ಹಣಕಾಸು ವಲಯಕ್ಕೆ 'ಸಾರ್ವಜನಿಕ ಉದ್ದಿಮೆ', ಖಾಸಗೀಕರಣಕ್ಕೆ ಮತ್ತಷ್ಟು ವೇಗ

ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆಯನ್ನು ಕೇಂದ್ರ ಸರಕಾರ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ತಂದಿದ್ದು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ತ್ವರಿತಗೊಳಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹಣಕಾಸು ವಲಯಕ್ಕೆ 'ಸಾರ್ವಜನಿಕ ಉದ್ದಿಮೆ', ಖಾಸಗೀಕರಣಕ್ಕೆ ಮತ್ತಷ್ಟು ವೇಗ
Linkup
ಹೊಸದಿಲ್ಲಿ: ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆಯನ್ನು (ಡಿಪಿಇ) ಹಣಕಾಸು ಸಚಿವಾಲಯದ ವ್ಯಾಪ್ತಿಗೆ ತಂದಿದೆ. ಬುಧವಾರದ ಸಂಪುಟ ವಿಸ್ತರಣೆಗೂ ಮುನ್ನ ಈ ಬೆಳವಣಿಗೆ ನಡೆದಿದೆ. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ತ್ವರಿತಗೊಳಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಲವು ವರ್ಷಗಳಿಂದ ಡಿಪಿಇ ಭಾರಿ ಕೈಗಾರಿಕೆ ಮತ್ತು ಇಲಾಖೆಯ ಭಾಗವಾಗಿತ್ತು. ಇದೀಗ ಡಿಪಿಇಯನ್ನು ನೇರವಾಗಿ ಹಣಕಾಸು ಇಲಾಖೆಯ ನಿಯಂತ್ರಣ ವ್ಯಾಪ್ತಿಗೆ ತರಲಾಗಿದೆ. ಈ ಬದಲಾವಣೆಯೊಂದಿಗೆ ಹಣಕಾಸು ಸಚಿವಾಲಯವು ವೆಚ್ಚ, ಕಂದಾಯ, ಆರ್ಥಿಕ ವ್ಯವಹಾರ, ಹಣಕಾಸು ಸೇವೆ, ಸಾರ್ವಜನಿಕ ಉದ್ದಿಮೆ, ಸಾರ್ವಜನಿಕ ಹೂಡಿಕೆ ಮತ್ತು ಆಸ್ತಿ ನಿರ್ವಹಣೆ ಇಲಾಖೆಯನ್ನು ಹೊಂದಿದಂತೆ ಆಗಿದೆ. ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆ ವ್ಯಾಪ್ತಿಗೆ 36 ಸಾರ್ವಜನಿಕ ಉದ್ದಿಮೆಗಳು ಬರುತ್ತವೆ. ಇವುಗಳು ಹಾಗೂ ಈ ಕಂಪನಿಗಳ ಸಬ್ಸಿಡರಿಗಳಿಗೆ ಸಂಬಂಧಿಸಿದ ನೀತಿ ನಿರೂಪಣೆ, ಉತ್ಪಾದನೆಯ ಮೇಲುಸ್ತುವಾರಿ ಇದೀಗ ನೇರವಾಗಿ ವ್ಯಾಪ್ತಿಗೆ ಬರಲಿದೆ. ಈಗಾಗಲೇ ಈ ವಲಯದಲ್ಲಿ ಕೇಂದ್ರ ಸರಕಾರ ತನ್ನ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಆರಂಭಿಸಿದ್ದು, ಈ ಬೆಳವಣಿಗೆ ಬಳಿಕ ಇದು ಮತ್ತಷ್ಡು ವೇಗ ಪಡೆದುಕೊಳ್ಳಲಿದೆ.