ಪ್ರಭಾಸ್ 'ಸಲಾರ್‌'ಗೆ ವಿಲನ್ ಯಾರು? ಜಾನ್ ಅಬ್ರಾಹಂ ಬದಲು ಕೇಳಿಬಂತು ಮತ್ತೋರ್ವ ಖ್ಯಾತ ನಟನ ಹೆಸರು!

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಟಾರ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಮತ್ತು ನಟ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸಿದ್ಧಗೊಳ್ಳುತ್ತಿರುವ 'ಸಲಾರ್' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ವಿಲನ್ ಯಾರು ಅನ್ನೋದೇ ಈಗ ದೊಡ್ಡ ಚರ್ಚೆ!

ಪ್ರಭಾಸ್ 'ಸಲಾರ್‌'ಗೆ ವಿಲನ್ ಯಾರು? ಜಾನ್ ಅಬ್ರಾಹಂ ಬದಲು ಕೇಳಿಬಂತು ಮತ್ತೋರ್ವ ಖ್ಯಾತ ನಟನ ಹೆಸರು!
Linkup
'ಕೆಜಿಎಫ್‌' ನಿರ್ದೇಶಕ ಪ್ರಶಾಂತ್‌ ನೀಲ್‌ ಮತ್ತು 'ಬಾಹುಬಲಿ' ಕಾಂಬಿನೇಷನ್‌ನ 'ಸಲಾರ್‌' ಸಿನಿಮಾದ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ದೊಡ್ಡ ದೊಡ್ಡ ಸೆಟ್‌ ಹಾಕಿ, ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ. ಆದರೆ, ಈ ಸಿನಿಮಾಕ್ಕೆ ವಿಲನ್ ಯಾರು ಅನ್ನೋದು ಮಾತ್ರ ಇನ್ನೂ ಬಗೆಹರಿಯದ ಗೊಂದಲ. ಬಾಲಿವುಡ್‌ ನಟ ಜಾನ್‌ ಅಬ್ರಾಹಂ 'ಸಲಾರ್‌'ನಲ್ಲಿ ಪ್ರಭಾಸ್‌ ಎದುರು ವಿಲನ್ ಆಗಿ ಮಿಂಚಲಿದ್ದಾರೆ ಎನ್ನಲಾಗಿತ್ತಾದರೂ, ಅದಿನ್ನೂ ಕನ್ಫರ್ಮ್‌ ಆಗಿಲ್ಲ. ಈ ಮಧ್ಯೆ ಮತ್ತೋರ್ವ ಜನಪ್ರಿಯ ಬಾಲಿವುಡ್‌ ನಟನ ಹೆಸರು ಚರ್ಚೆಗೆ ಬಂದಿದೆ. '' ಅಡ್ಡಕ್ಕೆ ಫ್ಯಾಮಿಲಿ ಮ್ಯಾನ್? ಸದ್ಯ ಕೇಳಿಬಂದಿರುವ ಮಾಹಿತಿ ಪ್ರಕಾರ, ಬಾಲಿವುಡ್‌ ನಟ ಮನೋಜ್ ಬಾಜ್‌ಪೇಯಿ 'ಸಲಾರ್' ವಿಲನ್ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಹೀಗೊಂದು ಮಾಹಿತಿ ಕೇಳಿಬಂದಿದೆ. ಮನೋಜ್ ಸದ್ಯ ವೆಬ್ ಸಿರೀಸ್, ಓಟಿಟಿ ಸಿನಿಮಾ ಅಂತ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅವರು ಈಗಾಗಲೇ ತೆಲುಗು ಪರಿಚಿತರು. ಅಲ್ಲದೆ, ಓಟಿಟಿಯಿಂದಾಗಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. 'ಸಲಾರ್‌' ನಂತಹ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮನೋಜ್‌ ನಟಿಸಿದರೆ, ಚಿತ್ರತಂಡಕ್ಕೆ ಇದು ಪ್ಲಸ್ ಆಗಲಿದೆ. ವಿಲನ್‌ಗಾಗಿ ಬೃಹತ್ ಸೆಟ್! 'ಸಲಾರ್' ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಅದರದ್ದೇ ಆದ ಖದರ್ ಇದೆ. ಹೀಗಾಗಿ, ವಿಲನ್ ಪಾತ್ರಕ್ಕಾಗಿ ವಿಶೇಷವಾಗಿ ಬೃಹತ್ ಮನೆಯ ಸೆಟ್‌ ಅನ್ನು ನಿರ್ಮಿಸಲಾಗುತ್ತಿದೆ. ಇದೇ ಸೆಟ್‌ನಲ್ಲೇ ವಿಲನ್ ಭಾಗದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ. ಈ ಬೃಹತ್ ಮನೆಯ ಸೆಟ್‌ಗಾಗಿ ಭಾರೀ ಹಣವನ್ನು ಖರ್ಚು ಮಾಡಲಾಗುತ್ತಿದೆ. ವಿಲನ್‌ಗಾಗಿ ಇಷ್ಟೆಲ್ಲಾ ಮಾಡುತ್ತಿರುವುದರಿಂದ 'ಸಲಾರ್' ಚಿತ್ರದಲ್ಲಿ ವಿಲನ್ ಆಗಿ ಯಾರು ಅಭಿನಯಿಸುತ್ತಾರೆ ಎಂಬ ಕುತೂಹಲ ಇದ್ದೇ ಇದೆ. ಇದೀಗ ಆ ಜಾಗಕ್ಕೆ ಮನೋಜ್ ಹೆಸರು ಕೇಳಿಬಂದಿರುವುದರಿಂದ ನಿರೀಕ್ಷೆ ಡಬಲ್ ಆಗಿದೆ. ವಿಜಯ್ ಕಿರಗಂದೂರು ನಿರ್ಮಾಣದ 'ಸಲಾರ್‌'ಗೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಭುವನ್ ಗೌಡ ಛಾಯಾಗ್ರಹಣವಿರುವ 'ಸಲಾರ್'ಗೆ ಬಹುತೇಕ ಹೈದರಾಬಾದ್‌ನಲ್ಲೇ ಶೂಟಿಂಗ್ ನಡೆಯುತ್ತಿದೆ. ಪ್ರಭಾಸ್‌ಗೆ ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸುತ್ತಿದ್ದಾರೆ.