ಬೆಂಗಳೂರು ಏರ್‌ಪೋರ್ಟ್‌ ಆಸ್ತಿ ನಗದೀಕರಣಕ್ಕೆ ಎಎಐ ಸಜ್ಜು, ಷೇರು ಹಿಂಪಡೆಯಲಿದೆ ಸರಕಾರ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಶೀಘ್ರದಲ್ಲಿಯೇ ಬೆಂಗಳೂರು ವಿಮಾನ ನಿಲ್ದಾಣದಿಂದ ತನ್ನ ಪಾಲನ್ನು ಹಿಂತೆಗೆದುಕೊಳ್ಳಲಿದೆ. ಏರ್‌ಪೋರ್ಟ್‌ನಲ್ಲಿರುವ ತನ್ನ ಷೇರುಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಮಾರಾಟ ಮಾಡಲಿದೆ.

ಬೆಂಗಳೂರು ಏರ್‌ಪೋರ್ಟ್‌ ಆಸ್ತಿ ನಗದೀಕರಣಕ್ಕೆ ಎಎಐ ಸಜ್ಜು, ಷೇರು ಹಿಂಪಡೆಯಲಿದೆ ಸರಕಾರ
Linkup
ಹೊಸದಿಲ್ಲಿ: ಭಾರತೀಯ ಪ್ರಾಧಿಕಾರ () ಶೀಘ್ರದಲ್ಲಿಯೇ ಬೆಂಗಳೂರು ವಿಮಾನ ನಿಲ್ದಾಣದಿಂದ ತನ್ನ ಪಾಲನ್ನು ಹಿಂತೆಗೆದುಕೊಳ್ಳಲಿದೆ. ಆಸ್ತಿ ನಗದೀಕರಣದ ಭಾಗವಾಗಿ ಏರ್‌ಪೋರ್ಟ್‌ಗಳನ್ನು ಜಂಟಿ ಸಹಭಾಗಿತ್ವದಿಂದ ನಿರ್ಗಮಿಸಲಿದೆ. ಅಂದರೆ ಇಂಥ ವಿಮಾನ ನಿಲ್ದಾಣಗಳಲ್ಲಿರುವ ತನ್ನ ಷೇರುಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾರಾಟ ಮಾಡಲಿದೆ. ಎಎಐ ದಿಲ್ಲಿ ಮತ್ತು ಮುಂಬಯಿ ವಿಮಾನ ನಿಲ್ದಾಣಗಳ ಜಂಟಿ ಸಹಭಾಗಿತ್ವದಲ್ಲಿ (ಜೆವಿ) ಶೇ. 26ರಷ್ಟು ಷೇರುಗಳನ್ನು ಹೊಂದಿದೆ. ಬೆಂಗಳೂರು ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣದ ಜೆವಿಯಲ್ಲಿ ತಲಾ ಶೇ. 13ರಷ್ಟು ಷೇರುಗಳನ್ನು ಹೊಂದಿದೆ. ಮೊದಲು ಬೆಂಗಳೂರು ಮತ್ತು ಹೈದರಾಬಾದ್‌ ನಿಲ್ದಾಣದಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತನ್ನ ಪಾಲನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸಂಪುಟ ಟಿಪ್ಪಣಿ ರಚನೆಯಾಗಿರುವುದಾಗಿ ವರದಿಯಾಗಿದೆ. ಎರಡನೆಯ ಹಂತದಲ್ಲಿ ಮುಂಬಯಿ ಮತ್ತು ದಿಲ್ಲಿ ವಿಮಾನ ನಿಲ್ದಾಣದ ಆಸ್ತಿ ನಡೆಯುವ ನಿರೀಕ್ಷೆ ಇದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಂಡಳಿಯು ಇತ್ತೀಚೆಗೆ 13 ಏರ್‌ ಪೋರ್ಟ್‌ಗಳ ಖಾಸಗೀಕರಣಕ್ಕೆ ಹಸಿರು ನಿಶಾನೆ ತೋರಿಸಿತ್ತು. 6 ದೊಡ್ಡ ಏರ್‌ಪೋರ್ಟ್‌ಗಳ ಜತೆ 7 ಸಣ್ಣ ಏರ್‌ ಪೋರ್ಟ್‌ಗಳನ್ನು ಸಂಯೋಜಿಸಿ ಪಿಪಿಪಿ (ಸರಕಾರಿ ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಖಾಸಗೀಕರಣಕ್ಕೆ ಸಮ್ಮತಿಸಲಾಗಿತ್ತು. ಎಎಐ ಷೇರು ಮಾರಾಟದಿಂದ 10,000 ಕೋಟಿ ರೂ. ನಿರೀಕ್ಷೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಖಾಸಗಿ ಸಹಭಾಗಿತ್ವದ ಜೆವಿ ಏರ್‌ಪೋರ್ಟ್‌ಗಳಿಂದ ತನ್ನ ಷೇರುಗಳ ಮಾರಾಟದ ಮೂಲಕ 10,000 ಕೋಟಿ ರೂ. ಗಳನ್ನು ಸರಕಾರ ಗಳಿಸುವ ನಿರೀಕ್ಷೆ ಇದೆ. ಒಟ್ಟು 25 ವಿಮಾನ ನಿಲ್ದಾಣಗಳನ್ನು ನಗದೀಕರಣಕ್ಕಾಗಿ ಗುರುತಿಸಲಾಗಿದೆ. ಶೇ. 18 ಆಸ್ತಿಗಳನ್ನು ನಗದೀಕರಣಗೊಳಿಸಲಾಗುತ್ತಿದೆ. ಈ ಮೂಲಕ 2022-25ರಲ್ಲಿ 20,782 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಇದೆ. ಕೇವಲ ಕೆಲವು ಸಾವಿರ ಕೋಟಿ ರೂ.ಗಳಿಗೋಸ್ಕರ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುತ್ತಿರುವ, ಸರಕಾರದ ಷೇರು ಪಾಲನ್ನು ಮಾರಾಟ ಮಾಡುವ ನಿರ್ಧಾರಕ್ಕೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.