'ಮಗಳು ಜಾನಕಿ' ಬಳಿಕ ನಟ ರಾಕೇಶ್ ಮಯ್ಯ ಏನ್ಮಾಡ್ತಿದ್ದಾರೆ?

ಒಂದು ಹೊಸ ಸಿನಿಮಾಗೆ 'ಮಗಳು ಜಾನಕಿ' ಖ್ಯಾತಿಯ ನಟ ರಾಕೇಶ್ ಮಯ್ಯ ಸದ್ದಿಲ್ಲದೆ ಚಾಲನೆ ನೀಡಿದ್ದಾರೆ. 'ಲವ್ ಇನ್ ದಿ ಟೈಮ್ ಆಫ್ ಕೋವಿಡ್' ಎಂಬ ಚಿತ್ರದಲ್ಲಿ ರಾಕೇಶ್ ಮಯ್ಯ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

'ಮಗಳು ಜಾನಕಿ' ಬಳಿಕ ನಟ ರಾಕೇಶ್ ಮಯ್ಯ ಏನ್ಮಾಡ್ತಿದ್ದಾರೆ?
Linkup
ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಕಂಡ ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಗಳ ಪೈಕಿ 'ಮಗಳು ಜಾನಕಿ' ಕೂಡ ಒಂದು. ಗಾನವಿ ಲಕ್ಷ್ಮಣ್, ರಾಕೇಶ್ ಮಯ್ಯ ಮುಂತಾದವರ ತಾರಾಗಣವಿದ್ದ 'ಮಗಳು ಜಾನಕಿ' ಧಾರಾವಾಹಿ ಕಳೆದ ವರ್ಷ ಕೋವಿಡ್ ಲಾಕ್‌ಡೌನ್‌ನಿಂದಾಗಿ ನಿಂತು ಹೋಯ್ತು. 'ಮಗಳು ಜಾನಕಿ' ಬಳಿಕ ನಟಿ ಗಾನವಿ ಲಕ್ಷ್ಮಣ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ರಿಶಬ್ ಶೆಟ್ಟಿ ಜೊತೆಗೆ ಗಾನವಿ ಲಕ್ಷ್ಣಣ್ ಅಭಿನಯದ 'ಹೀರೋ' ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿತ್ತು. ಹಾಗಾದ್ರೆ, ನಟ ರಾಕೇಶ್ ಮಯ್ಯ ಏನ್ಮಾಡ್ತಿದ್ದಾರೆ ಅಂದ್ರಾ.. ಅವರೂ ಕೂಡ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಒಂದು ಹೊಸ ಸಿನಿಮಾಗೆ ರಾಕೇಶ್ ಮಯ್ಯ ಸದ್ದಿಲ್ಲದೆ ಚಾಲನೆ ನೀಡಿದ್ದಾರೆ. 'ಲವ್ ಇನ್ ದಿ ಟೈಮ್ ಆಫ್ ಕೋವಿಡ್' ಎಂಬ ಚಿತ್ರದಲ್ಲಿ ರಾಕೇಶ್ ಮಯ್ಯ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಕೇಶ್ ಮಯ್ಯಗೆ ಜೋಡಿಯಾಗಿ 'ಬಿಗ್ ಬಾಸ್' ಖ್ಯಾತಿಯ ನಟಿಸಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್‌ನಿಂದ ಪ್ರೇರಣೆ ಪಡೆದ ಯುವತಂಡ 'ಲವ್ ಇನ್ ದಿ ಟೈಮ್ ಆಫ್ ಕೋವಿಡ್' ಎಂಬ ಚಿತ್ರವನ್ನು ತಯಾರಿಸಿದೆ. ಜಯಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಈ ಚಿತ್ರದ ಒಂದು ಲಿರಿಕಲ್ ಹಾಡು ಕೂಡ ಬಿಡುಗಡೆಯಾಗಿದೆ. ''ಜಯಂತ್ ಹಾಗೂ ನಾನು ಬಹಳ ವರ್ಷದಿಂದ ಆತ್ಮೀಯ ಗೆಳೆಯರು. ಚಿತ್ರಕ್ಕಾಗಿ ನಾವು ಹಲವಾರು ರೀತಿ ಐಡಿಯಾಗಳನ್ನು ಮಾಡುತ್ತಿದ್ವಿ. ಈ ನಡುವೆ ಘೋಷಣೆಯಾದ ಲಾಕ್‌ಡೌನ್‌ನಿಂದಾಗಿ ಎಲ್ಲವೂ ಬದಲಾಗಲು ಶುರುವಾಯಿತು. ಹೀಗಾಗಿ ಲಾಕ್‌ಡೌನ್‌ ಹಾಗೂ ಅದರ ಪರಿಣಾಮ ಸುತ್ತವೇ ನಾವು ಕಥೆ ಹೆಣೆದ್ವಿ. ಲಾಕ್‌ಡೌನ್ ವೇಳೆ ಟೆಕ್ನಾಲಜಿ ಬಹಳ ಮುಖ್ಯವಾಯಿತು. ಆನ್‌ಲೈನ್ ಮೀಟಿಂಗ್, ವರ್ಕ್ ಫ್ರಮ್ ಹೋಮ್, ಗ್ರೂಪ್ ಕಾಲ್, ವಿಡಿಯೋ ಕಾಲ್ ಕಾನ್ಸೆಪ್ಟ್‌ಗಳು ಹೆಚ್ಚು ಜನಪ್ರಿಯತೆ ಪಡೆಯಿತು. ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ನಾವು 'ಲವ್ ಇನ್ ದಿ ಟೈಮ್ ಆಫ್ ಕೋವಿಡ್' ಚಿತ್ರವನ್ನು ರೆಡಿ ಮಾಡಿದ್ದೇವೆ'' ಅಂತಾರೆ ನಟ ರಾಕೇಶ್ ಮಯ್ಯ. ದಶಕದ ಬಳಿಕ ಆನ್‌ಲೈನ್‌ನಲ್ಲಿ ಮೀಟ್ ಆಗುವ ಹುಡುಗ ಹಾಗೂ ಹುಡುಗಿಯ ಸುತ್ತ 'ಲವ್ ಇನ್ ದಿ ಟೈಮ್ ಆಫ್ ಕೋವಿಡ್' ಚಿತ್ರಕಥೆ ಸಾಗಲಿದೆ. ಈಗಾಗಲೇ ಈ ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಲಾಕ್‌ಡೌನ್ ತೆರವಾದ ಬಳಿಕ ಉಳಿದ ಭಾಗಗಳ ಚಿತ್ರೀಕರಣ ನಡೆಯಲಿದೆ. (ಚಿತ್ರಕೃಪೆ: ರಾಕೇಶ್ ಮಯ್ಯ ಫೇಸ್‌ಬುಕ್ ಪ್ರೊಫೈಲ್)