ್ಚಲಿದ್ದಾರೆ ಎಂಬ ನ್ಯೂಸ್ ಬುಧವಾರ (ಮೇ 26) ದೊಡ್ಡದಾಗಿ ಸದ್ದು ಮಾಡಿತು. ಹಾಲಿವುಡ್‌ನ ಬ್ಲಾಕ್ ಬಸ್ಟರ್‌ ಹಿಟ್ ಸಿನಿಮಾ ಸರಣಿ 'ಮಿಷನ್ ಇಂಪಾಸಿಬಲ್‌'ನ ಭಾಗ 7ರಲ್ಲಿ ನಟಿಸಲಿದ್ದಾರೆ ಅನ್ನೋದು ದೊಡ್ಡ ನ್ಯೂಸ್ ಆಗಿತ್ತು! ಆದರೆ, ಈ ಬಗ್ಗೆ 'ಮಿಷನ್ ಇಂಪಾಸಿಬಲ್‌' ಚಿತ್ರದ ನಿರ್ದೇಶಕರೇ ಸ್ಪಷ್ಟನೆ ನೀಡಿದ್ದಾರೆ! ನೆಟ್ಟಿಗನ ಪ್ರಶ್ನೆಗೆ ಉತ್ತರಿಸಿದ ಕ್ರಿಸ್ಟಫರ್ ಮೆಕ್‌ಕ್ವೇರೀ ' 7' ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ, ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದರು. ಆ ಟ್ವೀಟ್‌ನಲ್ಲಿ 'ಮಿಷನ್ ಇಂಪಾಸಿಬಲ್ 7' ನಿರ್ದೇಶಕ ಕ್ರಿಸ್ಟಫರ್ ಮೆಕ್‌ಕ್ವೇರೀ ಅವರನ್ನು ಟ್ಯಾಗ್ ಮಾಡಿದ್ದ ಅವರು, 'ಇಂಡಿಯಾದ ನ್ಯೂಸ್‌ ಚಾನೆಲ್‌ಗಳಲ್ಲಿ ಒಂದು ನ್ಯೂಸ್ ವೈರಲ್ ಆಗುತ್ತಿದೆ. ಪ್ರಭಾಸ್ ಎಂಬ ಭಾರತೀಯ ನಟ 'ಮಿಷನ್ ಇಂಪಾಸಿಬಲ್ 7' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ನಿಜವೇ? ಸುಳ್ಳೋ ಎಂಬುದನ್ನು ದಯವಿಟ್ಟು ಕನ್ಫರ್ಮ್ ಮಾಡಿ' ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕ್ರಿಸ್ಟಫರ್ ಮೆಕ್‌ಕ್ವೇರೀ, 'ಪ್ರಭಾಸ್ ಪ್ರತಿಭೆ ಇರುವ ವ್ಯಕ್ತಿ. ಆದರೆ ನಾವೆಂದೂ ಅವರನ್ನು ಭೇಟಿ ಆಗಿಲ್ಲ. ಇಂಟರ್ನೆಟ್‌ಗೆ ಸ್ವಾಗತ..' ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕರು ಪ್ರಭಾಸ್‌ ಅವರನ್ನು ಭೇಟಿಯಾಗಿಲ್ಲ ಎಂದರೆ, ಹಬ್ಬಿದ್ದ ನ್ಯೂಸ್ ಸುಳ್ಳು ಅಂತ ಖಚಿತವಾಗಿದೆ. ಅಷ್ಟಕ್ಕೂ ಈ ಥರದ್ದೊಂದು ನ್ಯೂಸ್ ಹಬ್ಬಲು ಕಾರಣವೇನು? 'ಮಿಷನ್ ಇಂಪಾಸಿಬಲ್ 7 ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಪ್ರಭಾಸ್ ಕೂಡ ಅಭಿನಯಿಸಲಿದ್ದಾರೆ' ಎಂದು ಸಂದರ್ಶನವೊಂದರಲ್ಲಿ ನಿರ್ದೇಶಕ ಕ್ರಿಸ್ಟೊಫರ್ ಮೆಕ್‌ಕ್ವೇರೀ ಹೇಳಿದ್ದಾರೆ ಎನ್ನಲಾದ ಪೋಸ್ಟ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಆಧಾರದ ಮೇಲೆ 'ಮಿಷನ್ ಇಂಪಾಸಿಬಲ್ 7' ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಅಂದಹಾಗೆ, 'ಮಿಷನ್ ಇಂಪಾಸಿಬಲ್ 7' ಸಿನಿಮಾದಲ್ಲಿ ಹೀರೋ ಆಗಿ ಪ್ರಖ್ಯಾತ ನಟ ಟಾಮ್‌ ಕ್ರ್ಯೂಸ್ ನಟಿಸುತ್ತಿದ್ದಾರೆ. ಜೊತೆಗೆ ಈ ಸಿನಿಮಾಗೆ ಅವರದ್ದೇ ನಿರ್ಮಾಣ ಕೂಡ. ಎಲ್ಲ ಅಂದುಕೊಂಡಂತೆ ನಡೆದರೆ, ಈ ಅದ್ದೂರಿ ಸಾಹಸಮಯ ಸಿನಿಮಾವು 2022 ಮೇ 27ರಂದು ತೆರೆಗೆ ಬರಲಿದೆ.