'ಪ್ರಜಾಕೀಯ' & 'ರುಪ್ಪೀಸ್ ರೆಸಾರ್ಟ್' ಬಗ್ಗೆ ಮಾತನಾಡಿದವರಿಗೆ ಉಪೇಂದ್ರ ನೀಡಿದ ಪ್ರತಿಕ್ರಿಯೆ ಇಲ್ಲಿದೆ!

ಉಪೇಂದ್ರ ಈಚೆಗೆ ಸಾಕಷ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಕಷ್ಟದಲ್ಲಿದ್ದವರಿಗೆ ದಿನಸಿ ಕಿಟ್‌ಗಳನ್ನು ನೀಡುತ್ತ ಅವರಿಗೆ ನೆರವಾಗಿದ್ದಾರೆ. ಇದರ ಜೊತೆಗೆ ಉಪೇಂದ್ರ ಅವರು ಪ್ರಜಾಕೀಯದಲ್ಲೂ ಸಖತ್ ಸಕ್ರಿಯವಾಗಿದ್ದಾರೆ. ಈಚೆಗೆ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಪ್ರಶ್ನೆಗಳು ಎದುರಾಗಿದ್ದವು. ಆ ಕುರಿತು ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ ಉಪೇಂದ್ರ.

'ಪ್ರಜಾಕೀಯ' & 'ರುಪ್ಪೀಸ್ ರೆಸಾರ್ಟ್' ಬಗ್ಗೆ ಮಾತನಾಡಿದವರಿಗೆ ಉಪೇಂದ್ರ ನೀಡಿದ ಪ್ರತಿಕ್ರಿಯೆ ಇಲ್ಲಿದೆ!
Linkup
ಎಲ್ಲರೂ ರಾಜಕೀಯದ ಹಿಂದೆ ಹೊರಟಾಗ ನಟ ಅವರು ಪ್ರಜಾಕೀಯವನ್ನು ಸೃಷ್ಟಿಸಿ, ಹೊಸ ಬದಲಾವಣೆಗೆ ನಾಂದಿ ಹಾಡುವ ಉತ್ಸಾಹದಲ್ಲಿದ್ದಾರೆ. ಪ್ರಜಾಕೀಯದ ಮೂಲಕ ಅನೇಕ ಹೊಸ ಹೊಸ ಯೋಜನೆಗಳನ್ನು ಉಪೇಂದ್ರ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಆದರೆ, ಈ ಮಧ್ಯೆ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಪ್ರಶ್ನೆಗಳು ಎದುರಾಗಿವೆ. ಅದಕ್ಕೆ ಉತ್ತರ ನೀಡುವ ಪ್ರಯತ್ನವನ್ನು ಉಪ್ಪಿ ಮಾಡಿದ್ದಾರೆ. ಬಗ್ಗೆ ಉಪ್ಪಿ ಹೇಳಿದ್ದೇನು? 'ರೈತರ ಭೂಮಿಯನ್ನು ಕಿತ್ತುಕೊಂಡು ಅಲ್ಲಿ ರೆಸಾರ್ಟ್ ಮಾಡಿದ್ದಾರೆ' ಎಂದು ಒಬ್ಬರು ಆರೋಪ ಮಾಡಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡಿರುವ ಉಪೇಂದ್ರ, 'ಏನಾದರೂ ಹೇಳುವುದಕ್ಕೂ ಮುನ್ನ ದಯವಿಟ್ಟು ದಾಖಲೆಗಳನ್ನು ಪರಿಶೀಲನೆ ಮಾಡಿ. ಸುಮಾರು 13-14 ವರ್ಷಗಳ ಹಿಂದೆ ವಿಲೇಜ್ ರೆಸಾರ್ಟ್ ಆಕ್ಷನ್‌ಗೆ ಬಂದಿತ್ತು. ಅದನ್ನು ಸರ್ಕಾರದಿಂದ ನೇರವಾಗಿ ಖರೀದಿಸಿ, ಅದರ ಹೆಸರನ್ನು 'ರುಪ್ಪೀಸ್‌' ಅಂತ ಬದಲಾಯಿಸಿ, ರೆಸಾರ್ಟ್ ಮಾಡಿದ್ದೇವೆ. ಅದರ ಹಿಂದೆ ಇರುವುದು ಕೃಷಿ ಜಮಿನು. ಅದನ್ನು ಶಿವಣ್ಣ ಅವರಿಂದ ಖರೀದಿಸಿದ್ದು. ಅಲ್ಲಿ ಈಗಲೂ ನಾನು ಕೃಷಿ ಚಟುವಟಿಕೆಗಳನ್ನು ಮಾಡುತ್ತ, ತರಕಾರಿ ಬೆಳೆಯುತ್ತಿದ್ದೇನೆ. ನಿಮಗೆ ಅಷ್ಟು ಅನುಮಾನ ಇದ್ದರೆ, ರೆಸಾರ್ಟ್‌ಗೆ ಬಂದು ನೋಡಿ' ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಉಪೇಂದ್ರ ಯಾಕೆ ಆಡಳಿತವನ್ನು ಖಂಡಿಸಿಲ್ಲ! 'ಉಪೇಂದ್ರ ಯಾಕೆ ಯಾವುದೇ ಹೋರಾಟದಲ್ಲಿ ಭಾಗವಹಿಸಿಲ್ಲ, ಆಡಳಿತವನ್ನು ಖಂಡಿಸಿಲ್ಲ' ಎಂದು ಪ್ರಶ್ನೆ ಮಾಡಿದ್ದಾರೆ. ನನ್ನನ್ನು ಫಾಲೋ ಮಾಡುವವರಿಗೆ ಗೊತ್ತಿರುತ್ತದೆ. ನಾವು ಯಾವುದೇ ಸರ್ಕಾರವನ್ನು ಖಂಡಿಸಿಲ್ಲ. ಈ ಹಿಂದಿನ ಪಕ್ಷ ಅಧಿಕಾರ ಇದ್ದಾಗಲೂ ನಾವು ಖಂಡಿಸಿಲ್ಲ. ನನಗೆ ಹೋರಾಟಗಳಲ್ಲಿ ನಂಬಿಕೆ ಇಲ್ಲ. ಮೂಲವಾಗಿ ಜನ ಬದಲಾಗಬೇಕು. ರಾಜಕೀಯವನ್ನು ವ್ಯಾಪಾರ ಮಾಡಿಕೊಂಡು, ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಲಾಗುತ್ತಿದೆ. ಅದಕ್ಕೆ ನಾವು ಕೂಡ ಕಾರಣ. ದೊಡ್ಡ ದೊಡ್ಡ ನಾಯಕರು, ಜಾತಿ, ಧರ್ಮ ಇಲ್ಲದೇ ಹೋದರೆ ನಾವು ವೋಟ್ ಹಾಕಲ್ಲ ಎಂಬಂತಾಗಿದ್ದೇವೆ. ಆದರೆ ನಾನು ನನ್ನ ಥರ ಇರುವ ಜನರಿಗಾಗಿ ಒಂದು ಪಕ್ಷ ಮಾಡಿದ್ದೇನೆ. ಇದು ಜನರ ಪಕ್ಷ' ಎಂದು ಬಗ್ಗೆ ಉಪೇಂದ್ರ ಹೇಳಿದ್ದಾರೆ. ಪ್ರಜಾಕೀಯದಲ್ಲಿ ಪ್ರಣಾಳಿಕೆ ಏಕಿಲ್ಲ ಗೊತ್ತಾ? 'ಪ್ರಜಾಕೀಯದಿಂದ ಪ್ರಣಾಳಿಕೆ ಕೊಡಲ್ಲ' ಅಂತ ಪ್ರಶ್ನೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡುವ ಪ್ರಣಾಳಿಕೆಗಳು ಒಂದು ಬಜೆಟ್‌ ಮೇಲೆ ನಿರ್ಧರಿತವಾಗಬೇಕು. ಪ್ರಣಾಳಿಕೆಯಲ್ಲಿ ಹೇಳಿದ ಆಶ್ವಾಸನೆಗಳು ಈಡೇರದೇ ಹೋದರೆ ಅಧಿಕಾರದಿಂದ ಕೆಳಗೆ ಇಳಿಯುವಂತಹ ಕಾನೂನು ಬರಬೇಕು. ಆ ಥರ ಕಾನೂನು ಬಂದಾಗ ನಾನು ಪ್ರಣಾಳಿಕೆಯನ್ನು ನೀಡುತ್ತೇನೆ. ಈಗ ಆ ಥರ ಕಾನೂನು ಇಲ್ಲದೇ ಇರುವುದರಿಂದ, ಸುಳ್ಳು ಸುಳ್ಳು ಆಶ್ವಾಸನೆ ಕೊಡಬಾರದು ಎಂದು ಸುಮ್ಮನಿದ್ದೇವೆ. ಜನರ ಬೇಡಿಕೆಯೇ ನನ್ನ ಪ್ರಣಾಳಿಕೆ' ಎಂದು ಉಪೇಂದ್ರ ಹೇಳಿದ್ದಾರೆ.