HBD Suriya: ಕನ್ನಡದಲ್ಲಿ 'ಜೈ ಭೀಮ್' ಎನ್ನುತ್ತಾರೆ ನಟ ಸೂರ್ಯ! ಜನ್ಮದಿನಕ್ಕೆ ಭರ್ಜರಿ ಗಿಫ್ಟ್!

ಕಾಲಿವುಡ್ ನಟ ಸೂರ್ಯ ಅವರಿಗೆ ಇಂದು (ಜು.23) ಜನ್ಮದಿನ. 46ನೇ ವರ್ಷಕ್ಕೆ ಕಾಲಿಟ್ಟಿರುವ ಅವರು, ಈ ಸಲದ ಜನ್ಮದಿನಕ್ಕೆ ಭರ್ಜರಿ ಉಡುಗೊರೆಗಳನ್ನೇ ನೀಡಿದ್ದಾರೆ. ವಿಶೇಷವೆಂದರೆ, ಅವರ ಒಂದು ಸಿನಿಮಾ ಕನ್ನಡದಲ್ಲೂ ತೆರೆಗೆ ಬರಲಿದೆ.

HBD Suriya: ಕನ್ನಡದಲ್ಲಿ 'ಜೈ ಭೀಮ್' ಎನ್ನುತ್ತಾರೆ ನಟ ಸೂರ್ಯ! ಜನ್ಮದಿನಕ್ಕೆ ಭರ್ಜರಿ ಗಿಫ್ಟ್!
Linkup
ಕಾಲಿವುಡ್‌ ನಟ ಅವರಿಗೆ ಇಂದು (ಜು.23) ಜನ್ಮದಿನ. ಕಳೆದ ವರ್ಷದ 'ಸೂರರೈ ಪೊಟ್ರು' ಸಿನಿಮಾ ಮೂಲಕ ಜನಮನ ಸೂರೆಗೊಂಡಿದ್ದ ಸೂರ್ಯ, ಈ ವರ್ಷದ ಹುಟ್ಟುಹಬ್ಬಕ್ಕೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ನಿರ್ದೇಶಕ ಪಾಂಡಿರಾಜ್ ಜೊತೆ 'Etharkkum Thunindhavan' ಸಿನಿಮಾವನ್ನು ಘೋಷಣೆ ಮಾಡಿರುವ ಅವರು, ಅದಕ್ಕೂ ಮೊದಲು ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ. ಇಲ್ಲಿ ಅವರ ಪಾತ್ರ ವಿಶೇಷವಾಗಿರಲಿದೆ. ಜೊತೆಗೆ ಈ ಸಿನಿಮಾ ಬಹುಭಾಷೆಯಲ್ಲಿ ತೆರೆಗೆ ಬರಲಿದೆ. ಹಾಗಾದರೆ, ಸಿನಿಮಾದ ಶೀರ್ಷಿಕೆ ಏನು? 'ಜೈ ಭೀಮ್‌'! ಕನ್ನಡದಲ್ಲಿ ಸೂರ್ಯ ಹುಟ್ಟುಹಬ್ಬದ ಪ್ರಯುಕ್ತ 'ಜೈ ಭೀಮ್‌' ಸಿನಿಮಾದ ಶೀರ್ಷಿಕೆ ಘೋಷಣೆ ಆಗಿದೆ. ತಮಿಳು ಜೊತೆಗೆ ಕನ್ನಡದಲ್ಲೂ ಈ ಸಿನಿಮಾ ತೆರೆಗೆ ಬರಲಿದೆ. ಈ ಹಿಂದೆ 'ಸೂರರೈ ಪೊಟ್ರು' ಕೂಡ ಕನ್ನಡದಲ್ಲಿ ತೆರೆಕಂಡಿತ್ತು. ಈಗ 'Jai Bhim' ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಎಂಟ್ರಿ ನೀಡಲಿದ್ದಾರೆ ಸೂರ್ಯ. ಅಂದಹಾಗೆ, ಶೀರ್ಷಿಕೆ ಹಾಗೂ ಫಸ್ಟ್ ಲುಕ್ ನೋಡುತ್ತಿದ್ದರೆ, ಇದೊಂದು ದಮನಿತರ ಕಥೆ ಇರಬಹುದಾ ಎಂಬ ಕುತೂಹಲ ಮೂಡಿದೆ. ಸೂರ್ಯ ಇಲ್ಲಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಜೈ ಭೀಮ್‌'ಗೆ ಸೂರ್ಯ ಅವರೇ ಬಂಡವಾಳ ಹೂಡುತ್ತಿದ್ದು, ಇದು ಅವರ ನಟನೆಯ 39ನೇ ಸಿನಿಮಾವಾಗಿದೆ. ಈ ಮೊದಲು ಪತ್ರಕರ್ತರಾಗಿದ್ದ ಟಿ.ಜೆ. ಜ್ಞಾನವೇಲ್‌ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸೂರ್ಯ ಜೊತೆಗೆ ,‌ ರಜಿಶಾ ವಿಜಯನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೀನ್‌ ರೋಲ್ಡನ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಸನ್‌ ಪಿಕ್ಚರ್ಸ್ ನಿರ್ಮಾಣದ 'Etharkkum Thunindhavan' ಸಿನಿಮಾದಲ್ಲಿ ಸೂರ್ಯ ನಟಿಸುತ್ತಿದ್ದು, ಶೂಟಿಂಗ್ ನಡೆಯುತ್ತಿದೆ. ಇಲ್ಲಿ ಸೂರ್ಯಗೆ ನಾಯಕಿಯಾಗಿ ಪ್ರಿಯಾಂಕಾ ಅರುಳ್‌ ಮೋಹನ್ ನಟಿಸುತ್ತಿದ್ದಾರೆ. ನಂತರ ಮಣಿರತ್ನಂ ಅವರ 'ನವರಸ'ದಲ್ಲೂ ಸೂರ್ಯ ಕಾಣಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ನಿರ್ದೇಶಕ ವೆಟ್ರಿಮಾರನ್ ಅವರ ಬಹುನಿರೀಕ್ಷಿತ 'ವಾಡಿವಾಸಲ್‌'ನಲ್ಲೂ ಸೂರ್ಯ ನಟಿಸಬೇಕಿದೆ. ಈ ವರ್ಷಾಂತ್ಯಕ್ಕೆ ಆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.