Sanchari Vijay: ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್‌ ವತಿಯಿಂದ ನಟ 'ಸಂಚಾರಿ' ವಿಜಯ್‌ಗೆ ಗೌರವ

'ನಾನು ಅವನಲ್ಲ ಅವಳು', 'ಹರಿವು', 'ನಾತಿಚರಾಮಿ' ಖ್ಯಾತಿಯ ನಟ ಸಂಚಾರಿ ವಿಜಯ್ ಅವರು ಜೂನ್ 15ರಂದು ಕೊನೆಯುಸಿರೆಳೆದಿದ್ದರು. ಅವರಿಗೆ ಗೌರವ ಸಲ್ಲಿಸಲು ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್‌ ವತಿಯಿಂದ ಒಂದು ಸಂದೇಶವನ್ನು ಬಿತ್ತರಿಸಲಾಗಿದೆ.

Sanchari Vijay: ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್‌ ವತಿಯಿಂದ ನಟ 'ಸಂಚಾರಿ' ವಿಜಯ್‌ಗೆ ಗೌರವ
Linkup
'ರಾಷ್ಟ್ರ ಪ್ರಶಸ್ತಿ' ಪುರಸ್ಕೃತ ನಟ ಸಂಚಾರಿ ವಿಜಯ್ ಅವರು ಜೂನ್ 15ರಂದು ನಿಧನರಾಗಿದ್ದರು. 38ರ ಹರೆಯದ ವಿಜಯ್, ಚಿತ್ರರಂಗದಲ್ಲಿ ಸಾಧಿಸಬೇಕಾದದ್ದು ಸಾಕಷ್ಟಿತ್ತು. ವಿಭಿನ್ನ ಬಗೆಯ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಬೇಕಿತ್ತು. ಆದರೆ, ವಿಧಿಯ ಕ್ರೂರ ದೃಷ್ಟಿಯಿಂದಾಗಿ ಅಪಘಾತದಲ್ಲಿ ಇಹಲೋಕ ತ್ಯಜಿಸಬೇಕಾಯ್ತು. ಇದೀಗ ಅವರಿಗೆ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್‌ ವತಿಯಿಂದ ಗೌರವ ಸಲ್ಲಿಸಲಾಗಿದೆ. ಚಿತ್ರಮಂದಿರದ ಮೇಲೆ ವಿಜಯ್‌ ನೆನಪಲ್ಲಿ ಸಂದೇಶ ಭಿತ್ತರ "ALWAYS IN OUR HEART, , GONE YET NOT FORGOTTEN"- ಇದು ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್‌ ಥಿಯೇಟರ್‌ನಲ್ಲಿ ಪ್ರಸಾರವಾಗುತ್ತಿರುವ ಸಂದೇಶ. ಈ ಸಂದೇಶ 24 ಗಂಟೆಗಳ ಕಾಲ ಥಿಯೇಟರ್‌ ಬೋರ್ಡ್‌ ಮೇಲೆ ಡಿಸ್‌ಪ್ಲೇ ಆಗಲಿದೆ. ಅಗಲಿದ ಅತ್ಯದ್ಭುತ ಕಲಾವಿದ ಸಂಚಾರಿ ವಿಜಯ್‌ಗೆ ಫ್ಲಾಂಕ್ಲಿನ್‌ ಥಿಯೇಟರ್‌ನವರು ಸಲ್ಲಿಸಿದ ಗೌರವ ಇದಾಗಿದೆ. ಅಂದಹಾಗೆ, ಇದು ಸಾಧ್ಯವಾಗುವುದಕ್ಕೆ ಕಾರಣವಾಗಿದ್ದು, ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗ, ಸಿನಿಮಾ ನಿರ್ಮಾಪಕ ರವಿ ಕಶ್ಯಪ್‌ ಅವರಿಂದ. ಧನ್ಯವಾದ ಹೇಳಿದ ಲಿಂಗದೇವರು ವಿಜಯ್‌ಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಬಿ.ಎಸ್. ಲಿಂಗದೇವರು ನಿರ್ದೇಶನ ಮಾಡಿದ್ದ 'ನಾನು ಅವನಲ್ಲ ಅವಳು' ಸಿನಿಮಾದಿಂದ. ಇದೀಗ ಲಿಂಗದೇವರು ಅವರು ಫ್ರಾಂಕ್ಲಿನ್ ಚಿತ್ರಮಂದಿರದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 'ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್‌ನವರು ವಿಜಯ್ ನೆನಪಲ್ಲಿ ಇಂದು Always in our Heart, Sanchari Vijay, Gone Yet Not Forgotten ಎಂಬ ಮೆಸೇಜ್ ಪ್ರದರ್ಶನ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕಾರಣಕರ್ತರಾದ ರವಿ ಕಶ್ಯಪ್ ರವರಿಗೆ ವಂದನೆಗಳು' ಎಂದಿದ್ದಾರೆ ಅವರು. ವಿಜಯ್ ಅಂಗಾಂಗ ದಾನ ಮಾಡಲಾಗಿತ್ತು ಜೂನ್ 12ರ ತಡರಾತ್ರಿ ಬೈಕ್‌ನಲ್ಲಿ ಬರುವಾಗ ವಿಜಯ್‌ಗೆ ಅಪಘಾತವಾಗಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವರು ಕೋಮಗೆ ಜಾರಿದ್ದರು. ನಂತರ ವೈದ್ಯರು ಎಷ್ಟೇ ಪ್ರಯತ್ನಪಟ್ಟರು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೂನ್ 14ರ ವೇಳೆಗೆ ಅವರ ಮೆದುಳು ನಿಷ್ಕ್ರೀಯಗೊಂಡಿದ್ದರಿಂದ ಅವರ ಅಂಗಾಂಗ ದಾನಕ್ಕೆ ಕುಟುಂಬದವರು ನಿರ್ಧಾರ ಮಾಡಿದ್ದರು. ನಂತರ ಅವರ ಅಂಗಾಂಗಗಳನ್ನು ಅವಶ್ಯಕವಿರುವ ರೋಗಿಗಳಿಗೆ ನೀಡಲಾಗಿತ್ತು. ಜೂ.15ರ ಬೆಳಗಿನ ಜಾವ ವಿಜಯ್‌ ಕೊನೆಯುಸಿರು ಎಳೆದಿದ್ದರು.